ಬಾದ್ಷಾ ಕಿಚ್ಚ ಸುದೀಪ್ ಡಿಕ್ಷನರಿಯಲ್ಲಿ No ಅನ್ನೋ ಪದಕ್ಕೆ ಅರ್ಥವೇ ಇಲ್ಲ ಅನ್ನುವಂತಾಗಿದೆ. ಯೆಸ್.. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಆಗಿ.. ಮಲ್ಟಿ ಟಾಸ್ಕರ್ ಆಗಿ ರಾರಾಜಿಸ್ತಿದ್ದಾರೆ ಆರಡಿ ಕಟೌಟ್. ಸಿನಿಮಾ, ಕ್ರಿಕೆಟ್, ಬಿಗ್ಬಾಸ್ ನಿರೂಪಣೆ, ರೇಸಿಂಗ್.. ಯಾವುದಕ್ಕೂ ಹೇಳಲ್ಲ ನೋ. ಅವ್ರ ಜೀವನೋತ್ಸಾಹ, ಎನರ್ಜಿ, ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳೋ ರೀತಿ ನಿಜಕ್ಕೂ ಅದ್ಭುತ, ಅಮೋಘ, ಅದ್ವಿತೀಯ.
- ಕಿಚ್ಚನ ಡಿಕ್ಷನರಿಯಲ್ಲೇ ಇಲ್ಲ.. ‘No’ ಅನ್ನೋ ಪದಕ್ಕೆ ಅರ್ಥ..!!
- ಅಕ್ಷರಶಃ ಧುರಂಧರ್.. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಕಿಚ್ಚ
- ಮುಂಬೈ ಸ್ಟ್ರೀಟ್ ರೇಸ್.. ಅಸ್ಲಿ ಸ್ಪೀಡ್.. ಅಸ್ಲಿ ಬ್ಲಾಕ್ಬಸ್ಟರ್..!!
- ಸಿನಿಮಾ, ಕ್ರಿಕೆಟ್, ನಿರೂಪಣೆ & ರೇಸಿಂಗ್ಗೆ ಕಿಚ್ಚ c/o ಅಡ್ರೆಸ್
ಸುದೀಪ್.. ಇದು ಬರೀ ಹೆಸರಲ್ಲ. ಅಪ್ಪಟ ಕನ್ನಡದ ಬಿಗ್ಗೆಸ್ಟ್ ಆ್ಯಂಡ್ ಪ್ಯಾನ್ ಇಂಡಿಯಾ ಬ್ರ್ಯಾಂಡ್. ಹಣ, ಆಸ್ತಿ, ಅಂತಸ್ತು ಎಲ್ಲವೂ ಇದ್ದರೂ ಸಹ.. ಕಷ್ಟ ಪಟ್ಟು ಸಂಪಾದಿಸಿದ್ರೆ ಮಾತ್ರ ದಕ್ಕಿದ ಬಿರುದುಗಳಾಗಿವೆ.. ಕಿಚ್ಚ, ಬಾದ್ಷಾ, ಆರಡಿ ಕಟೌಟ್, ಅಭಿನಯ ಚಕ್ರವರ್ತಿ. ಯೆಸ್.. ಕಿಚ್ಚ ಸುದೀಪ್ ಸದ್ಯ ಕಿಂಗ್ ಕಿಚ್ಚನಾಗಿ ಎಲ್ಲೆಡೆ ರಾರಾಜಿಸ್ತಿದ್ದಾರೆ. ಅವರ ತೇಜಸ್ಸು, ಹುಮ್ಮಸ್ಸು ಅದೆಷ್ಟೋ ಮಂದಿಗೆ ಸ್ಫೂರ್ತಿದಾಯಕ.
ಐವತ್ತೈದು ವರ್ಷದ ಕಿಚ್ಚ ಸುದೀಪ್ ಅವರ ಡಿಕ್ಷನರಿಯಲ್ಲೇ ಇಲ್ಲ No ಅನ್ನೋ ಪದಕ್ಕೆ ಅರ್ಥ. ಹೌದು.. ಇವರು ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. 30 ವರ್ಷಗಳ ಸುದೀರ್ಘ ಸಿನಿಮಾ ಜರ್ನಿಯಲ್ಲಿ ಸಾಕಷ್ಟು ಕ್ಷೇತ್ರಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕ, ಗಾಯಕ, ಬರಹಗಾರ.. ಹೀಗೆ 24 ಕ್ರಾಫ್ಟ್ಗಳಲ್ಲಿ ಮಿಂದೆದ್ದಿರೋ ಮಾಸ್ಟರ್ಪೀಸ್ ಬರೀ ಸಿನಿಮಾಗಷ್ಟೇ ಸೀಮಿತ ಆಗಿಲ್ಲ.
ಸಿನಿಮಾ ಜೊತೆಗೆ ಬಿಗ್ಬಾಸ್ ನಿರೂಪಣೆ ಮಾಡೋ ನಂಬರ್ 1 ಹೋಸ್ಟ್ ಅಂದ್ರೆ ತಪ್ಪಾಗಲ್ಲ. ಇಲ್ಲಿಯ ತನಕ ಕಿಚ್ಚನ ಟ್ರ್ಯಾಕ್ ರೆಕಾರ್ಡ್ನ ಯಾರೂ ಟಚ್ ಕೂಡ ಮಾಡಲಾಗಿಲ್ಲ. ಅಷ್ಟರ ಮಟ್ಟಿಗೆ ಆನ್ ಸ್ಪಾಟ್, ಸ್ಪಾಂಟೇನಿಯಸ್ ಆಗಿ ಆ್ಯಂಕರಿಂಗ್ ಮಾಡ್ತಾರೆ ಸುದೀಪ್. ಇವರಿದ್ರೆ ಟಿಆರ್ಪಿ, ಜಿಆರ್ಪಿ, ಟ್ಯಾಮ್ ರೇಟಿಂಗ್ಸ್ ಎಲ್ಲಾ ಪೀಕ್ಗೆ ಹೋಗುತ್ತೆ. ಬಿಗ್ಬಾಸ್ನ ಕಿಚ್ಚನಿಗಾಗಿಯೇ ನೋಡುವ ಬಹುದೊಡ್ಡ ವರ್ಗವಿದೆ.
ಇನ್ನೂ ಕ್ರಿಕೆಟ್ನಲ್ಲಿ ಕಿಚ್ಚ ಪಂಟರ್. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸಿಸಿಎಲ್ ಜೊತೆ ಕೆಸಿಸಿ ಅನ್ನೋ ಟೂರ್ನಮೆಂಟ್ನ ಹುಟ್ಟಿಹಾಕಿದ ಗರಿಮೆ ಸುದೀಪ್ಗಿದೆ. ಇಡೀ ಚಿತ್ರರಂಗವನ್ನ ಒಗ್ಗೂಡಿಸಿಕೊಂಡು ಎಲ್ಲರನ್ನ ಒಟ್ಟಿಗೆ ತೆಗೆದುಕೊಂಡು ಹೋಗುವ ಚಾಕಚಕ್ಯತೆ ಇವರಿಗಿದೆ. ಹಾಗಾಗಿಯೇ ಕರ್ನಾಟಕ ಬುಲ್ಡೋಜರ್ಸ್ ತಂಡದ ಕ್ಯಾಪ್ಟನ್ ಆಗಿ, ಕಪ್ ಕೂಡ ಕರುನಾಡಿಗೆ ತಂದಿದ್ದಾರೆ.
ಇದೀಗ ರೇಸಿಂಗ್ ಅಖಾಡಕ್ಕೂ ಇಳಿದಿರೋ ಕಿಚ್ಚ ಸುದೀಪ್ & ಪ್ರಿಯಾ ಸುದೀಪ್.. ಸದ್ಯ ಇಂಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಗೋವಾದಲ್ಲಿ ನಡೆದ ಇಂಡಿಯನ್ ರೇಸಿಂಗ್ ಫೆಸ್ಟಿವಲ್ನಲ್ಲಿ ಭಾಗಿಯಾಗಿದ್ದ ಸುದೀಪ್ & ಟೀಂ ಎಲ್ಲರ ದಿಲ್ ದೋಚಿತ್ತು. ಹೌದು.. ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಮಾಲೀಕನಾಗಿರೋ ಸುದೀಪ್, ಗೋವಾದಲ್ಲಿ ಅದ್ರ ಅಸಲಿ ಗತ್ತು ಏನು ಅನ್ನೋದನ್ನ ತೋರಿಸಿದ್ರು. ಇದೀಗ ನವಿ ಮುಂಬೈನಲ್ಲಿ ಇದೇ ಡಿಸೆಂಬರ್ 5 ಹಾಗೂ 6ನೇ ತಾರೀಖು ನಡೆಯಲಿರೋ ಅಸಲಿ ಸ್ಪೀಡ್.. ಅಸಲಿ ಬ್ಲಾಕ್ಬಸ್ಟರ್ ಅನ್ನೋ ಮುಂಬೈ ಸ್ಟ್ರೀಟ್ ರೇಸ್ ಅಖಾಡಕ್ಕೆ ಇಳಿಯುತ್ತಿದೆ ಕಿಚ್ಚನ ಟೀಂ.
ಕೋಲ್ಕತ್ತಾ, ಗೋವಾ, ಬೆಂಗಳೂರು, ಡೆಲ್ಲಿ ಹಾಗೂ ಹೈದ್ರಾಬಾದ್.. ಹೀಗೆ ಐದು ಪ್ರಮುಖ ಟೀಂಗಳು ಇಲ್ಲಿ ಭಾಗಿಯಾಗ್ತಿದ್ದು.. ಈಗಾಗ್ಲೇ ನೋಯ್ಡಾದಲ್ಲಿ ನಡೆದ ರೇಸಿಂಗ್ ವೇಳೆ ಸ್ವತಃ ಕಿಚ್ಚ ಸುದೀಪ್ ಅವರೇ ರೇಸ್ಗೆ ಇಳಿದು ತಾನು ಇದು ಕೂಡ ಮಾಡಬಲ್ಲೆ ಅನ್ನೋದನ್ನ ತೋರಿಸಿದ್ರು. ಕಿಚ್ಚನ ಟೀಂನಲ್ಲಿ ನಾಲ್ಕು ಮಂದಿ ಪ್ರೊಫೆಷನಲ್ ರೇಸರ್ಸ್ ಇದ್ದು.. ಕಪ್ ಗೆಲ್ಲೋ ಸೂಚನೆ ನೀಡಿದ್ದಾರೆ. ಆದ್ರೆ ಕಿಚ್ಚ ಮುಂಬೈನ ಫಿನಾಲೆಯಲ್ಲಿ ಟ್ರ್ಯಾಕ್ನಿಂದ ಹೊರಗಿದ್ದು ತಮ್ಮ ಕಿಚ್ಚಾಸ್ ಕಿಂಗ್ ಬೆಂಗಳೂರು ಟೀಂಗೆ ಸಪೋರ್ಟ್ ಮಾಡಲಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





