ಪ್ರಶಾಂತ್. ಎಸ್
ಭಾರತೀಯ ಚಿತ್ರರಂಗದ ಟಾಪ್ ಡೈರೆಕ್ಟರ್.. ದೃಶ್ಯ ಕಾವ್ಯದ ಪಿತಾಮಹ.. ಬಿಗ್ ಸ್ಟಾರ್ಸ್, ಬಿಗ್ ಬಜೆಟ್‌ನ ಬ್ಲಾಕ್ಬಸ್ಟರ್ ಚಿತ್ರಗಳನ್ನ ನೀಡಿದ ಒನ್ ಆಂಡ್ ಒನ್ಲಿ ಡೈರೆಕ್ಟರ್ ಅಂದರೆ ಎಸ್.ಎಸ್ ರಾಜಮೌಳಿ. ಮಗಧೀರ, ಈಗ, ಬಾಹುಬಲಿ, ಆರ್ಆರ್ಆರ್ ಸಿನಿಮಾಗಳ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಶುದ್ಧ ವ್ಯಕ್ತಿತ್ವ ಸೆಲೆಬ್ರಿಟಿ ಆಗಿರೋ ರಾಜಮೌಳಿ ಮೇಲೆ ಮೊದಲ ಬಾರಿ ಗಂಭೀರವಾದ ಆರೋಪ ಕೇಳಿಬಂದಿದೆ. ಶಾಕಿಂಗ್ ಏನೆಂದರೆ, ಓರ್ವ ಹೆಂಗಸಿಗಾಗಿ ನನ್ನ ಜೀವನ ಹಾಳು ಮಾಡಿದ ಅಂತ ರಾಜಮೌಳಿ ಸ್ನೇಹಿತ ಉಪ್ಪಾಲಪಾಟಿ ಶ್ರೀನಿವಾಸ್ ರಾವ್, ಡೆತ್ ನೋಟ್ ಹಾಗೂ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎಂದು ವರದಿಯಾಗಿದೆ.
ನಿರ್ದೇಶಕ ರಾಜಮೌಳಿಯ ಸಿನಿರಂಗದ ವೃತ್ತಿ ಜೀವನದಲ್ಲಿ ಮೊದಲ ಬಾರಿ ಆರೋಪ ಹೊತ್ತಿದ್ದಾರೆ. ಹಳೆಯ ಸ್ನೇಹಿತರೊಬ್ಬರು ನನ್ನ ಸಾವಿಗೆ ರಾಜಮೌಳಿ ಕಾರಣ ಅಂತ ಡೆತ್ನೋಟ್ ಬರೆದಿದ್ದಾರೆ. ಸೆಲ್ಫಿ ವಿಡಿಯೋ ಮಾಡಿ ರಾಜಮೌಳಿ ತಮಗೆ ಮೋಸ ಮಾಡಿರುವ ಬಗ್ಗೆ ಸಾಕಷ್ಟು ವಿಚಾರಗಳನ್ನ ಹೇಳಿದ್ದಾರೆ. ಸಿಕ್ಸ್ತ್ ಸೆನ್ಸ್ ಸಿನಿಮಾ ಮಾದರಿ ಬಿಹಾರದಲ್ಲಿ ಪೂಜೆ ಮಾಡಿಸಿದ್ದಾರೆ. ಯಾರಿಗೂ ಗುರುತು ಸಿಗದ ಹಾಗೆ ಮಂತ್ರ ವಿದ್ಯೆ ಕಲಿತಿದ್ದಾರೆ. ಗುಣಶೇಖರ್, ರಾಮ್ ಗೋಪಾಲ್ ವರ್ಮಾ, ವೈವಿಎಸ್ ಚೌಧರಿ, ಸುರಂಧರ್ ರೆಡ್ಡಿ, ಶಂಕರ್ ಸೇರಿದಂತೆ ಬಹುತೇಕರಿಗೆ ಮಾಟ ಮಾಡಿಸಿದ್ದಾರೆ. ಅವರ ಬದುಕು ನಾಶ ಮಾಡಿದ್ದಾರೆ. ಈಗ ಸುಕುಮಾರ್, ಅನಿಲ್ ರವಿಪುಡಿ ಮೇಲೂ ಮಾಟ-ಮಂತ್ರ ಮಾಡಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಡೆತ್‌ನೋಟ್‌ನಲ್ಲಿ ಏನಿದೆ?
ನನಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಬಿಟ್ಟು ಬೇರೆ ಯಾವುದೇ ದಾರಿ ಇಲ್ಲ. 55 ವರ್ಷವಾದರೂ ನಾನು ಸಿಂಗಲ್ ಆಗಿರೋದಕ್ಕೆ ರಾಜಮೌಳಿಯೇ ಕಾರಣ. ನಾವಿಬ್ಬರು ಯಮದೊಂಗ ಚಿತ್ರದವರೆಗೂ ಒಟ್ಟಿಗೆ ಕಲಸ ಮಾಡಿದ್ದೇವೆ. ನಾನು ಮತ್ತು ರಾಜಮೌಳಿ ಎಂಥ ಸ್ನೇಹಿತರು ಎಂಬುದು ಚಿತ್ರರಂಗದ ಬಹಳಷ್ಟು ಮಂದಿಗೆ ಗೊತ್ತು. ಆದರೆ ಓರ್ವ ಮಹಿಳೆಯಿಂದಾಗಿ ನನ್ನ ಬದುಕನ್ನೇ ರಾಜಮೌಳಿ ಸರ್ವನಾಶ ಮಾಡಿದ. ಎಲ್ಲರ ಜೀವನದಲ್ಲಿ ನಡೆಯುವಂತೆ ನಮ್ಮ ಜೀವನದಲ್ಲಿ ಒಬ್ಬ ಮಹಿಳೆಯ ಪ್ರವೇಶ ಆಯ್ತು. ಮೊದಲು ರಾಜಮೌಳಿ, ಆಮೇಲೆ ನಾನು. ನಮ್ಮದು ಒಂಥರಾ ತ್ರೀಕೋನ ಪ್ರೇಮಕಥೆ. ಆಗ ರಾಜಮೌಳಿ ನನಗೆ ನಿನ್ನ ಪ್ರೀತಿಯನ್ನು ತ್ಯಾಗ ಮಾಡು ಎಂದು ಹೇಳಿದ. ನಾನು ನನ್ನ ಪ್ರೀತಿಯನ್ನು ತ್ಯಾಗ ಮಾಡಿದೆ. ನಾನು ನನ್ನ ಪ್ರೀತಿ ತ್ಯಾಗ ಮಾಡಿದ ಮೇಲೆ ಕಿರುಕುಳ ಅನುಭವಿಸಿದೆ.

ಆ ಮಹಿಳೆಯ ಕಾರಣದಿಂದಾಗಿ ನನಗೆ ಯಾವುದೇ ರೀತಿಯಲ್ಲೂ ರಾಜಮೌಳಿ ಸ್ಪಂದಿಸಲಿಲ್ಲ. ಒಬ್ಬ ಸ್ನೇಹಿತನಿಂದ ಹೀಗೆ ಆಯ್ತು ಅಂತ ನನಗೆ ನೋವಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯವನ್ನು ಒದಗಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಇದು ನಮ್ಮ ಮೂರು ಜನರ ನಡುವೆ ಮಾತ್ರವೇ ನಡೆದಿರುವಂತಹದ್ದು. ಯಾವುದೇ ಸಾಕ್ಷ್ಯ ಇಲ್ಲ. ಸುಳ್ಳು ಪತ್ತೆ ಪರೀಕ್ಷೆ ನಡೆಸಿದರೆ ಸತ್ಯ ಆಚೆ ಬರಲಿದೆ.
ಉಪ್ಪಾಲಪಾಟಿ ಶ್ರೀನಿವಾಸ್ ರಾವ್
ಎಸ್.ಎಸ್ ರಾಜಮೌಳಿ ಸ್ನೇಹಿತ

ನಿರ್ದೇಶಕ ರಾಜಮೌಳಿ ಸ್ನೇಹಿತ ಎಂದು ಹೇಳಿಕೊಂಡಿರುವ ಉಪ್ಪಾಲಪಾಟಿ ಶ್ರೀನಿವಾಸ್ ರಾವ್, ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು. ರಾಜಮೌಳಿಯನ್ನ ಲೈ-ಡಿಟೆಕ್ಟರ್ ಬಳಸಿ ವಿಚಾರಣೆ ನಡೆಸಿದರೆ ಸತ್ಯ ಹೊರಬರಲಿದೆ ಎಂದು ಹೇಳಿದ್ದಾರೆ. ಸದ್ಯ ಉಪ್ಪಾಲಪಾಟಿ ಶ್ರೀನಿವಾಸ್ ರಾವ್ ಅವರ ಸೆಲ್ಫಿ ವಿಡಿಯೋ ಹಾಗೂ ಡೆತ್‌ನೋಟ್ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.
ADVERTISEMENT
ADVERTISEMENT