ಗಾಯಕ ಸಂಜಯ್ ನಾಗ್, ಡಾ. ರಾಜ್‌ಕುಮಾರ್ ಅವರ ಗಾಯನದ ಕುರಿತು ವ್ಯಂಗ್ಯವಾಡಿದ ಕಾರಣ ಭಾರೀ ವಿವಾದ ಸೃಷ್ಟಿಯಾಗಿತ್ತು. ಅವರ ಈ ಟ್ವಿಟ್ ವಿರುದ್ಧ ಕನ್ನಡಿಗರು ಕಿಡಿಕಾರಿದ್ದು, ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ತಕ್ಷಣವೇ ತಮ್ಮ ಟ್ವಿಟ್ ಅನ್ನು ಡಿಲೀಟ್ ಮಾಡಿರುವ ಸಂಜಯ್ ನಾಗ್, ಇದೀಗ ಕ್ಷಮೆ ಯಾಚಿಸಿದ್ದಾರೆ.
ಗಾಯಕ ಹೇಳಿದ್ದೇನು
ಡಾ. ರಾಜ್‌ಕುಮಾರ್ ಅವರು ಅದ್ಭುತ ನಟ ಇರಬಹುದು. ಆದರೆ, ಭಯಾನಕ ಗಾಯಕ ಎಂದು ಸಂಜಯ್ ನಾಗ್ ಹೇಳಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಸಂಜಯ್ ನಾಗ್ ಅವರ ಕ್ಷಮಾಪಣೆಯ ಟ್ವಿಟ್
“ಡಾ. ರಾಜ್‌ಕುಮಾರ್ ಅವರ ಬಗ್ಗೆ ನಾನು ಬರೆದ ಮಾತುಗಳಿಗೆ ಮನಃಪೂರ್ವಕ ಕ್ಷಮೆ ಯಾಚಿಸುತ್ತೇನೆ. ನಾನು ಚಿಕ್ಕಂದಿನಿಂದ ಅಣ್ಣಾವ್ರ ಅಭಿಮಾನಿ ಹಾಗೂ ಅಣ್ಣಾವ್ರ ಬಗ್ಗೆ ಅಪಾರವಾದ ಗೌರವವಿದೆ. ನನ್ನ ಉದ್ದೇಶ ಯಾರಿಗೂ ನೋವುಂಟು ಮಾಡುವುದಲ್ಲ. ಅಚಾತುರ್ಯವಾಗಿ ಹೇಳಿದ ಮಾತಿಗೆ ಅಣ್ಣಾವ್ರ ಪ್ರತಿಯೊಬ್ಬ ಅಭಿಮಾನಿ ದೇವ್ರಗೂ ಮತ್ತು ದೊಡ್ಡನೆಯವರಿಗೂ ವೈಯಕ್ತಿಕ ಕ್ಷಮೆ ಯಾಚಿಸುತ್ತೇನೆ.”
ಕನ್ನಡಿಗರ ಆಕ್ರೋಶ
ಸಂಜಯ್ ನಾಗ್ ಅವರ ಕ್ಷಮೆಯಾಚನೆಯು ಕೂಡ ಕನ್ನಡಿಗರ ಅಸಮಾಧಾನವನ್ನು ತಗ್ಗಿಸಿಲ್ಲ. ಕೆಲವರು ಇದನ್ನು ನಕಲಿ ಎಂದು ಕಿಡಿಕಾರಿದ್ದಾರೆ.
ನೂತನ ಎಂಬವರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿ, “ಇದು ಬಿಟ್ಟಿ ಶೋಕಿ ಆಗಿದೆ. ನಿಮಗಿಂತಲೂ ದೊಡ್ಡ ಹೀರೋಗಳು ಎರಡು ವರ್ಷಕ್ಕೊಂದು ಸಿನಿಮಾ ಮಾಡ್ತಾರೆ. ಸಣ್ಣ ವಿವಾದ ಹುಟ್ಟುಹಾಕಿ, ನಂತರ ಕ್ಷಮೆ ಕೇಳುವುದು ಸದ್ದು ಮಾಡೋ ತಂತ್ರ!” ಎಂದು ಹೇಳಿದ್ದಾರೆ.