ಬೆಳ್ಳಿಪರದೆ ಮೇಲೆ ದೈವದ ಶಕ್ತಿಯನ್ನ ಪರಿಚಯಿಸಿ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ನಮ್ಮ ಡಿವೈನ್ ಸ್ಟಾರ್, ಈಗ ನಿಜ ಜೀವನದಲ್ಲೂ ‘ರಿಯಲ್ ಹೀರೋ’ ಆಗಿ ಮಿಂಚುತ್ತಿದ್ದಾರೆ. ಹೌದು.. ಕೇವಲ ಕಥೆ ಹೇಳೋದಲ್ಲ, ಕಷ್ಟದಲ್ಲಿರುವವರ ಬಾಳಿನ ವ್ಯಥೆ ಬದಲಾಯಿಸುತ್ತಿದ್ದಾರೆ ರಿಷಬ್ ಶೆಟ್ಟಿ. ಹಾಗಾದ್ರೆ ಸದ್ದಿಲ್ಲದೇ ನಡೆಯುತ್ತಿರುವ ಆ ‘ಮಹಾನ್’ ಕೆಲಸವೇನು..? ದಿಲ್‌ಖುಷ್ ಆಗಿ ಪ್ರೇರಣೆ ಆಗೋ ಈ ಮ್ಯಾಟರ್ ಏನು?
- ರಿಷಬ್ ಶೆಟ್ಟಿ ಫೌಂಡೇಷನ್ ಮೂಲಕ ಸಮಾಜಸೇವೆ
- ಬಡ ಮಕ್ಕಳ ಶಿಕ್ಷಣಕ್ಕೆ ಆಸರೆಯಾದ ಡಿವೈನ್ ಸ್ಟಾರ್..!
- ಪ್ರತಿಭಾವಂತ ವಿದ್ಯಾರ್ಥಿಗಳ ಕನಸಿಗೆ ರೆಕ್ಕೆ ಕಟ್ಟಿದ ಶೆಟ್ರು
- ಬರ್ತ್ ಡೇ ಸಂದರ್ಭ ಸಾರ್ಥಕ ಕೆಲಸ.. ಜನ ಮೆಚ್ಚುಗೆ
ಸಿನೆಮಾಗಳ ಹವಾ ಒಂದು ಕಡೆಯಾದ್ರೆ, ‘ರಿಷಬ್ ಶೆಟ್ಟಿ ಫೌಂಡೇಷನ್’ ಹೆಸರಿನಲ್ಲಿ ಅವರು ಮಾಡುತ್ತಿರೋ ಕೆಲಸ ಇನ್ನೊಂದು ಕಡೆ. ಬಡ ವಿದ್ಯಾರ್ಥಿಗಳಿಗೆ ಆಸರೆಯಾಗೋದು, ಸರ್ಕಾರಿ ಶಾಲೆಗಳ ದತ್ತು ಪಡೆಯೋದು ಹೀಗೆ… ಗಳಿಸಿದ್ದರಲ್ಲಿ ಒಂದು ಭಾಗವನ್ನ ಸಮಾಜಕ್ಕೆ ಮರಳಿ ನೀಡುವ ಮೂಲಕ, ತಾವೊಬ್ಬ ಕೇವಲ ಕಲಾವಿದನಲ್ಲ, ಸಮಾಜದ ಜವಾಬ್ದಾರಿಯುತ ಪ್ರಜೆಯೂ ಹೌದು ಅಂತ ರಿಷಬ್ ಸಾಬೀತು ಮಾಡಿದ್ದಾರೆ.
ಬಾಲ್ಯದ ಕನಸುಗಳು ಮಾತೃಭಾಷೆಯಲ್ಲೇ ಮೂಡಬೇಕು’ – ಈ ಮಾತು ಕೇವಲ ಅವರ ಸಿನಿಮಾದ ಡೈಲಾಗ್ ಅಷ್ಟೇ ಅಲ್ಲ, ಅವರ ಸಿದ್ಧಾಂತವೂ ಹೌದು. ತಾವೇ ಓದಿದ ಸರ್ಕಾರಿ ಶಾಲೆಗೆ ಹೈಟೆಕ್ ಟಚ್ ನೀಡಿ, ಕಷ್ಟದಲ್ಲಿರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಗ್ರಾಮೀಣ ಶಿಕ್ಷಣದಲ್ಲಿ ರಿಷಬ್ ಶೆಟ್ಟಿ ನಿಜಕ್ಕೂ ಒಂದು ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸುತ್ತಿದ್ದಾರೆ.
ಹೌದು ಈ ಕಣ್ಣೀರು ನೋವಿನದಲ್ಲ, ಕೃತಜ್ಞತೆಯದ್ದು. ತಂದೆಯನ್ನ ಕಳೆದುಕೊಂಡು ಓದು ನಿಲ್ಲಿಸುವ ಹಂತದಲ್ಲಿದ್ದ ಕಾರ್ಮಿಕರ ಮಕ್ಕಳಿಗೆ, ಇವತ್ತು ಆಸರೆಯಾಗಿದ್ದು ರಿಷಬ್ ಶೆಟ್ಟಿ ಫೌಂಡೇಷನ್‌ನ ಸ್ಕಾಲರ್‌ಶಿಪ್. ‘ನನ್ನ ಓದು ಮುಂದುವರಿಯಲು ರಿಷಬ್ ಸರ್ ಕಾರಣ’ ಅಂತ ಕಣ್ಣೀರು ಹಾಕುತ್ತಾ ವಿದ್ಯಾರ್ಥಿಗಳು ಹೇಳುತ್ತಿದ್ದರೆ, ಅವರ ಪಾಲಿನ ದೇವರು ರಿಷಬ್ ಅಂತ ಅನ್ನಿಸದೇ ಇರಲ್ಲ,
ರಿಷಬ್ ಇಷ್ಟೊಂದು ಮೃದು ಹೃದಯಿ ಯಾಕಂದ್ರೆ, ಅವರು ಮೇಲೆ ಬಂದಿದ್ದು ಬಲು ಕಷ್ಟಪಟ್ಟು. ಬಡತನದ ನೋವು, ಕಷ್ಟದ ಬೆಲೆ ಅವರಿಗೆ ಚೆನ್ನಾಗಿ ಗೊತ್ತು. ಅದಕ್ಕೆ ಅಲ್ವಾ, ಕಷ್ಟದಲ್ಲಿರುವವರನ್ನ ಕಂಡರೆ ಅವರ ಹೃದಯ ಮಿಡಿಯುತ್ತೆ. ಬೆಳೆದು ಬಂದ ದಾರಿಯನ್ನು ಮರೆಯದ ರಿಷಬ್, ಇವತ್ತು ಸಾವಿರಾರು ಕುಟುಂಬಗಳಿಗೆ ಆಶಾಕಿರಣವಾಗಿದ್ದಾರೆ, ಕಾಂತಾರ ಮೂಲಕ ಕರಾವಳಿಯ ಸೊಗಡನ್ನು ಜಗತ್ತಿಗೆ ತೋರಿಸಿದ ರಿಷಬ್, ಈಗ ಸಾಮಾಜಿಕ ಕೆಲಸಗಳ ಮೂಲಕ ಮಾನವೀಯತೆಯನ್ನ ಮೆರೆದಿದ್ದಾರೆ.ರಿಷಬ್ ಕೇವಲ ‘ಡಿವೈನ್ ಸ್ಟಾರ್’ ಅಷ್ಟೇ ಅಲ್ಲ, ಎಲ್ಲರಿಗೂ ಮಾದರಿ ರಿಯಲ್ ಸ್ಟಾರ್
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





