ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಕಾಮನ್ ಮ್ಯಾನ್ ಮಹಾ ಸಂಕಲ್ಪ. ಯೆಸ್.. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ನಿರ್ದೇಶನದ ಹಾಗೂ ಕೆರೆ ಬೇಟೆ ಫೇಮ್ ಗೌರಿಶಂಕರ್ ಲೀಡ್‌ನಲ್ಲಿ ನಟಿಸಿರೋ ಕಾಮನ್ ಮ್ಯಾನ್ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಇದೇ ಸೆಪ್ಟೆಂಬರ್ 25ಕ್ಕೆ ಪ್ರೇಕ್ಷಕರ ಮುಂದೆ ಬರೋಕೆ ರೆಡಿಯಾಗಿರೋ ಈ ಸಿನಿಮಾ, ಪ್ರಮೋಷನ್ಸ್‌ಗೆ ಬಂಡೆ ಮಹಾಕಾಳಿ ಆಲಯದಲ್ಲಿ ಚಾಲನೆ ನೀಡಿತು. ಅದ್ರಲ್ಲೂ ಟ್ಯಾಬ್ಲೋಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಚಾರಕ್ಕೆ ಕಳುಹಿಸಲಾಯಿತು. ಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಮುಖ್ಯಮಂತ್ರಿ ಆದ್ರೆ ಹೇಗಿರುತ್ತೆ ಅನ್ನೋ ಎಳೆಯನ್ನ ಇಟ್ಕೊಂಡು ಕಥೆ ಬರೆದು, ಸುರಭಿ ಫಿಲಂಸ್ ಬ್ಯಾನರ್‌ನಡಿ ಎನ್. ನರಸಿಂಹಮೂರ್ತಿ ನಿರ್ಮಿಸಿದ್ದಾರೆ.
ಒಟ್ಟು ಎರಡು ಟ್ಯಾಬ್ಲೋಗಳನ್ನ ಪ್ರಚಚಾರಕ್ಕಾಗಿ ಬಿಡಲಾಗಿದ್ದು.. ಒಂದು ಉತ್ತರ ಕರ್ನಾಟಕ, ಮತ್ತೊಂದು ಮೈಸೂರು- ಚಾಮರಾಜನಗರ ಭಾಗದಲ್ಲಿ ಸಂಚರಿಸಲಿದೆ. ಚಿತ್ರದಲ್ಲಿ ಒಳ್ಳೆ ಕಂಟೆಂಟ್ ಇದ್ದು, ಸಾಮಾನ್ಯ ಯುವಕನೊಬ್ಬ ಸರ್ಕಾರದ ಮೇಲೆ ಒತ್ತಡ ತಂದು ಹೇಗೆ ಸಿಎಂ ಆಗ್ತಾನೆ..? ರಾಜಕಾರಣಿಗಳಿಂದಲೂ ಆಗದ ಕೆಲಸಗಳನ್ನ ಆತ ಹೇಗೆ ಮಾಡ್ತಾನೆ ಅನ್ನೋದು ಚಿತ್ರದ ಅಸಲಿ ಕಥೆ. ಜೆಜಿ ಕೃಷ್ಣ, ದೀಪಕ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ನಾಯಕಿ ನಟಿ ಸೋನಾ ಲದ್ವಾ, ಸಂಗೀತ ನಿರ್ದೇಶಕ ವಿನಯ ಚಂದ್ರ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.
ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





