ವರಮಹಾಲಕ್ಷ್ಮೀ ಹಬ್ಬದ ದಿನವೇ ಮಾಸ್ ಮಹಾರಾಜ ರವಿತೇಜಾ ಇರುಮುಡಿ ಚಿತ್ರ ಬಿಗ್ಗೆಸ್ಟ್ ಓಪನಿಂಗ್ ಪಡೆದುಕೊಂಡಿದೆ. ಇದು ರವಿತೇಜಾ ಕರಿಯರ್‌ನ ಆಲ್ ಟೈಂ ರೆಕಾರ್ಡ್ ಕೂಡ ಆಗಿದ್ದು, ಸಿನಿಮಾಗೆ ಎಲ್ಲೆಡೆ ಪ್ರಶಂಸೆಗಳ ಸುರಿಮಳೆ ಆಗ್ತಿದೆ. ಹಾಗಾದ್ರೆ ಅಂಥದ್ದೇನಿದೆ ಚಿತ್ರದಲ್ಲಿ..? ಫಸ್ಟ್ ಡೇ ಕಲೆಕ್ಷನ್ ಎಷ್ಟು ಕೋಟಿ..?
ನಟ ರವಿತೇಜಾ ‘ಇರುಮುಡಿ’ಗೆ ಮಾಸ್ ಓಪನಿಂಗ್
ಫಸ್ಟ್ ಡೇ ವರ್ಲ್ಡ್‌ವೈಡ್ ಕಲೆಕ್ಷನ್ 25 ಕೋಟಿ ರೂ..!
ಮಾಸ್ ಮಾಹಾರಾಜ ಕರಿಯರ್ ಬಿಗ್ಗೆಸ್ಟ್ ಓಪನಿಂಗ್
ತಂದೆ-ಮಗಳ ಬಾಂಡ್.. ಅಯ್ಯಪ್ಪ ಭಕ್ತಿ.. ಮಾಸ್ ಶಕ್ತಿ
ಇರುಮುಡಿ.. ಇದು ನಿನ್ನೆಯಷ್ಟೇ ವರಮಹಾಲಕ್ಷ್ಮೀ ಹಬ್ಬದ ವಿಶೇಷ ತೆರೆಕಂಡ ತೆಲುಗಿನ ಸಿನಿಮಾ. ನಟ ಮಾಸ್ ಮಹಾರಾಜ ರವಿತೇಜಾ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಈ ಚಿತ್ರ ವಿಶ್ವದಾದ್ಯಂತ ಬಿಗ್ ಓಪನಿಂಗ್ ಪಡೆದುಕೊಂಡಿದೆ. ಚಿತ್ರ ನೋಡಿದ ಪ್ರೇಕ್ಷಕಪ್ರಭುಗಳೆಲ್ಲಾ ಉತ್ತಮ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳ ಮಹಾಪೂರವೇ ಹರಿಸುತ್ತಿದ್ದಾರೆ. ಇನ್‌ಫ್ಯಾಕ್ಟ್ ಇದು ರವಿತೇಜಾ ಕರಿಯರ್‌ನ ಬಿಗ್ಗೆಸ್ಟ್ ಓಪನಿಂಗ್ ಸಿನಿಮಾ ಎನ್ನಲಾಗ್ತಿದೆ.
152 ನಿಮಿಷಗಳ ರನ್‌ಟೈಂ ಇರೋ ಈ ಸಿನಿಮಾ ಮೊದಲ ದಿನವೇ ವರ್ಲ್ಡ್‌ವೈಡ್ ಸುಮಾರು 24 ಕೋಟಿ 20 ಲಕ್ಷದಷ್ಟು ಬೃಹತ್ ಮೊತ್ತ ಬಾಕ್ಸ್ ಆಫೀಸ್‌ನಲ್ಲಿ ಕಲೆ ಹಾಕಿದೆ. ಇಂಡಿಯಾದಲ್ಲಿ 17 ಕೋಟಿ 20ಲಕ್ಷ ಗಳಿಸಿದ್ರೆ, ವಿದೇಶಿ ಬಾಕ್ಸ್ ಆಫೀಸ್‌ನಲ್ಲಿ 7 ಕೋಟಿ ಬಾಚಿಕೊಂಡಿದೆ. ಅಂದಹಾಗೆ ವರಮಹಾಲಕ್ಷ್ಮೀ ದೊಡ್ಡ ಮಟ್ಟದಲ್ಲಿ ವರ ನೀಡಿದ್ದು, ಟೀಂಗೆ ಒಂಥರಾ ಜಾಕ್‌ಪಾಟ್ ಹೊಡೆದಂತಾಗಿದೆ.
ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾದಲ್ಲಿ ಮಾಸ್ ಮಸಾಲ ಅಂಶಗಳು ಬ್ಲೆಂಡ್ ಆಗಿದ್ದು, ತಂದೆ-ಮಗಳ ಬಾಂಡಿಂಗ್ ಇಂಪ್ರೆಸ್ಸೀವ್ ಆಗಿದೆ. ಅಲ್ಲದೆ, ಟೈಟಲ್‌ಗೆ ತಕ್ಕನಾಗಿ ಅಯ್ಯಪ್ಪ ಸ್ವಾಮಿ ದೀಕ್ಷೆ, ಕಪ್ಪು ಬಟ್ಟೆ, ಕುಡಿತ ಬಿಡುವುದು ಹೀಗೆ ಸಾಕಷ್ಟು ವಿಷಯಗಳ ಮೇಲೆ ಬೆಳಕು ಚೆಲ್ಲಿದೆ. ಎಮೋಷನಲ್ ಎಲಿಮೆಂಟ್ಸ್ ಜೊತೆ ಕಾಮಿಡಿ ಹಾಗೂ ಮಾಸ್ ಮಸಾಲ ಅಂಶಗಳು ಅದ್ಭುತವಾಗಿ ಬೆರೆತಿರೋದ್ರಿಂದ ಒಂದೊಳ್ಳೆ ಎಂಟರ್‌ಟೈನರ್ ಆಗಿ ಹೊರಹೊಮ್ಮಿದೆ ಇರುಮುಡಿ.
ಬೇಬಿ ನಕ್ಷತ್ರ ಇಲ್ಲಿ ರವಿತೇಜಾ ಮಗಳಾಗಿ ಕಾಣಸಿಗಲಿದ್ದು, ನೋಡುಗರು ವ್ಹಾವ್ ಫೀಲ್ ಕೊಡೋ ರೇಂಜ್‌ಗೆ ಪರ್ಫಾಮ್ ಮಾಡಿದ್ದಾರೆ. ಅಲ್ಲದೆ.. ಪ್ರಿಯಾ ಭವಾನಿ ಶಂಕರ್ ನಟ ರವಿತೇಜಾ ಪತ್ನಿಯಾಗಿ ನಾಯಕಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಾಯಿ ಕುಮಾರ್, ಅಜಯ್ ಘೋಷ್, ನಮ್ಮ ಕನ್ನಡದ ರಮೇಶ್ ಇಂದಿರ ಸೇರಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ.
ಕ್ರ್ಯಾಕ್ ಹಾಗೂ ವಾಲ್ಟೈರ್ ವೀರಯ್ಯ ಸಿನಿಮಾಗಳ ಬಳಿಕ ಸಾಲು ಸಾಲು ಸಿನಿಮಾಗಳಿಂದ ಸೋತು ಸುಣ್ಣವಾಗಿದ್ದ ರವಿತೇಜಾಗೆ, ಆ ಶಬರಿಮಲೆ ಅಯ್ಯಪ್ಪಸ್ವಾಮಿಯೇ ಇರುಮುಡಿ ಮೂಲಕ ವಿಜಯದ ಮಾಲೆ ತೊಡಿಸಿದಂತಿದೆ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ.. ಸದಾ ಸಿನಿಮಾಗಳನ್ನ ಮಾಡ್ತಾ ಮುಂದುವರೆದಿರೋ ರವಿತೇಜಾಗೆ ಈ ಗೆಲುವು ಮತ್ತಷ್ಟು ಸಿನಿಮೋತ್ಸಾಹ, ಚೈತನ್ಯವನ್ನ ಹೆಚ್ಚಿಸಿದೆ.





