ರಾಕೆಟ್ ರೀತಿ ಸಕ್ಸಸ್‌ನ ನಾಗಾಲೋಟದಲ್ಲಿರೋ ರಶ್ಮಿಕಾ ಮಂದಣ್ಣ ಕರಿಯರ್, ದಿನದಿಂದ ದಿನಕ್ಕೆ ಮುಗಿಲೆತ್ತರಕ್ಕೆ ಏರುತ್ತಲೇ ಇದೆ. ನಾಲ್ಕೇ ದಿನಕ್ಕೆ ನೂರು ಕೋಟಿ ಗಳಿಸಿದ ನ್ಯಾಷನಲ್ ಕ್ರಶ್ ಥಮಾ ಮೂವಿ ಬ್ಲಾಕ್ ಬಸ್ಟರ್ ಹಿಟ್ ಆದ ಬೆನ್ನಲ್ಲೇ ಮತ್ತೊಂದು ಭರವಸೆಯ ಟ್ರೈಲರ್ ಹೊರಬಂದಿದೆ. ಏನಿದು ಅಂತೀರಾ..? ಓ ಸ್ಟೋರಿ ನೋಡಿ.
ಥಮಾ ಹಿಟ್.. ಗರ್ಲ್‌ಫ್ರೆಂಡ್ ಕಮಿಂಗ್.. ರಶ್ಮಿಕಾ ರಾಕೆಟ್
ನಾಲ್ಕೇ ದಿನಕ್ಕೆ 100 ಕೋಟಿ ಕ್ಲಬ್‌ಗೆ ರಶ್ಮಿಕಾ ಥಮಾ ಮೂವಿ
ನಮ್ಮ ಕರ್ನಾಟಕದ ಕೂರ್ಗ್ ಮೂಲದ ಚೆಲುವೆ ರಶ್ಮಿಕಾ ಮಂದಣ್ಣ ನಸೀಬು ಸಖತ್ ಜೋರಿದೆ. ಸೋಲಿಲ್ಲದ ಸರದಾರಳಾಗಿ ಪ್ಯಾನ್ ಇಂಡಿಯಾ ಪರ್ವ ಆರಂಭಿಸಿರೋ ನ್ಯಾಷನಲ್ ಕ್ರಶ್, ಬ್ಯಾಕ್ ಟು ಬ್ಯಾಕ್ ಹಿಟ್ ಮೂವೀಸ್‌ನ ಕೊಡ್ತಾನೇ ಬರ್ತಿದ್ದಾರೆ. ಸದ್ಯ ಹಿಂದಿಯಲ್ಲಿ ರಿಲೀಸ್ ಆಗಿರೋ ಥಮಾ ಮೂವಿ ನಾಲ್ಕೇ ದಿನಕ್ಕೆ ಗಲ್ಲಾ ಪೆಟ್ಟಿಗೆಯಲ್ಲಿ ಬರೋಬ್ಬರಿ 100 ಕೋಟಿ ಗಳಿಸಿ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ.
ಥಮಾಗೂ ಮೊದಲು ತೆರೆಕಂಡ ಕುಬೇರ, ಛಾವಾ, ಪುಷ್ಪ-2, ಅನಿಮಲ್.. ಹೀಗೆ ಎಲ್ಲವೂ ಬ್ಲಾಕ್ ಬಸ್ಟರ್ ಹಿಟ್‌ಗಳೇ. ಇದ್ರಿಂದ ಆಕೆಯ ಸಂಭಾವನೆ 10 ಕೋಟಿಯಿಂದ 20 ಕೋಟಿಯಷ್ಟು ಏರಿಕೆ ಕೂಡ ಆಗಿದೆಯಂತೆ. ಇದೀಗ ಮತ್ತೊಂದು ರಶ್ಮಿಕಾ ನಟನೆಯ ಟ್ರೈಲರ್ ಬಿಡುಗಡೆ ಅಗಿದ್ದು, ಅದು ಕೂಡ ಸಿಕ್ಕಾಪಟ್ಟೆ ಪ್ರಾಮಿಸಿಂಗ್ ಅನಿಸಿದೆ. ಹೌದು.. ನಮ್ಮ ಕನ್ನಡದ್ದೇ ಪ್ರತಿಭೆ ದೀಕ್ಷಿತ್ ಶೆಟ್ಟಿಯನ್ನ ಬಾಯ್‌ಫ್ರೆಂಡ್ ಮಾಡಿಕೊಂಡಿರೋ ರಶ್ಮಿಕಾ, ಸದ್ಯ ಲವ್ ಮೂಡ್‌ನಲ್ಲಿ ಗರ್ಲ್ ಫ್ರೆಂಡ್ ಆಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
ಗರ್ಲ್‌ಫ್ರೆಂಡ್ ಟ್ರೈಲರ್ ಇಂಪ್ರೆಸ್ಸೀವ್.. ರಶ್ಮಿಕಾ ಲವ್ವಾಯಣ
ಅಬ್ಬಬ್ಬಾ.. ಈ ಕಿರಿಕ್ ಬ್ಯೂಟಿ ಸಕ್ಸಸ್‌ಗೆ ಕೇರ್ ಆಫ್ ಅಡ್ರೆಸ್
ಹದಿ ಹರೆಯದ ಮನಸುಗಳ ಸ್ನೇಹ, ಪ್ರೀತಿ, ಪ್ರೇಮ, ಪ್ರಣಯದ ಕಥೆ ಇದಾಗಿದ್ದು, ಮೇಕಿಂಗ್ ಜೊತೆ ಕಥೆ ಕೂಡ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಈ ಮೂಲಕ ರಶ್ಮಿಕಾ ಕಥೆಗಳ ಆಯ್ಕೆ ನಿಜಕ್ಕೂ ಸೂಪರ್ ಗುರು ಅಂತಿದ್ದಾರೆ ಜನ.
ಈಕೆ ಮಾಡ್ಕೊಳ್ಳೋ ವಿವಾದಗಳು ಎಷ್ಟು ಫೇಮಸ್ ಆಗ್ತಿವೆಯೋ, ಆಕೆ ನಟಿಸಿದ ಚಿತ್ರಗಳು ಅದಕ್ಕಿಂತ ದೊಡ್ಡ ಮಟ್ಟಕ್ಕೆ ಸದ್ದು ಮಾಡ್ತಿರೋದು ವಿಶೇಷ. ಸಕ್ಸಸ್ ವಿಚಾರದಲ್ಲಿ ರಶ್ಮಿಕಾ ರಾಕೆಟ್ ರೀತಿ ನಾಗಾಲೋಟ ಮುಂದುವರೆಸಿದ್ದು, ಒಂದಷ್ಟು ಉರಿಸೋಕೆ ಸಜ್ಜಾಗಿದ್ರೆ, ಗೆಲುವಿನ ಸಿಂಚನದಲ್ಲಿ ಮೆರೆಯುತ್ತಲೇ ಇದ್ದಾರೆ ನ್ಯಾಷನಲ್ ಕ್ರಶ್ ರಶ್ಮಿಕಾ.





