ವಿಜಯ್ ದೇವರಕೊಂಡ ಬ್ರದರ್ ಆನಂದ್ ದೇವರಕೊಂಡ ಕೂಡ ಅಣ್ಣನ ಹಾದಿಯಲ್ಲೇ ಹೆಜ್ಜೆ ಹಾಕುತ್ತಿದ್ದಾರೆ. ಬೇಬಿ ಬ್ಲಾಕ್‌ಬಸ್ಟರ್ ನಂತ್ರ ಮತ್ತೊಂದು ಅಂಥದ್ದೇ ಎಪಿಕ್ ಲವ್ ಸ್ಟೋರಿ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
ಮೈದುನನ ‘ಎಪಿಕ್’ ಲವ್ ಸ್ಟೋರಿಗೆ ಅತ್ತಿಗೆ ರಶ್ಮಿಕಾ ಸಾಥ್..!!
ಬೇಬಿ ಜೋಡಿ ಮೋಡಿ.. ಸತಿ ಪತಿ ಆಗ್ತಾರಾ ಆನಂದ್-ವೈಷ್ಣವಿ?
ರೌಡಿ ವಿಜಯ್ ಹಾದಿಯಲ್ಲೇ ಸಹೋದರ ಆನಂದ್ ಮಿಂಚು
GenZಗೆ ಬೇಕಾಗೋ ಯೂತ್ ಕಂಟೆಂಟ್.. ಮಸ್ತ್ ಮೇಕಿಂಗ್
ಇದು ಇತ್ತೀಚೆಗೆ ನಮ್ಮ ಕನ್ನಡತಿ, ಹೈದ್ರಾಬಾದ್ ಸೊಸೆ, ನ್ಯಾಷನಲ್ ಕ್ರಶ್ ರಶ್ಮಿಕಾ ಲಾಂಚ್ ಮಾಡಿದ ಎಪಿಕ್ ಅನ್ನೋ ತೆಲುಗು ಸಿನಿಮಾದ ಟ್ರೈಲರ್ ಝಲಕ್. ಪಕ್ಕಾ ಯೂತ್‌ಫುಲ್ ಎಂಟರ್‌ಟೈನರ್ ಇದಾಗಿದ್ದು, ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಲೀಡ್‌ನಲ್ಲಿ ನಟಿಸಿದ್ದಾರೆ. ಆನಂದ್‌ಗೆ ಜೋಡಿಯಾಗಿ ಒನ್ಸ್ ಅಗೈನ್ ಬೇಬಿ ಸಿನಿಮಾದ ವೈಷ್ಣವಿ ಚೈತನ್ಯ ಜೋಡಿಯಾಗಿದ್ದು, ಇಬ್ಬರ ಕೆಮಿಸ್ಟ್ರಿ ಈ ಬಾರಿಯೂ ವರ್ಕೌಟ್ ಆಗುವ ಸೂಚನೆ ಸಿಕ್ಕಿದೆ.
ಮೂರು ವರ್ಷಗಳ ಹಿಂದೆ ಬೇಬಿ ಅನ್ನೋ ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಮೂವಿ ನೀಡಿದ್ದ ಆನಂದ್-ವೃಷ್ಣವಿ ಮತ್ತೊಮ್ಮೆ ಈ ಎಪಿಕ್ ಲವ್ ಸ್ಟೋರಿಗಾಗಿ ಒಂದಾಗಿದ್ದಾರೆ. ಇದು ಹಳ್ಳಿ ಹೈದನೊಬ್ಬ ವಿದ್ಯಾಭ್ಯಾಸಕ್ಕಾಗಿ ಫಾರಿನ್‌ಗೆ ತೆರಳಿ, ಅಲ್ಲಿ ಪ್ರೀತಿ, ಪ್ರೇಮ, ಪ್ರಣಯದಲ್ಲಿ ಬೀಳುವ ಇಂಟೆನ್ಸ್ ಲವ್, ಎಮೋಷನಲ್ ಡ್ರಾಮಾ ಆಗಿದೆ. ಯೂತ್‌ಗೆ ಸ್ಟ್ರಾಂಗ್ ಮೆಸೇಜ್ ಕೊಡ್ತಿರೋ ಈ ಸಿನಿಮಾಗೆ ಆದಿತ್ಯ ಹಾಸನ್ ಆ್ಯಕ್ಷನ್ ಕಟ್ ಹೇಳಿದ್ದು, ಇತ್ತೀಚೆಗೆ ರಶ್ಮಿಕಾ ತನ್ನ ಮೈದುನನ ಈ ಎಪಿಕ್ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಮನಸಾರೆ ಹರಸಿ, ಹಾರೈಸಿದ್ರು.
ನಟ ಆನಂದ್ ಕೂಡ ಅಣ್ಣ ವಿಜಯ್ ದೇವರಕೊಂಡ ಹಾದಿಯಲ್ಲೇ ಸಾಗುತ್ತಿದ್ದು, ಕಥೆಗಳ ಆಯ್ಕೆ, ಯೂತ್ ಓರಿಯೆಂಟೆಡ್ ಕಥಾನಕಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರ ಆಗ್ತಿರೋದು ಇಂಟರೆಸ್ಟಿಂಗ್. ಎಪಿಕ್ ಸಿನಿಮಾ ಇದೇ ಸೆಪ್ಟೆಂಬರ್ 11ಕ್ಕೆ ಥಿಯೇಟರ್‌ಗೆ ಲಗ್ಗೆ ಇಡ್ತಿದ್ದು, ಈ ಬಾರಿಯೂ ಸಹ ಹಂಗೆಳೆಯರ ದಿಲ್ ದೋಚುವುದರಲ್ಲಿ ಯಾವುದೇ ಸಂದೇಹವಿಲ್ಲ ಅನ್ನುವಂತಿವೆ ಚಿತ್ರದ ಸ್ಯಾಂಪಲ್ಸ್.
ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ಇಲ್ಲಿ ಹೀರೋ ಆನಂದ್ ದೇವರಕೊಂಡ ಹಾಗೂ ನಟಿ ವೈಷ್ಣವಿ ಕೆಮಿಸ್ಟ್ರಿ ನೆಕ್ಸ್ಟ್ ಲೆವೆಲ್‌ಗಿದೆ. ಅದ್ರಲ್ಲೂ ಇವರುಗಳ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಆಫ್ ಸ್ಕ್ರೀನ್‌ನಲ್ಲೂ ವರ್ಕ್ ಆಗಿದೆ ಎನ್ನಲಾಗ್ತಿದೆ. ಮೂಲಗಳ ಪ್ರಕಾರ ಇವರಿಬ್ಬರೂ ಪರಸ್ಪರ ಸ್ನೇಹ, ಪ್ರೀತಿಯಲ್ಲಿ ಇದ್ದಾರಂತೆ. ವಿಜಯ್ ದೇವರಕೊಂಡ-ರಶ್ಮಿಕಾ ಗೀತ ಗೋವಿಂದಂ ಚಿತ್ರದ ಬಳಿಕ ರೀಲ್‌ನಂತೆ ರಿಯಲ್ ಲೈಫ್‌ನಲ್ಲೂ ಸತಿ ಪತಿ ಆದ್ರು. ಅದೇ ರೀತಿ ಆನಂದ್-ವೈಷು ಕೂಡ ಸಪ್ತಪದಿ ತುಳಿಯುತ್ತಾರಾ ಅನ್ನೋ ಕುತೂಹಲ ಗರಿಗೆದರಿದೆ.
ಒಟ್ಟಾರೆ ತೆರೆ ಮೇಲೆ ಅದೆಷ್ಟೋ ಮಂದಿ ಚಿತ್ರಪ್ರೇಮಿಗಳಿಗೆ ಇವರಿಬ್ಬರೂ ನಿಜವಾಗ್ಲೂ ಕಪಲ್ಸ್ ಆದ್ರೆ ಎಷ್ಟು ಚೆಂದ ಅಲ್ವಾ ಅನಿಸಿದೆ. ಅದನ್ನ ಈ ತಾರಾ ಜೋಡಿ ನಿಜ ಮಾಡುತ್ತಾ ಅನ್ನೋದನ್ನ ಇನ್ನಷ್ಟೇ ಕಾದು ನೋಡಬೇಕಿದೆ.





