ಬಾಲಿವುಡ್‌ನ ಘನತೆ, ಗೌರವ ಎತ್ತಿ ಹಿಡಿದ ಧುರಂಧರ್ ಸ್ಟಾರ್ ರಣ್ವೀರ್ ಸಿಂಗ್‌ನ ಬಿಟೌನ್‌ನಿಂದ ಬ್ಯಾನ್ ಮಾಡಲಾಗಿದೆ. ಈ ಮೂಲಕ ಬೇಕು ಅಂತಲೇ ಕರ್ನಾಟಕದ ಅಳಿಮಯ್ಯನನ್ನ ಟಾರ್ಗೆಟ್ ಮಾಡ್ತಿದೆ ಹಿಂದಿ ಚಿತ್ರರಂಗ ಅನಿಸ್ತಿದೆ. ಡಾನ್-3 ಚಿತ್ರದಿಂದ ಹೊರಬಂದಿದ್ಯಾಕೆ ರಣ್ವೀರ್..? ನಷ್ಟ ಆಗಿದ್ದೆಷ್ಟು ಕೋಟಿ..? ರಣ್ವೀರ್‌ಗೆ ಅಂಕುಶ ಹಾಕೋಕೆ ಮುಂದಾಗಿರೋ ಆ ಮಾಸ್ಟರ್‌ಮೈಂಡ್ ಯಾರು ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ…
- ಬಿಟೌನ್ ಘನತೆ, ಗೌರವ ಎತ್ತಿ ಹಿಡಿದ ಧುರಂಧರ್ ಸ್ಟಾರ್‌ಗೆ ಬ್ಯಾನ್ ಭಾಗ್ಯ
- ರಣ್ವೀರ್ ಸಿಂಗ್ ಟಾರ್ಗೆಟ್.. ಬಾಲಿವುಡ್‌ನಿಂದ ಬ್ಯಾನ್
ಮೂರೇ ಮೂರು ತಿಂಗಳ ಅಂತರದಲ್ಲಿ 3279 ಕೋಟಿ ಬ್ಯುಸಿನೆಸ್ ನೀಡಿದ ಒನ್ ಅಂಡ್ ಓನ್ಲಿ ಬಾಲಿವುಡ್ ಬಾದ್‌ಷಾ ಅಂದ್ರೆ ಅದು ರಣ್ವೀರ್ ಸಿಂಗ್. ಹೌದು.. ಧುರಂಧರ್ ಸರಣಿ ಸಿನಿಮಾಗಳಿಂದ ಸಾವಿರಾರು ಕೋಟಿ ಬ್ಯುಸಿನೆಸ್ ಕೊಟ್ಟು, ಪ್ರಪಾತಕ್ಕೆ ಬೀಳುತ್ತಿದ್ದ ಬಿಟೌನ್‌ನ ಸೌತ್ ದಿನಿದುನಿಯಾದ ಮುಂದೆ ತಲೆ ಎತ್ತುವಂತೆ ಮಾಡಿದ್ರು ರಣ್ವೀರ್. ಸೂಪರ್ ಸ್ಟಾರ್‌ಗಳಿಂದ ಬ್ಲಾಕ್ ಬಸ್ಟರ್ ಹಿಟ್ಸ್ ಇಲ್ಲದೆ ಬರಗಾಲ ಬಂದಂತಿದ್ದ ಬಾಲಿವುಡ್‌ನ ಘನತೆ, ಗೌರವ ಕಾಪಾಡಿದ್ದು ಇದೇ ರಣ್ವೀರ್ ಸಿಂಗ್.
ಹಿಂದಿ ಚಿತ್ರರಂಗದ ಪಾಲಿಗೆ ಓಯಾಸಿಸ್ ಆದಂತಹ ರಣ್ವೀರ್ ಸಿಂಗ್‌ಗೆ ಬಾಲಿವುಡ್ ಕೊಟ್ಟ ರಿಟರ್ನ್ ಗಿಫ್ಟ್ ಏನು ಗೊತ್ತೇ..? ಬ್ಯಾನ್ ಭಾಗ್ಯ. ಯೆಸ್.. ಬಾಲಿವುಡ್ ಚಿತ್ರರಂಗ ನಟ ರಣ್ವೀರ್ ಮೇಲೆ ಯಾವುದೇ ಚಿತ್ರಗಳಲ್ಲಿ ನಟಿಸದಂತೆ ನಿಷೇಧ ಹೇರಿದೆ. ಅಕ್ಷರಶಃ ಆತನನ್ನ ಟಾರ್ಗೆಟ್ ಮಾಡೋ ಮೂಲಕ ಬಿಗ್ ಶಾಕಿಂಗ್ ನ್ಯೂಸ್ ನೀಡಿದೆ. ಸದ್ಯ ರಣ್ವೀರ್ ಬ್ಯಾನ್ ಸುದ್ದಿ ನ್ಯಾಷನಲ್, ಇಂಟರ್‌ನ್ಯಾಷನಲ್ ನ್ಯೂಸ್ ಆಗೋ ಮೂಲಕ ಸಂಚಲನ ಮೂಡಿಸಿದೆ.
- ರಣ್ವೀರ್ ಬ್ಯಾನ್ ಹಿಂದೆ ದಾವೂದ್ ಇಬ್ರಾಹಿಂ ಕೈವಾಡ.?
- ಬಾಲಿವುಡ್‌ಗೆ ಡಿ ಕಂಪನಿಯಿಂದ ಇನ್ನೂ ಸಿಕ್ಕಿಲ್ವಾ ಮುಕ್ತಿ?
ಬಾಲಿವುಡ್ ಚಿತ್ರರಂಗದಿಂದಲೇ ಬ್ಯಾನ್ ಮಾಡುವಂತಹ ತಪ್ಪು ಏನು ಮಾಡಿದ್ರು ರಣ್ವೀರ್ ಸಿಂಗ್..? ಹಿಂದಿ ಚಿತ್ರರಂಗದಲ್ಲಿ ಏನು ನಡೀತಿದೆ..? ಷಡ್ಯಂತ್ರ ನಡೆಸ್ತಿರೋದು ಯಾರು..? ಧುರಂಧರ್ ಸ್ಟಾರ್‌ಗೆ ಅಂಕುಶ ಹಾಕುವ ಹುನ್ನಾರ ನಡೀತಿದ್ಯಾ..? ಇಂದಿಗೂ ಡಿ ಕಂಪನಿ ಬಾಲಿವುಡ್‌ನ ನಿಯಂತ್ರಣ ಮಾಡ್ತಿದ್ಯಾ..? ದಾವೂದ್ ಇಬ್ರಾಹಿಂ ಕಪಿಮುಷ್ಠಿಯಿಂದ ಇನ್ನೂ ಸ್ವತಂತ್ರವಾಗಿಲ್ವಾ ಬಾಲಿವುಡ್..? ಹೀಗೆ ಸಾಕಷ್ಟು ಪ್ರಶ್ನೆಗಳು ಮೂಡುತ್ತಿವೆ.
ಅಂದಹಾಗೆ ಧುರಂಧರ್ ದಿ ರಿವೆಂಜ್ ಚಿತ್ರದಲ್ಲಿ ದಾವೂದ್ ಇಬ್ರಾಹಿಂನ ತೋರಿಸಲಾಗಿತ್ತು. ಆ ಮೋಸ್ಟ್ ವಾಂಟೆಡ್ ಟೆರರಿಸ್ಟ್‌ನ ನೆಟ್‌ವರ್ಕ್, ಆ್ಯಕ್ಟಿವಿಟೀಸ್ ಹಾಗೂ ಹೆಲ್ತ್ ಕಂಡಿಷನ್ ಬಗ್ಗೆ ಸಿನಿಮಾದಲ್ಲಿ ಬಹಿರಂಗವಾಗಿ ತೋರಿಸಲಾಗಿತ್ತು. ಅದೇ ರಣ್ವೀರ್‌ಗೆ ಮುಳುವಾಯ್ತಾ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿವೆ. ಕಾನೂನು ಇಷ್ಟು ಕಟ್ಟುನಿಟ್ಟಾಗಿ ಇದ್ದುಕೊಂಡು, ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದರೂ ಸಹ ದಾವೂದ್ ಬಾಲ ಬಿಚ್ಚುತ್ತಿದ್ದಾರೆ ಅಂದ್ರೆ ಸಾಮಾನ್ಯದ ಮಾತಲ್ಲ. ಸದ್ಯ ರಣ್ವೀರ್ ಮೇಲೆ ಚಿತ್ರರಂಗದಿಂದ ನಿಷೇಧ ಹೇರಿರುವ ಪ್ರಕರಣದಲ್ಲಿ ದಾವೂದ್ ಹೆಸರು ಕೇಳಿಬರ್ತಿರೋದು ಬೇಸರದ ವಿಷಯ.
- ಧುರಂಧರ್ ಹಿಟ್.. ಬಿಟೌನ್ ಕೆಂಗಣ್ಣಿಗೆ ರಣ್ವೀರ್ ಗುರಿ..?
- ‘ಡಾನ್-3’ ಚಿತ್ರದಿಂದ ಎಕ್ಸಿಟ್ ಆಗಿದ್ದೇ ಬ್ಯಾನ್‌ಗೆ ಕಾರಣ
- ಶೂಟಿಂಗ್‌ಗೆ 10ದಿನ ಬಾಕಿ.. 45ಕೋಟಿ ಪರಿಹಾರಕ್ಕೆ ಪಟ್ಟು
- ಫರ್ಹಾನ್ ಅಖ್ತರ್‌ಗೆ ಸಿನಿ ಕಾರ್ಮಿಕರ ಒಕ್ಕೂಟ ಸಾಥ್..!
ಧುರಂಧರ್ ಸರಣಿ ಸಿನಿಮಾಗಳನ್ನ ಮುಗಿಸಿದ ಬಳಿಕ ರಣ್ವೀರ್ ಸಿಂಗ್ ಡಾನ್-3 ಸಿನಿಮಾಗೆ ತಯಾರಿ ನಡೆಸ್ತಿದ್ರು. ಡಾನ್ ಫ್ರಾಂಚೈಸ್ ಸಿನಿಮಾ ಡಾನ್-3 ಟೈಟಲ್ ಅನೌನ್ಸ್‌ಮೆಂಟ್ ಟೀಸರ್ ಕೂಡ ಅಫಿಶಿಯಲಿ ಲಾಂಚ್ ಮಾಡಲಾಗಿತ್ತು. ಫರ್ಹಾನ್ ಅಖ್ತರ್ ಅದನ್ನ ನಿರ್ದೇಶಿಸಿ, ಎಕ್ಸೆಲ್ ಎಂಟರ್‌ಟೈನ್ಮೆಂಟ್ ಜೊತೆಗೂಡಿ ಸಹ ನಿರ್ಮಾಣ ಮಾಡೋದಾಗಿ ಫೈನಲ್ ಆಗಿತ್ತು. ಆದ್ರೀಗ ದಿಢೀರ್ ಅಂತ ಡಾನ್-3 ಸಿನಿಮಾದಿಂದ ಹೊರಬಂದಿದ್ದಾರೆ ರಣ್ವೀರ್.
ಸಿನಿಮಾ ಶೂಟಿಂಗ್‌ಗೆ ಇನ್ನೂ ಕೇವಲ 10 ದಿನಗಳ ಕಾಲ ಬಾಕಿ ಉಳಿದಿದ್ದ ಈ ಕಾಲಘಟ್ಟದಲ್ಲಿ ಸಿನಿಮಾದಿಂದ ಹೊರನಡೆದ ರಣ್ವೀರ್ ಸಿಂಗ್ ನಡೆಯನ್ನ ವಿರೋಧಿಸಿ, ನಿರ್ದೇಶಕರ ಸಂಘದಲ್ಲಿ ಫರ್ಹಾನ್ ಅಖ್ತರ್ ಪ್ರಕರಣ ದಾಖಲಿಸಿದ್ರು. ಈ ಕುರಿತು FWICE.. ಅಂದ್ರೆ ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಸಂಸ್ಥೆಯು ಸುದ್ದಿಗೋಷ್ಠಿ ನಡೆಸಿ, ರಣ್ವೀರ್ ಸಿಂಗ್‌ಗೆ ಕಾರ್ಮಿಕರ ಒಕ್ಕೂಟ ಅಸಹಕಾರ ತೋರುವುದಾಗಿ ಅಧಿಕೃತ ಘೋಷಿಸಿದೆ.
ಡಾನ್-3 ಸಿನಿಮಾದ ಪ್ರೀ-ಪ್ರೊಡಕ್ಷನ್ ಕಾರ್ಯಗಳಿಗೆ ಹಾಗೂ ಲೊಕೇಷನ್ ಹಂಟಿಂಗ್ ಸೇರಿದಂತೆ ಮೊದಲ ಹಂತದ ಶೂಟಿಂಗ್‌ಗೆ ಎಂಟ್ರಿ ಆಗೋಕೆ ತುದಿಗಾಲಲ್ಲಿದ್ದ ಫರ್ಹಾನ್ ಅಖ್ತರ್, ಇಲ್ಲಿಯ ತನಕ ಸುಮಾರು 45 ಕೋಟಿ ರೂಪಾಯಿ ಖರ್ಚು ಮಾಡಿದ್ದಾರಂತೆ. ಕೊನೆ ಗಳಿಗೆಯಲ್ಲಿ ರಣ್ವೀರ್ ವಾಕ್ ಔಟ್ ಮಾಡಿದ್ರೆ ಸಿನಿಮಾದ ಕಥೆ ಏನಾಗಬೇಕು..? ನಷ್ಟ ತುಂಬಿಕೊಟ್ಟು ಹೋಗಲಿ ಅಂತ ಪಟ್ಟು ಹಿಡಿದಿದ್ದಾರೆ. ಅದಕ್ಕೆ ಸಿನಿಮಾ ಕಾರ್ಮಿಕರ ಒಕ್ಕೂಟ FWICE ಕೂಡ ಬೆನ್ನೆಲುಬಾಗಿ ನಿಂತಿದ್ದು, ಸಮಸ್ಯೆ ಇತ್ಯರ್ಥ ಆಗೋ ತನಕ ರಣ್ವೀರ್ ನಟಿಸುವಂತಿಲ್ಲ ಅಂತ ಖಡಕ್ ಆಗಿ ಹೇಳಿಕೆ ಕೂಡ ನೀಡಿದೆ.
- ಸಂಧಾನಕ್ಕಿಲ್ಲ ಸಿದ್ಧ.. ಮೌನಕ್ಕೆ ಜಾರಿದ ಕನ್ನಡದ ಅಳಿಮಯ್ಯ
- ಟೀಂ ಮೇಲೆ ಗೌರವವಿದೆ.. ಡಾನ್-3ಗೆ ಶುಭವಾಗಲಿ- ಟೀಂ RS
ಸಿನಿ ಕಾರ್ಮಿಕರ ಒಕ್ಕೂಟ ರಣ್ವೀರ್ ಸಿಂಗ್‌ಗೆ ನೋಟಿಸ್ ನೀಡಿತ್ತು. ಆದ್ರೆ ರಣ್ವೀರ್ ಕಡೆಯಿಂದ ಒಕ್ಕೂಟಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಾತುಕತೆಗೆ ಕರೆದರೂ ಬಂದಿಲ್ಲ. ಇದನ್ನೆಲ್ಲಾ ಚರ್ಚಿಸೋಕೆ ಸೂಕ್ತ ವೇದಿಕೆ ಇದಲ್ಲ ಅಂತ ಮೌನಕ್ಕೆ ಜಾರಿದ್ರು ರಣ್ವೀರ್ ಸಿಂಗ್. ಆದ್ರೆ ರಣ್ವೀರ್, ತಮ್ಮ ಟೀಂ ಮೂಲಕ ಈ ಬಗ್ಗೆ ತಮ್ಮ ನಿಲುವು ಏನು ಅನ್ನೋದ್ರ ಸಂದೇಶವನ್ನ ರವಾನಿಸಿದ್ದಾರೆ. ಕಾಲ ಕಾಲಕ್ಕೆ ನಮ್ಮ ಸುತ್ತ ಹಲವು ಕಥೆ, ವದಂತಿಗಳು ಸೃಷ್ಠಿಯಾಗುತ್ತಲೇ ಇರುತ್ತವೆ. ಆದ್ರೆ ಸಾರ್ವಜನಿಕವಾಗಿ ಅವುಗಳಿಗೆ ಪ್ರತಿಕ್ರಿಯಿಸುವುದು, ಅನಗತ್ಯ ಚರ್ಚೆಗಳಿಗೆ ದಾರಿ ಮಾಡಿಕೊಡುವುದು ರಣ್ವೀರ್‌ಗೆ ಇಷ್ಟ ಇಲ್ಲವಂತೆ.
ಇಂತಹ ವಿಷಯಗಳನ್ನ ಬಹಳ ಪ್ರಬುದ್ಧವಾಗಿ ಹಾಗೂ ಪರಸ್ಪರ ಗೌರವದಿಂದ ನಿರ್ವಹಿಸಬೇಕು ಎನ್ನುವುದು ರಣ್ವೀರ್ ಸಿಂಗ್ ಉದ್ದೇಶವಾಗಿದೆ. ಅಲ್ಲದೆ, ಡಾನ್ ಫ್ರಾಂಚೈಸ್ ಜೊತೆ ಗುರ್ತಿಸಿಕೊಂಡ ಪ್ರತಿಯೊಬ್ಬರ ಮೇಲೆ ರಣ್ವೀರ್‌ಗೆ ಗೌರವವಿದೆ. ಡಾನ್ ಸೀರೀಸ್ ಯಶಸ್ಸನ್ನು ಮುಂದುವರೆಸಿಕೊಂಡು ಹೋಗಲಿ ಅನ್ನೋದು ರಣ್ವೀರ್ ಆಶಯವಾಗಿದೆಯಂತೆ.
ಒಟ್ಟಾರೆ ಮಾತುಕತೆಗೆ ಬಂದ್ರೆ ನಾವು ಸದಾ ಸಿದ್ಧ ಎಂದಿರೋ ಕಾರ್ಮಿಕರ ಒಕ್ಕೂಟ, ಇದನ್ನ ಸಂಧಾನ ಮಾಡುವ ಮೂಲಕ ಬಗೆಹರಿಸುತ್ತಾ ಇಲ್ವಾ ಅನ್ನೋದನ್ನ ಕಾದು ನೋಡಬೇಕಿದೆ. ಕರಣ್ ಜೋಹರ್ ನಿರ್ಮಾಣದ ತಖ್ತ್, ಶಂಕರ್ ನಿರ್ದೇಶನದ ಅನ್ನಿಯನ್ ರಿಮೇಕ್ ಮೂವಿ, ಹನುಮಾನ್ ಡೈರೆಕ್ಟರ್ ಪ್ರಶಾಂತ್ ವರ್ಮಾ ಜೊತೆಗಿನ ರಾಕ್ಷಸ್, ಸಂಜಯ್ ಲೀಲಾ ಬನ್ಸಾಲಿಯ ಬೈಜೂ ಬವರಾ ಚಿತ್ರಗಳು ಕಾರಣಾಂತರಗಳಿಂದ ನಿಂತು ಹೋಗಿದ್ದವು. ಅವುಗಳ ಸಾಲಿಗೆ ಡಾನ್-3 ಸೇರಿರೋದು ವಿಪರ್ಯಾಸ. ಧುರಂಧರ್ ಚಿತ್ರಗಳ ಸಕ್ಸಸ್ ನೋಡಿ ಹೊಟ್ಟೆ ಕಿಚ್ಚಿನಿಂದ ಹೀಗೆ ಮಾಡ್ತಿದ್ದಾರಾ..? ಡಾನ್-3ನಿಂದ ಹೊರಬರೋಕೆ ಕಾರಣವಾದ ಆ ಹಿಡನ್ ಅಂಶಗಳಾದ್ರೂ ಏನು ಅನ್ನೋದು ರಣ್ವೀರ್ ಬಾಯಿ ಬಿಟ್ಟರಷ್ಟೇ ಹೊರಬೀಳಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





