ಬಿಸಿನೆಸ್ ಮ್ಯಾನ್ ಆಗಿ ಟರ್ನ್ ಆದ ಬಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟ. ಕ್ಲೋತಿಂಗ್ ಬ್ರಾಂಡ್ ಗೆ ಮಾಲೀಕರಾದ ರಿಷಿ ಕಪೂರ್ ಮಗ. ಸಾಲು ಸಾಲು ಅವಾರ್ಡ್ ಗಳ ಸರದಾರ arksನ ಯಜಮಾನ. ಯೆಸ್.. ಕಪೂರ್ ಪ್ಯಾಮಿಲಿಯ ಕುಡಿ ರಾಜ್ ಕಪೂರ್ ನ ಮೊಮ್ಮಗ ರಿಷಿ ಕಪೂರ್ ಮಗ, ಸದ್ಯ ಬಾಲಿವುಡ್ ಅಂಗಳದ ಸುರ ಸುಂದರ ರಣ್‌ಬೀರ್ ಕಪೂರ್. ಬಾಲಿವುಡ್ ನಲ್ಲಿ ಅತ್ಯಧಿಕ ಸಂಭಾವನೆ ಗಳಿಸೋ ರಣ್‌ಬೀರ್ ಕಪೂರ್, ತನ್ನ ನಟನೆಗಾಗಿ ಸಾಲು ಸಾಲು ಪಶಸ್ತಿಗಳನ್ನ ಬಾಚಿಕೊಂಡಿರೋ ಪ್ರತಿಭಾವಂತ. ಇವ್ರು ಇತ್ತೀಚೆಗೆ ಲೈಫ್ ಸ್ಟೈಲ್ ಕ್ಲೋತಿಂಗ್ ಬ್ರಾಂಡ್ ಒಂದಕ್ಕೆ ಮಾಲೀಕರಾಗಿದ್ದಾರೆ.
ಸ್ಟಾರ್ ಕಿಡ್ ಆಗಿರೋ ಇವ್ರು, ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದು 2007ರಲ್ಲಿ. ಬನ್ಸಾಲಿ ನಿರ್ದೇಶನದ ಸಾವರಿಯ ಚಿತ್ರದಿಂದ ಅನ್ನೋದು ಎಲ್ಲರಿಗೂ ಗೊತ್ತೇಯಿದೆ. ಭಾರತದ ಮೊದಲ ಹಾಲಿವುಡ್ ಸ್ಟುಡಿಯೋ ನಿರ್ಮಾಣ ಸಿನಿಮಾ ಕೂಡ ಹೌದು. ಅಂದುಕೊಂಡಷ್ಟು ಖ್ಯಾತಿ ಚಿತ್ರ ಪಡಯಲಿಲ್ಲ. ಆದ್ರೆ ರಣ್‌ಬೀರ್ ಕರಿಯರ್ ನ ಸಾಲು ಸಾಲು ಹಿಟ್ ಚಿತ್ರಗಳಿಗೆ ಈ ಸಿನಿಮಾ ಮುನ್ನುಡಿ ಬರೆಯಿತು.
ದೀಪಿಕಾ ಪಡುಕೋಣೆ ಜೊತೆ ನಟಿಸಿದ ಬಚ್ನಾ ಹೇ ಹಸೀನೋ ಚಿತ್ರ ರಣ್‌ಬೀರ್ ಸಿನಿ ಲೈಫ್ ನ ದಿ ಫಸ್ಟ ಸಕ್ಸಸ್ ಮೂವಿ. ಅದಾದ ಬಳಿಕ ಅಜಬ್ ಪ್ರೇಮ್ ಕಿ ಘಜಬ್ ಕಹಾನಿ ಅನ್ನೋ ಕಾಮಿಡಿ ಚಿತ್ರ ಬಾಕ್ಸ್ ಆಫಿಸ್ ನಲ್ಲಿ ಕಮಾಲ್ ಮಾಡಿತು. ತದ ನಂತರ ಅವ್ರು ಆಯ್ಕೆ ಮಾಡಿಕೊಂಡ ಪಾತ್ರಗಳು, ಅಭಿನಯಕ್ಕೆ ನೀಡಿದ ಪ್ರಾಮುಖ್ಯತೆ, ಸಾಲು ಸಾಲು ಅರ್ವಾರ್ಡ್ ಗಳನ್ನ ತನ್ನದಾಗಿಸಿಕೊಳ್ಳೋ ಹಾದಿಯನ್ನ ಸುಲಭ ಮಾಡಿಕೊಡ್ತು ಅಂದ್ರೆ ತಪ್ಪಾಗಲ್ಲ. ರಾಕ್ ಸ್ಟಾರ್, ಬರ್ಫಿ, ಸಂಜು, ಅನಿಮಲ್ ಹೀಗೆ ಹಲವು ಚಿತ್ರಗಳ ನಟನೆಗೆ ಬೆಸ್ಟ ಆ್ಯಕ್ಟರ್ ಅರ್ವಾಡ್ ಮುಡಿಗೆರಿಸಿಕೊಂಡಿರೋ ರಣ್‌ಬೀರ್ ಸದ್ಯಕ್ಕೆ ತಮ್ಮ ಲೈಫ್ ಸ್ಟೈಲ್ ಕ್ಲಾತಿಂಗ್ ಬ್ರ್ಯಾಂಡ್ ಕಂಪನಿಯಾದ arksನ ಪಬ್ಲಿಸಿಟಿಯಲ್ಲಿ ಬ್ಯೂಸಿಯಾಗಿದ್ದಾರೆ.
ಬಾಲಿವುಡ್ ನ ಆ್ಯಕ್ಟರ್ ಕಮ್ ಬ್ಯುಸಿನೆಸ್ ಮ್ಯಾನ್, ಟ್ರೆಂಡ್ ಗೆ ತಕ್ಕನಾಗಿ ರೇಸ್ ಗೆ ಅಫಿಶಿಯಲಿ ಇಳಿದಿದ್ದಾರೆ. ಹೌದು.. ಬಾಲಿವುಡ್ ನ ನಟ ಮತ್ತು ನಟೀಮಣಿಯರು ತಮ್ಮ ಆ್ಯಕ್ಟಿಂಗ್ ವೃತ್ತಿಯೊಂದಿಗೆ ಆಂಟ್ರಪ್ರನೋರ್ಶಿಪ್ ನ ಪ್ರವೃತ್ತಿಯಾಗಿ ತೆಗೆದುಕೊಂಡು, ಜಗಮಗಿಸ್ತಿರೋದು ಹೊಸತೇನಲ್ಲ. ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಹೃತಿಕ್ ರೋಷನ್, ಸೋನಂ ಕಪೂರ್, ಆಲಿಯಾ ಭಟ್ ಹೀಗೆ ಹಲವಾರು ಮಂದಿ ಸ್ಟಾರ್ಸ್ ಸಾಲಿಗೆ ಇದೀಗ ರಣ್‌ಬೀರ್ ಎಂಟ್ರಿ ಆಗಿದ್ದಾರೆ.
Arks.. ರಣ್‌ಬೀರ್ ಕಪೂರ್ ಶುರು ಮಾಡಿರೋ ಇದೊಂದು ಹೊಸ ಲೈಫ್ ಸ್ಟೈಲ್ ಕ್ಲಾತಿಂಗ್ ಬ್ರ್ಯಾಂಡ್ ಆಗಿದ್ದು, ಸದ್ಯಕ್ಕೆ ಫೂಟ್ವೇರ್ ಹಾಗೂ ಹೈ ಎಂಡ್ ಶೂಗಳನ್ನ ಗ್ರಾಹಕರಿಗೆ ನೀಡೋಕೆ ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ಟೇಲರ್ ಮೇಡ್ ಶರ್ಟ್, ಟೀ ಶರ್ಟ್ ಮತ್ತು ಪ್ಯಾಂಟ್ ಗಳನ್ನ ಕೂಡ ನೀಡಲಿದೆ.
ರಣ್‌ಬೀರ್ ಕಪೂರ್ ಕೈ ಹಾಕಿರೋ ಈ ನ್ಯೂ ಬ್ಯುಸಿನೆಸ್ ಗೆ ಇಡೀ ಬಾಲಿವುಡ್ ಶುಭ ಕೋರ್ತಿದೆ. ಅದ್ರಲ್ಲೂ ಬಾಲಿವುಡ್ ಶೆಹೆನ್ ಷಾ ಬಿಗ್ ಬಿ ಅಮಿತಾಬ್ ಬಚ್ಚನ್ ಅಂತಹ ಲಿವಿಂಗ್ ಲೆಜೆಂಡ್, ಸ್ವತಃ ಸೋಶಿಯಲ್ ಮೀಡಿಯಾ ಮೂಲಕ ಮೋಸ್ಟ್ ಟ್ರೆಂಡಿಂಗ್ ಆ್ಯಕ್ಟರ್ ರಣ್‌ಬೀರ್ ಗೆ ಶುಭಾಶಯ ತಿಳಿಸಿದ್ದಾರೆ. ಅಂದಹಾಗೆ ಅಮಿತಾಬ್ ಗೆ ಸ್ನೀಕರ್ಸ್ ಅಂದ್ರೆ ತುಂಬಾ ಇಷ್ಟವಂತೆ. ಹಾಗಾಗಿ ಬಿಗ್ ಬಿಗೆ ತಮ್ಮ ಹೊಸ ಬ್ರ್ಯಾಂಡ್ ನ ಸ್ನೀಕರ್ಸ್ ನ ಗಿಫ್ಟ್ ಮಾಡಿದ್ದು. ಅವು ತುಂಬಾ ಕಂಫರ್ಟ್ ಆಗಿವೆ ಅಂತಲೂ ಅಮಿತಾಬ್ ತಮ್ಮ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಆನ್ ಸ್ಕ್ರೀನ್ ಅನಿಮಲ್ ಆಗಿದ್ದ ರಣ್ಬೀರ್, ಮುಂದೊಂದು ದಿನ ಆನ್ ಸ್ಕ್ರೀನ್ ನಲ್ಲಿ ಬ್ಯುಸಿನೆಸ್ ಮ್ಯಾನ್ ಅಂತ ಸಿನಿಮಾ ಮಾಡಿದ್ರೂ ಅಚ್ಚರಿಯಿಲ್ಲ.