ಎಲ್ಲರೂ ಮೋಹಕತಾರೆ ರಮ್ಯಾ ಜೊತೆ ಒಂದು ಫೋಟೋ ಆದ್ರೂ ಕ್ಲಿಕ್ಕಿಸಿಕೊಳ್ಳಬೇಕು ಅಂತ ಕಾಯ್ತಿರ್ತಾರೆ. ಆದ್ರೆ ಆಕೆಯೇ ಮತ್ತೊಬ್ಬ ನಟನ ಜೊತೆ ಫೋಟೋಗೆ ನಿಲ್ತಾರೆ. ಅದು ಒನ್ ಅಂಡ್ ಓನ್ಲಿ ರಕ್ಷಿತ್ ಶೆಟ್ಟಿ. ಇಷ್ಟಕ್ಕೂ ಜೊತೆ ಜೊತೆಯಲಿ ನಡೆಯುತ್ತಿರೋದಾದ್ರೂ ಏನು..? ಫೋಟೋಗೆ ಪೋಸ್ ನೀಡಿದ್ದೆಲ್ಲಿ ಅಂತೀರಾ?
- ರಕ್ಷಿತ್ ಜೊತೆ ಮೋಹಕತಾರೆ.. ಗುಣವಂತ ಸಾಂಗ್‌ಗೆ ಸ್ಟೆಪ್
- ಸಪ್ತ ಸಾಗರದಾಚೆ ಅಮೆರಿಕಾದಲ್ಲಿ ರಮ್ಯಾ ಮೀಟ್ಸ್ ರಕ್ಷಿತ್..!
- ಸೆನ್ಸೇಷನಲ್ ಹ್ಯಾಂಡ್ಸಮ್ ಹಂಕ್ ಜೊತೆ ಕ್ವೀನ್ ರಮ್ಯಾ..!
- ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌ಗಳ ಮಹಾ ಸಂಗಮ..!
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಪಾಲಿಟಿಕ್ಸ್‌ನಿಂದ ದೂರ ಆಗಿರಬಹುದು, ಸಿನಿಮಾಗಳಲ್ಲಿ ನಟಿಸದೇ ಇರಬಹು ದು. ಆದ್ರೆ ಕನ್ನಡಿಗರಿಂದ ಆಕೆ ಎಂದೂ ದೂರ ಆಗಿಲ್ಲ. ಸದಾ ಅನ್ಯಾಯವನ್ನು ಪ್ರಶ್ನಿಸುತ್ತಾ, ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಅಷ್ಟೇ ಪ್ರೀತಿಯಿಂದ ಹೋಗಿ, ಅವರುಗಳಿಗೆ ಬೆನ್ನು ತಟ್ಟಿ, ತುಂಬು ಹೃದಯದಿಂದ ಹರಸಿ ಬರ್ತಿದ್ದಾರೆ ಈ ಚೆಂದುಳ್ಳಿ ಚೆಲುವೆ.
ಇಂದಿಗೂ ರಮ್ಯಾರನ್ನ ಕಂಡ್ರೆ ಅದೆಷ್ಟೋ ಮಂದಿಗೆ ಕ್ರಶ್. ಆಕೆಯ ಛಾರ್ಮ್ ಎಳ್ಳಷ್ಟೂ ಕಮ್ಮಿ ಆಗಿಲ್ಲ. ಇಂತಹ ಚೆಲುವೆ ಜೊತೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಅಥವಾ ಭೇಟಿ ಮಾಡ್ಬೇಕು ಅಂತ ಸಾಕಷ್ಟು ಮಂದಿ ಕ್ಯೂ ನಿಂತಿದ್ದಾರೆ. ಆದ್ರೆ ಸ್ವತಃ ರಮ್ಯಾ ಅವರೇ ಒಬ್ಬ ವ್ಯಕ್ತಿ ಜೊತೆ ಫೋಟೋ ತೆಗೆಸಿಕೊಂಡಿದ್ದು, ಅದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅದು ಬೇರಾರ ಜೊತೆಗೂ ಅಲ್ಲ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ.
ಹೌದು, ಸದಾ ತಾನಾಯ್ತು, ತನ್ನ ಕೆಲಸ ಆಯ್ತು ಅಂತ ಇರೋ ಸರಳ ಹಾಗೂ ಸಿನಿಮೋತ್ಸಾಹಿ ಜೀವ ರಕ್ಷಿತ್ ಶೆಟ್ಟಿ. ಇತ್ತೀಚೆಗೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ನಾವಿಕ ವರ್ಲ್ಡ್ ಕನ್ನಡ ಸಮ್ಮಿಟ್‌ನಲ್ಲಿ ಮೋಹಕತಾರೆ ರಮ್ಯಾ ಭಾಗಿಯಾಗಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಕೂಡ ಹಾಜರಾಗಿದ್ದು, ಇಬ್ಬರೂ ವೇದಿಕೆ ಹಂಚಿಕೊಂಡಿದ್ದಾರೆ. ಈ ಮೂಲಕ ಸಪ್ತಸಾಗರದಾಚೆ ಅದೆಲ್ಲೋ ದೂರದಲ್ಲಿರೋ ಅಮೆರಿಕದಲ್ಲಿ ರಮ್ಯಾ-ರಕ್ಷಿತ್ ಮೀಟ್ ಮಾಡಿದ್ದಾರೆ ಅನ್ನೋದು ಇಂಟರೆಸ್ಟಿಂಗ್.
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳ ಬಳಿಕ ರಿಚರ್ಡ್ ಆಂಟನಿ ಚಿತ್ರಕ್ಕಾಗಿ ಸಾಕಷ್ಟು ಸಮಯ ತೆಗೆದುಕೊಳ್ತಿರೋ ರಕ್ಷಿತ್, ಸದ್ಯ ಅದ್ರ ಪ್ರೀ ಪ್ರೊಡಕ್ಷನ್ ಕಾರ್ಯಗಳ ಕಡೆ ಗಮನ ಹರಿಸಿದ್ದಾರೆ. ಸೋಶಿಯಲ್ ಲೈಫ್ ಸೇರಿದಂತೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದ್ರೆ 777 ಚಾರ್ಲಿ ಚಿತ್ರದ ಬಿಡುಗಡೆ ವೇಳೆ ರಮ್ಯಾ-ರಕ್ಷಿತಾ ಮದ್ವೆ ಆಗ್ತಾರೆ ಅನ್ನೋ ಅಂತೆ ಕಂತೆಗಳು ಜೋರಾಗಿ ಹರಿದಾಡಿತ್ತು. ಅದಕ್ಕೆ ಸಾಕಷ್ಟು ಬಾರಿ ಸ್ವತಃ ರಕ್ಷಿತ್ ಶೆಟ್ಟಿ ಅವ್ರೇ ಕ್ಲ್ಯಾರಿಫಿಕೇಷನ್ ಕೂಡ ನೀಡಿದ್ರು. ಇದೀಗ ಅಮೆರಿಕಾದಲ್ಲಾದ ಇವ್ರ ಭೇಟಿಯಿಂದ ಮತ್ತೆ ಇದು ಹಾಟ್ ಟಾಪಿಕ್ ಆಗಿದೆ.
ಇದಲ್ಲದೆ ಅದೇ ಕಾರ್ಯಕ್ರಮದಲ್ಲಿ ರಮ್ಯಾ ತಮ್ಮ ಬ್ಲಾಕ್ ಬಸ್ಟರ್ ಹಿಟ್ ಜೊತೆ ಜೊತೆಯಲಿ ಚಿತ್ರದ ಓ ಗುಣವಂತ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆ ವಿಡಿಯೋ ಕೂಡ ಸಖತ್ ವೈರಲ್ ಆಗ್ತಿದೆ. ಸ್ಯಾಂಡಲ್‌ವುಡ್‌ನ ಮೋಸ್ಟ್ ಹ್ಯಾಂಡ್ಸಮ್ ಹಂಕ್, ಕಾನ್ಸೆಪ್ಟ್ ಕ್ರಿಯೇಟರ್, ಸ್ಪ್ರಿಂಗ್ ತರ ಕುಣಿಯೋ ಅದ್ಭುತ ಡ್ಯಾನ್ಸರ್ ಕಿಶನ್ ಬಿಳಗಲಿ ಜೊತೆ ರಮ್ಯಾ ಈ ಎವರ್‌ಗ್ರೀನ್ ಹಾಡಿಗೆ ಕುಣಿದಿರೋದು ಇಂಪ್ರೆಸ್ಸೀವ್ ಆಗಿದೆ. ರಮ್ಯಾ ಹೆಜ್ಜೆ ಹಾಕಿದ್ದಕ್ಕೆ ಒಳ್ಳೆಯ ಪ್ರಶಂಸೆ, ಪ್ರತಿಕ್ರಿಯೆಗಳು ಬರ್ತಿದ್ದು, ಬೇಗ ಬಣ್ಣ ಹಚ್ಚಿ ಕ್ವೀನ್ ಅಂತಿದ್ದಾರೆ ಫ್ಯಾನ್ಸ್.






