ಕರಾವಳಿ.. ಈ ವರ್ಷ ಸ್ಯಾಂಡಲ್‌ವುಡ್‌ನ ಬಿಗ್ಗೆಸ್ಟ್ ಓಪನಿಂಗ್ ಪಡೆದ ಚಿತ್ರ. ಮೂರೇ ದಿನದಲ್ಲಿ 5 ಕೋಟಿ ಬಾಕ್ಸ್ ಆಫೀಸ್ ಲೂಟಿ ಮಾಡಿರೋ ಕರಾವಳಿ, ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಅಲ್ಲದೆ, ಮಲಯಾಳಂ ಸೇರಿದಂತೆ ಪರಭಾಷೆಗಳಿಗೂ ಲಗ್ಗೆ ಇಡೋ ಮನ್ಸೂಚನೆ ನೀಡಿದೆ. ಹಾಗಾದ್ರೆ ಸ್ಯಾಟಲೈಟ್-ಡಿಜಿಟಲ್ ರೈಟ್ಸ್ ಎಷ್ಟು ಕೋಟಿಗೆ ಸೋಲ್ಡ್ ಔಟ್ ಆಯ್ತು..? ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ನಿಮಗಾಗಿ.
ಪರಭಾಷೆಗಳತ್ತ ‘ಕರಾವಳಿ’.. ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ
3 ದಿನಕ್ಕೆ 5 ಕೋಟಿ ಕ್ಲಬ್.. OTT & ಸ್ಯಾಟಲೈಟ್ 4.5ಕೋಟಿ
ಮಲಯಾಳಂನಲ್ಲಿ ನಟ ದುಲ್ಕರ್ ಸಲ್ಮಾನ್ ರಿಲೀಸ್‌ಗೆ ಸಜ್ಜು
ಕಂಟೆಂಟ್ & ಮೇಕಿಂಗ್ ಗತ್ತು, ಗಮ್ಮತ್ತು ತೋರಿದ ಕರಾವಳಿ
ರಿಲೀಸ್‌ಗೂ ಮೊದಲೇ ಪಂಚ ಸಿಟಿಗಳಲ್ಲಿ ಸ್ಪೆಷಲ್ ಪೇಯ್ಡ್ ಪ್ರೀಮಿಯರ್ ಶೋಗಳಿಂದ ಟಾಕ್ ಆಫ್ ದಿ ಟೌನ್ ಆಗಿದ್ದ ಕರಾವಳಿ ಸಿನಿಮಾ, ಇದೀಗ ಬಿಡುಗಡೆ ನಂತರವೂ ಅದೇ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಯೆಸ್.. ಕಂಬಳದ ಸುತ್ತ ಕೇಂದ್ರೀಕೃತವಾಗಿರೋ ಕರಾವಳಿ ಚಿತ್ರ, ಕರುನಾಡಿನಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಇಂಟರೆಸ್ಟಿಂಗ್ ಅಂದ್ರೆ ಈ ವರ್ಷದ ಬಿಗ್ಗೆಸ್ಟ್ ಓಪನಿಂಗ್ ಪಡೆದ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ ಕರಾವಳಿ.
ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಹಾಗೂ ಮಿತ್ರ ಲೀಡ್‌ನಲ್ಲಿ ನಟಿಸಿರೋ ಈ ಚಿತ್ರ ಯಂಗೆಸ್ಟ್ ನಿರ್ದೇಶಕ ಗುರುದತ್ ಗಾಣಿಗ ಕರಿಯರ್‌ಗೆ ಬೂಸ್ಟರ್ ಡೋಸ್ ಆಗಿದೆ. ತೆರೆಕಂಡ ಮೂರೇ ದಿನದಲ್ಲಿ 5 ಕೋಟಿ ಕ್ಲಬ್ ಸೇರಿದೆ ಸಿನಿಮಾ. ಮೊದಲ ದಿನ ಒಂದು ಕೋಟಿ ಗಳಿಸಿದ್ರೆ, ಎರಡನೇ ದಿನ 1.13 ಕೋಟಿ ಹಾಗೂ ಮೂರನೇ ದಿನ 1.40ಕೋಟಿ ಪೈಸಾ ವಸೂಲ್ ಮಾಡೋ ಮೂಲಕ ಹುಬ್ಬೇರಿಸಿದೆ. ಇದಲ್ಲದೆ, ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಝೀ ಪಾಲಾಗಿದೆ. 4.50 ಕೋಟಿ ರೂಪಾಯಿಗೆ ಮೊದಲ ಹಂತದ ಮಾತುಕತೆ ನಡೆದಿತ್ತು. ಆದ್ರೀಗ ಸಿನಿಮಾ ದೊಡ್ಡ ಓಪನಿಂಗ್ ಪಡೆದ ಹಿನ್ನೆಲೆ, ಅದು 8 ಕೋಟಿ ತನಕ ಬ್ಯುಸಿನೆಸ್ ಡೀಲ್ ಫೈನಲ್ ಆಗೋ ಸಾಧ್ಯತೆಯಿದೆ ಎನ್ನಲಾಗ್ತಿದೆ.
ನಿಜಕ್ಕೂ ಕಂಟೆಂಟ್ ಗಟ್ಟಿಯಾಗಿದ್ರೆ, ಆರ್ಟಿಸ್ಟ್ ಪರ್ಫಾಮೆನ್ಸ್ ಜೊತೆ ಮೇಕಿಂಗ್ ಮಜಬೂತಾಗಿದ್ರೆ ಈ ಸಿನಿಮಾನ ಯಾರೂ ತಡೆಯೋಕೆ ಆಗಲ್ಲ. ಜನನಾಯಗನ್ ಅಂತಹ ತೂಫಾನ್ ಎದುರು, ಗಟ್ಟಿಯಾಗಿ ನೆಲೆ ನಿಂತು, ಒಳ್ಳೆಯ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳನ್ನ ಪಡೆಯುತ್ತಿದೆ ಕರಾವಳಿ ಅಂದ್ರೆ ಓನ್ಲಿ ಕಂಟೆಂಟ್ ಕಾರಣವಾಗಿದೆ. ಆನ್ ಡಿಮ್ಯಾಂಡ್ ಸ್ಕ್ರೀನ್ಸ್ ಕೂಡ ಹೆಚ್ಚಿಸಿಕೊಳ್ತಿರೋ ಕರಾವಳಿಗೆ ಚಿತ್ರತಂಡ ಎಲ್ಲೇ ಹೋದ್ರೂ ಸಹ ಭರ್ಜರಿ ಸ್ವಾಗತ, ಅಭೂತಪೂರ್ವ ಪ್ರೀತಿ ಸಿಗ್ತಿರೋದು ವಿಶೇಷ.
ಇಂಟರೆಸ್ಟಿಂಗ್ ಅಂದ್ರೆ.. ಬುಕ್ ಮೈ ಶೋನಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಸಾವಿರಾರು ಟಿಕೆಟ್ಸ್ ಸೋಲ್ಡ್ ಔಟ್ ಆಗ್ತಿರೋದು ನೋಡಿ, ಕರಾವಳಿ ಚಿತ್ರಕ್ಕೆ ಪರಭಾಷೆಗಳಿಂದ ಡಿಮ್ಯಾಂಡ್ ಹೆಚ್ಚಿದೆ. ಮಲಯಾಳಂನಲ್ಲಿ ಬಹುಶಃ ಈ ವಾರ ತೆರೆ ಕಾಣಲಿದ್ದು, ನಟ ದುಲ್ಕರ್ ಸಲ್ಮಾನ್ ತಮ್ಮ ಹೋಮ್ ಬ್ಯಾನರ್‌ನಿಂದ ವಿತರಣೆ ಮಾಡಲಿದ್ದಾರಂತೆ. ಅಲ್ಲದೆ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ನಾರ್ತ್ ಇಂಡಿಯಾದಿಂದಲೂ ಪ್ರತಿಷ್ಠಿತ ಡಿಸ್ಟ್ರಿಬ್ಯೂಷನ್ ಕಂಪನಿಗಳು ಸಿನಿಮಾದ ಹಕ್ಕುಗಳನ್ನ ಖರೀದಿಸಲು ಕ್ಯೂ ನಿಂತಿವೆ. ವಿದೇಶಗಳಲ್ಲಿರೋ ಅನಿವಾಸಿ ಭಾರತೀಯರಿಗೂ ಕರಾವಳಿ ದರ್ಶನ ನೀಡಲಿದ್ದು, ಈ ವಾರ ಓವರ್‌ಸೀಸ್ ರಿಲೀಸ್ ಆಗ್ತಿರೋದು ಹೈಲೈಟ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





