ದೀಪಾವಳಿಗೆ ಪಟಾಕಿ ಸಿಡಿಯೋದು ಕಾಮನ್ ಆದ್ರೆ ಈ ಬಾರಿ ಇಂಡಿಯನ್ ಬಾಕ್ಸ್ ಆಫೀಸ್ನಲ್ಲಿ ಆಟಂ ಬಂಬ್ ಸಿಡಿಯೋದು ಪಕ್ಕಾ. ಅಕ್ಕ- ತಮ್ಮ ಇಂಡಿಯನ್ ಸೂಪರ್ಸ್ಟಾರ್ಗಳು ಮುಖಾಮುಖಿ ಆಗ್ತಿದ್ದು, ಥಿಯೇಟರ್ಗಳು ರಣರಂಗ ಆಗೋ ಲಕ್ಷಣ ಕಾಣ್ತಿದೆ. ಯಾರು ಆ ಸೂಪರ್ ಸ್ಟಾರ್ಸ್.. Clash ಆಗ್ತಿರೋ ಸಿನಿಮಾಗಳ್ಯಾವುವು..?
ರಾಯ v/s ಗಂಗಾ.. ಯಶ್-ನಯನತಾರಾ ಸಿನಿಮಾಗಳ ಮೆಗಾ ಕ್ಲ್ಯಾಶ್..?!
ರಾಮಾಯಣ vs ಮೂಕುತಿ ಅಮ್ಮನ್ 2 ಪ್ರೇಕ್ಷಕರ ಜೈಕಾರ ಯಾರಿಗೆ..?
ಒಂದೇ ದಿನ ಎರಡು ಬಿಗ್ ಸಿನಿಮಾಗಳ ರಿಲೀಸ್
ನವೆಂಬರ್ 6ಕ್ಕೆ ಬಾಕ್ಸ್ ಆಫೀಸ್ ರಣರಂಗ..!
ಬೆಳ್ಳಿಪರದೆ ಮೇಲೆ ಈಗ ‘ರಾಯ’ vs ‘ಗಂಗಾ’ ಫೈಟ್ ಶುರುವಾಗಿದೆ. ಟಾಕ್ಸಿಕ್ ಸಿನಿಮಾದಲ್ಲಿ ಅಕ್ಕ ತಮ್ಮನಾಗಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗು ರಾಕಿಭಾಯ್ ಯಶ್ ಈಗ ಥಿಯೇಟರ್ ನಲ್ಲಿ ಮುಖಮುಖಿ ಆಗ್ತಿದ್ದಾರೆ. ಎಸ್, ‘ರಾಮಾಯಣ: ಪಾರ್ಟ್ 1’ ಸಿನಿಮಾ ಮೂಲಕ ಅಖಾಡಕ್ಕಿಳಿಯುತ್ತಿದ್ದಾರೆ ಯಶ್. ಈ ಚಿತ್ರದಲ್ಲಿ ಯಶ್ ಲಂಕೇಶ್ ಅಂದರೆ ರಾವಣನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪಕ್ಕಾ ಮಾಸ್ ಅಂಡ್ ರಗಡ್ ಲುಕ್ನಲ್ಲಿ ಥಿಯೇಟರ್ಗಳನ್ನು ಶೇಕ್ ಮಾಡೋಕೆ ಕೌಂಟ್ಡೌನ್ ಶುರು ಮಾಡಿದ್ದಾರೆ.
ಇನ್ನೊಂದೆಡೆ, ಸೌತ್ ಸಿನಿರಂಗದ ಲೇಡಿ ಸೂಪರ್ಸ್ಟಾರ್ ನಯನತಾರಾ ತಮ್ಮ ಹಿಟ್ ಫ್ರಾಂಚೈಸಿಯ ‘ಮೂಕುತಿ ಅಮ್ಮನ್ 2’ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡ್ತಿದ್ದಾರೆ. ಪ್ರತಿಯೊಬ್ಬರ ಇಷ್ಟದ ‘ಅಮ್ಮನ್’ ಪಾತ್ರದಲ್ಲಿ ಮತ್ತೆ ನಯನತಾರಾ ಆರ್ಭಟಿಸಲಿದ್ದು, ಈ ಡಿವೈನ್ ಸಿನಿಮಾ ದೀಪಾವಳಿ ಹಬ್ಬದ ವಾರದಲ್ಲೇ ರಿಲೀಸ್ ಆಗೋಕೆ ಡೇಟ್ ಲಾಕ್ ಮಾಡಿಕೊಂಡಿದೆ. ಒಟ್ಟಾರೆ ನವೆಂಬರ್ 6ರಂದೇ ಈ ಎರಡು ಸಿನಿಮಾಗಳು ಥಿಯೇಟರ್ ಗೆ ಲಗ್ಗೆ ಇಡಲು ಎಲ್ಲಾ ತಯಾರಿ ನಡೆಸಿವೆ.
ಬಾಕ್ಸ್ ಆಫೀಸ್ನಲ್ಲಿ ಒಂದೆಡೆ ಸಾವಿರಾರು ಕೋಟಿ ವೆಚ್ಚದ ರಾಮಾಯಣದ ದೃಶ್ಯ ವೈಭವದ ಹವಾ ಇದ್ದರೆ, ಇನ್ನೊಂದೆಡೆ ನಯನತಾರಾ ಅವರ ದೈವಿಕ ಶಕ್ತಿಯ ಮಹಾತ್ಮೆ ಇದೆ. ಸಿನಿರಂಗದಲ್ಲಿ ಕಾವು ಏರಿಸಿರೋ ಈ ಮೆಗಾ ಕ್ಲಾಶ್ನಲ್ಲಿ ಪ್ರೇಕ್ಷಕರು ಯಾರಿಗೆ ಜೈ ಅಂತಾರೆ..? ಈ ದೀಪಾವಳಿಗೆ ಬಾಕ್ಸ್ ಆಫೀಸ್ ಸುಲ್ತಾನ್ ಯಾರು ಆಗ್ತಾರೆ ಅನ್ನೋದೇ ಈಗ ಸಿನಿದುನಿಯಾದ ಬಿಗ್ಗೆಸ್ಟ್ ಕ್ಯೂರಿಯಾಸಿಟಿ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





