• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, September 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ರಾಮಾಯಣ’ ಟ್ರೈಲರ್ ರಿಲೀಸ್: ರಾಮನಾಗಿ ರಣಬೀರ್, ರಾವಣನಾಗಿ ಅಬ್ಬರಿಸಿದ ಯಶ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
July 30, 2026 - 8:23 am
in ಸಿನಿಮಾ
0 0
0
ಮುನ್ಸೂಚನೆ (16)

RelatedPosts

ಕಲರ್ಸ್ ಹೆಲ್ತ್ ಕೇರ್ ಇಂಡಿಯಾದ ನೂತನ ಶಾಖೆ ಆರಂಭ: ಡಾರ್ಲಿಂಗ್ ಕೃಷ್ಣ ದಂಪತಿಯಿಂದ ಉದ್ಘಾಟನೆ

ಕನ್ನಡ-ತುಳುನಲ್ಲಿ ಅರ್ಜುನ್ ದೇವ್ ಟಾಸ್ ಗೇಮ್

ದರ್ಶನ್‌ಗೆ ರಿಲೀಫ್: ಸಾಕ್ಷ್ಯ ವಿಚಾರಣೆ ವೇಳೆ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ

ಸಿಲಿಕಾನ್ ಸಿಟಿಯಲ್ಲಿ ಜಡೆಗಳ ರಾಜ ನ್ಯಾಚುರಲ್ ಸ್ಟಾರ್ ನಾನಿ

ADVERTISEMENT
ADVERTISEMENT

ಬೆಂಗಳೂರು, ಜುಲೈ 30: ಭಾರತೀಯ ಸಿನಿರಂಗದ ಅತ್ಯಂತ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ರಾಮಾಯಣ’ ಚಿತ್ರದ ಮೊದಲ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. ನಿರ್ದೇಶಕ ನಿತೇಶ್ ತಿವಾರಿ ಅವರ ಕನಸಿನ ಮಹಾಕಾವ್ಯಕ್ಕೆ ಸಿನಿಪ್ರಿಯರು ಬಹಳ ದಿನಗಳಿಂದ ಕಾಯುತ್ತಿದ್ದರು. ಗುರುವಾರ ಬೆಳಿಗ್ಗೆ 4.15ರ ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆಯಾದ ನಾಲ್ಕು ನಿಮಿಷ ಒಂಬತ್ತು ಸೆಕೆಂಡುಗಳ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.

ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಪ್ರತಿಯೊಬ್ಬರ ಪಾತ್ರಕ್ಕೂ ಅದ್ಭುತ ದೃಶ್ಯ ವೈಭವ ನೀಡಲಾಗಿದ್ದು, ವಿಶೇಷವಾಗಿ ಯಶ್ ಅವರ ರಾವಣ ಅವತಾರಕ್ಕೆ ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ಗಳಿಸಿದೆ.

ಟ್ರೈಲರ್ ಆರಂಭದಲ್ಲೇ ರಾವಣನ ಪ್ರವೇಶ ಭರ್ಜರಿಯಾಗಿ ಮೂಡಿಬರುತ್ತದೆ. ತಲೆಯನ್ನು ಮುಚ್ಚಿಕೊಂಡು ಅರಮನೆಯೊಳಗೆ ನಡೆದುಬರುವ ರಾವಣನನ್ನು “ನಿಮ್ಮ ಹೊಸ ರಾಜ” ಎಂದು ಪರಿಚಯಿಸುವ ದೃಶ್ಯ ಕುತೂಹಲ ಮೂಡಿಸುತ್ತದೆ. ಬಳಿಕ “ದೇವಲೋಕ, ಭೂಲೋಕ, ಪಾತಾಳಲೋಕ ಮೂರು ಲೋಕಗಳಿಗೂ ಒಬ್ಬನೇ ರಾಜ” ಎಂಬ ಸಂಭಾಷಣೆಯೊಂದಿಗೆ ಯಶ್ ಅವರ ಆರ್ಭಟದ ಅಭಿನಯ ಟ್ರೈಲರ್‌ನ ಅದ್ಭುತ ದೃಶ್ಯವಾಗಿದೆ. ಲಂಕೆಯ ಅದ್ಧೂರಿ ಅರಮನೆ, ಪುಷ್ಪಕ ವಿಮಾನ ಮತ್ತು ಭವ್ಯ ದೃಶ್ಯಗಳು ಚಿತ್ರದ ಗ್ರ್ಯಾಂಡ್ ಮೇಕಿಂಗ್‌ಗೆ ಸಾಕ್ಷಿಯಾಗಿವೆ.

ಇದಾದ ಬಳಿಕ ಕಥೆ ಶ್ರೀರಾಮನತ್ತ ಸಾಗುತ್ತದೆ. ಲೋಕದಲ್ಲಿ ಅಧರ್ಮ ಹೆಚ್ಚಾದಾಗ ಧರ್ಮವನ್ನು ಕಾಪಾಡಲು ವಿಷ್ಣುವಿನ ಅವತಾರವಾಗಿ ರಾಮ ಜನ್ಮ ತಾಳುವ ಕಥೆಯನ್ನು ಟ್ರೈಲರ್ ಪರಿಚಯಿಸುತ್ತದೆ. ರಣಬೀರ್ ಕಪೂರ್ ಅವರ ಶ್ರೀರಾಮನ ಪಾತ್ರ ಶಾಂತ, ಗಂಭೀರ ಹಾಗೂ ಧರ್ಮನಿಷ್ಠ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಕುದುರೆಯ ಮೇಲೆ ಸವಾರಿ ಮಾಡುವ ದೃಶ್ಯಗಳು, ತಂದೆ ದಶರಥ ಹಾಗೂ ತಾಯಿ ಕೈಕೇಯಿಯೊಂದಿಗೆ ಇರುವ ಭಾವನಾತ್ಮಕ ಕ್ಷಣಗಳು ಗಮನ ಸೆಳೆಯುತ್ತವೆ.

ಸಾಯಿ ಪಲ್ಲವಿ ಸೀತೆಯಾಗಿ ತಮ್ಮ ಸಹಜ ಅಭಿನಯದಿಂದ ಮುದ ನೀಡುತ್ತಾರೆ. ರಾಮ-ಸೀತೆಯ ವಿವಾಹ, ನಂತರ ಕೈಕೇಯಿಯ ನಿರ್ಧಾರದಿಂದ ರಾಮ, ಸೀತೆ ಮತ್ತು ಲಕ್ಷ್ಮಣ ವನವಾಸಕ್ಕೆ ತೆರಳುವ ದೃಶ್ಯಗಳು ಭಾವನಾತ್ಮಕವಾಗಿ ಮೂಡಿಬಂದಿವೆ. ಲಕ್ಷ್ಮಣನಾಗಿ ರವಿ ದುಬೆ, ದಶರಥನಾಗಿ ಅರುಣ್ ಗೋವಿಲ್ ಹಾಗೂ ಕೈಕೇಯಿಯಾಗಿ ಲಾರಾ ದತ್ತಾ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಟ್ರೈಲರ್‌ನಲ್ಲಿ ಶೂರ್ಪಣಖಿಯಾಗಿ ರಾಕುಲ್ ಪ್ರೀತ್ ಸಿಂಗ್ ಅವರ ಪಾತ್ರಕ್ಕೂ ಮಹತ್ವ ನೀಡಲಾಗಿದೆ. ರಾಮನನ್ನು ಆಕರ್ಷಿಸಲು ಯತ್ನಿಸುವ ಶೂರ್ಪಣಖಿ, ನಂತರ ಲಕ್ಷ್ಮಣನಿಂದ ಮೂಗು ಕತ್ತರಿಸಿಕೊಳ್ಳುವ ದೃಶ್ಯಗಳು ಕಥೆಯ ಪ್ರಮುಖ ತಿರುವುಗಳನ್ನು ಪರಿಚಯಿಸುತ್ತವೆ. ಹನುಮಂತನ ಪಾತ್ರದಲ್ಲಿ ನಟಿಸಿರುವ ಸನ್ನಿ ಡಿಯೋಲ್ ಅವರ ಸಂಪೂರ್ಣ ನೋಟವನ್ನು ಟ್ರೈಲರ್‌ನಲ್ಲಿ ತೋರಿಸದಿದ್ದರೂ, ಅವರ ಪಾತ್ರದ ಬಗ್ಗೆ ಕುತೂಹಲವನ್ನು ಉಳಿಸಿಕೊಳ್ಳಲಾಗಿದೆ.

ಎ.ಆರ್. ರೆಹಮಾನ್ ಮತ್ತು ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಅವರ ಸಂಗೀತ ಟ್ರೈಲರ್‌ಗೆ ಭವ್ಯತೆಯ ಸ್ಪರ್ಶ ನೀಡಿದೆ. ಅದೇ ರೀತಿ, ಹಲವು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ DNEG ಸಂಸ್ಥೆಯ VFX ಕೆಲಸ ದೃಶ್ಯಗಳನ್ನು ಮತ್ತಷ್ಟು ಅದ್ಭುತಗೊಳಿಸಿದೆ.

ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ನಿರ್ಮಿಸಿದ್ದು, ಯಶ್ ಸಹ-ನಿರ್ಮಾಪಕರಾಗಿದ್ದಾರೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ಮಹಾಕಾವ್ಯದ ಮೊದಲ ಭಾಗ ನವೆಂಬರ್ 5ರಂದು ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text 2026 09 18T202423.824

ಕಲರ್ಸ್ ಹೆಲ್ತ್ ಕೇರ್ ಇಂಡಿಯಾದ ನೂತನ ಶಾಖೆ ಆರಂಭ: ಡಾರ್ಲಿಂಗ್ ಕೃಷ್ಣ ದಂಪತಿಯಿಂದ ಉದ್ಘಾಟನೆ

by ಶಾಲಿನಿ ಕೆ. ಡಿ
September 18, 2026 - 8:25 pm
0

Your paragraph text 2026 09 18T201648.521

ಜಪಾನ್‌ ಸಂಸ್ಥೆಯೊಂದಿಗೆ ಒಪ್ಪಂದ: ಸದ್ಯದಲ್ಲೇ ಭಾರತಕ್ಕೆ ಡೆಂಗ್ಯೂ ಲಸಿಕೆ

by ಶಾಲಿನಿ ಕೆ. ಡಿ
September 18, 2026 - 8:18 pm
0

Your paragraph text 2026 09 18T195115.523

ಕನ್ನಡ-ತುಳುನಲ್ಲಿ ಅರ್ಜುನ್ ದೇವ್ ಟಾಸ್ ಗೇಮ್

by ಶಾಲಿನಿ ಕೆ. ಡಿ
September 18, 2026 - 7:55 pm
0

Your paragraph text 2026 09 18T194234.597

ಪಾಕ್‌‌ನಲ್ಲಿ ಶುರುವಾಯ್ತು ಮಿನಿ ಲಾಕ್‌ಡೌನ್: ಭಾರತಕ್ಕೂ ಕಾದಿದ್ಯಾ ಕಂಟಕ!

by Hemanth Kumar S
September 18, 2026 - 7:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 09 18T202423.824
    ಕಲರ್ಸ್ ಹೆಲ್ತ್ ಕೇರ್ ಇಂಡಿಯಾದ ನೂತನ ಶಾಖೆ ಆರಂಭ: ಡಾರ್ಲಿಂಗ್ ಕೃಷ್ಣ ದಂಪತಿಯಿಂದ ಉದ್ಘಾಟನೆ
    September 18, 2026 | 0
  • Your paragraph text 2026 09 18T195115.523
    ಕನ್ನಡ-ತುಳುನಲ್ಲಿ ಅರ್ಜುನ್ ದೇವ್ ಟಾಸ್ ಗೇಮ್
    September 18, 2026 | 0
  • Your paragraph text 2026 09 18T193219.659
    ದರ್ಶನ್‌ಗೆ ರಿಲೀಫ್: ಸಾಕ್ಷ್ಯ ವಿಚಾರಣೆ ವೇಳೆ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ
    September 18, 2026 | 0
  • Your paragraph text 2026 09 18T190957.501
    ಸಿಲಿಕಾನ್ ಸಿಟಿಯಲ್ಲಿ ಜಡೆಗಳ ರಾಜ ನ್ಯಾಚುರಲ್ ಸ್ಟಾರ್ ನಾನಿ
    September 18, 2026 | 0
  • Your paragraph text 2026 09 18T175122.674
    ಬುದ್ಧಿವಂತ ಉಪೇಂದ್ರಗೆ 58ನೇ ಬರ್ತ್ ಡೇ ಸಂಭ್ರಮ..!
    September 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version