• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, November 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಾಸ್ಟರ್‌ಪೀಸ್ ಕನ್ನಡಿಗನ ವರ್ಲ್ಡ್‌‌‌ಕ್ಲಾಸ್ ‘ರಾಮಾಯಣ’..!

ಇಂಡಿಯನ್ ಸಿನಿಮಾದ ಗತ್ತು ಹಾಲಿವುಡ್‌‌ಗೂ ಗೊತ್ತಾಯ್ತು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 5, 2026 - 1:59 pm
in ಸಿನಿಮಾ
0 0
0
Untitled Design 2026 11 05T134446.639

ವಿಶ್ವದಾದ್ಯಂತ ಬೆಳ್ಳಿತೆರೆಗೆ ಲಗ್ಗೆ ಇಟ್ಟಿರೋ ನಮ್ಮ ನೆಲದ ಮಹಾದೃಶ್ಯಕಾವ್ಯ ರಾಮಾಯಣ ಕಂಡು ಇಡೀ ಸಿನಿದುನಿಯಾನೇ ಬೆರಗಾಗಿ ಹೋಗ್ತಿದೆ. ಇಂಡಿಯನ್ ಸಿನಿಮಾದ ಗತ್ತು.. ಹಾಲಿವುಡ್‌‌ಗೆಲ್ಲಾ ಗೊತ್ತಾಗುವಂತೆ ಆಗಿರೋದೇ ಇಲ್ಲಿನ ಬಿಗ್ ಹೈಲೈಟ್. ಹಾಗಾದ್ರೆ ರಾಮಾಯಣ ಸಿನಿಮಾ ಹೇಗಿದೆ..? ಯಾರ ಪರ್ಫಾಮೆನ್ಸ್‌ ಯಾವ ರೇಂಜ್‌‌ನಲ್ಲಿದೆ..? 8 ಆಸ್ಕರ್ ಅವಾರ್ಡ್ಸ್ ಪಡೆದ ವಿಎಫ್‌‌ಎಕ್ಸ್ ಕಂಪನಿ ಈ ಸಿನಿಮಾನ ಹೇಗೆ ಕಟ್ಟಿಕೊಟ್ಟಿದೆ..? ಪಾರ್ಟ್-1 ಎಂಡ್ ಎಲ್ಲಿಗೆ..? ಚಿತ್ರಪ್ರೇಮಿಗಳು ಕೊಟ್ಟ ಮಾರ್ಕ್ಸ್ ಎಷ್ಟು ಅನ್ನೋದ್ರ ಕಂಪ್ಲೀಟ್ & ಹಾನೆಸ್ಟ್ ರಿವ್ಯೂ ರಿಪೋರ್ಟ್ ಇಲ್ಲಿದೆ.

  • ಇಂಡಿಯನ್ ಸಿನಿಮಾದ ಗತ್ತು ಹಾಲಿವುಡ್‌‌ಗೂ ಗೊತ್ತಾಯ್ತು
  • ಮಾಸ್ಟರ್‌ಪೀಸ್ ಕನ್ನಡಿಗನ ವರ್ಲ್ಡ್‌‌‌ಕ್ಲಾಸ್ ‘ರಾಮಾಯಣ’..!
  • ತೆರೆ ಹಂಚಿಕೊಂಡವ್ರ ನಡುವೆ ನೋಡುಗರ ಹೃದಯವೇ ಆವರಿಸಿದ ಯಶ್
  • ನೀವು ನೋಡಿರದ ರಾಮಾಯಣದ ಮಜಲುಗಳ ದಿಗ್ದರ್ಶನ

ರಘುಕುಲ ತಿಲಕ.. ಮರ್ಯಾದಾ ಪುರುಷ.. ದಶರಥ ನಂದನ.. ಪುರುಷೋತ್ತಮ.. ಅಯೋಧ್ಯೆಯ ಶ್ರೀರಾಮನ ಕುರಿತು ಎಷ್ಟು ಹೇಳಿದ್ರೂ ಕಮ್ಮಿನೇ. ಇಲ್ಲಿಯ ತನಕ ಸಾಕಷ್ಟು ಸಿನಿಮಾ, ಸೀರೀಸ್‌‌ಗಳು ದೃಶ್ಯರೂಪ ಪಡೆದಿವೆ. ಆದಾಗ್ಯೂ ಸಹ.. ಇಂದು ವಿಶ್ವದಾದ್ಯಂತ ತೆರೆಗಪ್ಪಳಿಸಿರೋ ನಮಿತ್ ಮಲ್ಹೋತ್ರಾ ರಾಮಾಯಣ ಈ ಹಿಂದಿನ ಎಲ್ಲಾ ರಾಮಾಯಣಗಳಿಗಿಂತ ವಿಭಿನ್ನ ಹಾಗೂ ವೈಶಿಷ್ಟ್ಯದಿಂದ ಕೂಡಿದೆ. ಅದಕ್ಕೆ ಹತ್ತು ಹಲವು ಕಾರಣಗಳಿದ್ದು, ಈ ರಿವ್ಯೂ ರಿಪೋರ್ಟ್‌‌ನಲ್ಲಿ ಆ ಮಹಾದೃಶ್ಯಕಾವ್ಯದ ಕಂಪ್ಲೀಟ್ ಕಹಾನಿಯನ್ನ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ.

RelatedPosts

ರಾವಣನಾಗಿ ಯಶ್ ಅಬ್ಬರ: ಮಗನ ಸಾಧನೆ ಬಗ್ಗೆ ತಾಯಿ ಪುಷ್ಪ ಸಂತಸ

ಜೈಲಿನಲ್ಲಿ ರಾಜಾತಿಥ್ಯ ವಿಡಿಯೋ ವೈರಲ್ ಕೇಸ್: ನಟ ಧನ್ವೀರ್‌ಗೆ ಮತ್ತೊಂದು ಸಂಕಷ್ಟ!

ಕೊನೆಗೂ ಪ್ರೀತಿ ರಿವೀಲ್ ಮಾಡಿದ ಬಿಗ್ ಬಾಸ್ ಜೋಡಿ ಶಿಶಿರ್-ಐಶ್ವರ್ಯಾ

ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡ ರಾಮಾಯಣ: ರಾಮನಾಗಿ ರಣಬೀರ್, ರಾವಣನಾಗಿ ಯಶ್ ಅಬ್ಬರ!

ADVERTISEMENT
ADVERTISEMENT

ಇಂದು ದರ್ಶನ ಕೊಟ್ಟಿರೋ ಈ ರಾಮಾಯಣ ರಾತ್ರೋರಾತ್ರಿ ತಯಾರಾದ ಸಿನಿಮಾ ಅಲ್ಲವೇ ಅಲ್ಲ. ಅದಕ್ಕಾಗಿ ಇಂಡಿಯಾದ ಟಾಪ್ ಮೋಸ್ಟ್ ಟೆಕ್ನಿಷಿಯನ್ಸ್ ಹಾಗೂ ಸೂಪರ್ ಸ್ಟಾರ್‌‌ಗಳು ತನು ಮನ ಧನವನ್ನ ಅರ್ಪಿಸಿ, ಹಗಲಿರುಳು ದುಡಿದ ಪ್ರತಿಫಲವಾಗಿದೆ. ಅವರೊಂದು ಮಹಾ ಸಂಕಲ್ಪದೊಂದಿಗೆ ಶ್ರದ್ಧೆ, ಭಕ್ತಿ ಹಾಗೂ ನಿಷ್ಠೆಯಿಂದ ಬಹಳ ಪ್ರಾಮಾಣಿಕವಾಗಿ ಈ ಸಿನಿಮಾನ ಕಟ್ಟಿದ್ದಾರೆ. ಹಾಗಾಗಿಯೇ ಇಂದು ಇಡೀ ವಿಶ್ವ ಸಿನಿದುನಿಯಾ ನಮ್ಮ ನೆಲದ, ನಮ್ಮ ಮಣ್ಣಿನ, ನಮ್ಮ ಸಂಸ್ಕೃತಿಯ, ನಮ್ಮ ಪರಂಪರೆಯ ಕಥೆಯನ್ನ ಒಪ್ಪಿಕೊಳ್ತಿದೆ. ಪ್ರೀತಿಯಿಂದ ಅಪ್ಪಿಕೊಳ್ತಿದೆ.

ಹಾಲಿವುಡ್ ಅಂದ್ರೆ ಮರೀಚಿಕೆ ಆಗಿದ್ದ ನಮ್ಮ ಇಂಡಿಯನ್ ಫಿಲ್ಮ್ ಮೇಕರ್ಸ್‌ಗೆ ಈ ಸಿನಿಮಾ ಒಂದು ರಹದಾರಿ ಮಾಡಿಕೊಟ್ಟಿದೆ. ಇಲ್ಲಿಯ ತನಕ ಇದ್ದಂತಹ ಆ ತಡೆಗೋಡೆಯನ್ನ ಛಿದ್ರಗೊಳಿಸಿ, ನಮ್ಮ ಇಂಡಿಯನ್ ಸಿನಿಮಾದ ಅಸಲಿ ಗತ್ತನ್ನು ಹಾಲಿವುಡ್‌ಗೆ ಗೊತ್ತು ಮಾಡಿದೆ. ಹೌದು.. ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿಯ ಆ್ಯಕ್ಷನ್ ಕಟ್, 8 ಬಾರಿ ಆಸ್ಕರ್ ಅವಾರ್ಡ್‌‌ಗಳನ್ನ ಪಡೆದಂತಹ ನಮಿತ್ ಮಲ್ಹೋತ್ರಾ ಮಾಲೀಕತ್ವದ DNEG ವಿಎಫ್‌‌‌ಎಕ್ಸ್ ಸಂಸ್ಥೆಯ ಸಾವಿರಾರು ತಂತ್ರಜ್ಞರು, ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಅವ್ರ ವಿಷನ್, ನಮಿತ್ ಪ್ಯಾಷನ್, ನಿರ್ದೇಶಕರು ಕಂಡ ಕನಸಿಗೆ ಜೀವ ತುಂಬಿದ ರಣ್ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್.. ಹೀಗೆ ಎಲ್ಲರ ಶ್ರಮದ ಸಾರ್ಥಕ ಕ್ಷಣವಾಗಿ ರಾಮಾಯಣ ವಿಶ್ಯುವಲ್ ಟ್ರೀಟ್ ಆಗಿ ಹೊರಹೊಮ್ಮಿದೆ.

ಪುಷ್ಪಕ ವಿಮಾನಕ್ಕಾಗಿ 40 ಮಾಡೆಲ್‌‌ಗಳನ್ನ ಸಿದ್ದಗೊಳಿಸಿದ ಚಿತ್ರತಂಡ, ಜಟಾಯು ಫೈಟ್‌ಗಾಗಿ ಆರೂವರೆ ವರ್ಷ ಸಮಯ ತೆಗೆದುಕೊಂಡು, ಕಣ್ಣಿಗೆ ಕಟ್ಟಿದಂತೆ ಅದನ್ನ ಚಿತ್ರಪ್ರೇಮಿಗಳಿಗೆ ಉಣಬಡಿಸಿದೆ. ಇವೆರಡು ವಿಷಯಗಳೇ ಸಾಕು.. ಅನ್ನ ನಿಜಕ್ಕೂ ಎಷ್ಟರ ಮಟ್ಟಿಗೆ ಬೆಂದಿದೆ ಅಂತ ನೋಡೋಕೆ. ಇಡೀ ಸಿನಿಮಾನ ಅಷ್ಟೇ ಅದ್ಭುತವಾಗಿ, ವೈಭವೋಪೇತವಾಗಿ ತೆರೆಗೆ ತಂದಿದೆ ಚಿತ್ರತಂಡ.

ಸಾಮಾನ್ಯವಾಗಿ ಕಲಾವಿದರುಗಳು ತಮ್ಮ ತಮ್ಮ ಪಾತ್ರಗಳಿಗಾಗಿ ಬಣ್ಣ ಹಚ್ಚಿ, ತೆರೆ ಹಂಚಿಕೊಳ್ತಾರೆ. ಆದ್ರೆ ಇಲ್ಲಿ ನಮ್ಮ ಯಶ್ ನೋಡುಗರ ಹೃದಯಗಳನ್ನೇ ಆವರಿಸಿಕೊಂಡುಬಿಡ್ತಿದ್ದಾರೆ. ಅಷ್ಟರ ಮಟ್ಟಿಗೆ ಟಾಪ್ ನಾಚ್ ಪರ್ಫಾಮೆನ್ಸ್ ನೀಡಿದ್ದಾರೆ ಯಶ್. ರಾಮಾಯಣ ಭಾಗ-1ರ ಪ್ರಮುಖ ಹೈಲೆಟ್‌‌‌ಗಳಲ್ಲಿ ಲಂಕಾಧಿಪತಿ ಪಾತ್ರಧಾರಿ ಯಶ್ ಹಾಗೂ ಆತನ ಪರ್ಫಾಮೆನ್ಸ್ ನಿಲ್ಲಲಿದೆ. ಸಿನಿಮಾ ಅಷ್ಟು ವೈಬ್ರೆಂಟ್ ಆಗಿ ಮೂಡಿಬರಲು ಅವರಲ್ಲಿನ ಆ ರಾಕ್ಷಸ ರೂಪದ ಕಲಾವಿದ ಕಾರಣೀಭೂತವಾಗಿದ್ದಾನೆ ಅಂದ್ರೆ ತಪ್ಪಾಗಲ್ಲ.

ಅಂದಹಾಗೆ ರಾಮಾಯಣದ ಕಥೆಯನ್ನ ಇಲ್ಲಿ ಯಾರಿಗೂ ಹೇಳುವ ಅವಶ್ಯಕತೆ ಇಲ್ಲ. ಎಲ್ಲರಿಗೂ ತಿಳಿದೇ ಇರುವ ಸಾರ್ವಕಾಲಿಕ ಕಥೆ ಅದು. ಆದ್ರೆ ನಾವು, ನೀವು ಹಿಂದೆಂದೂ ನೋಡಿರದಂತಹ ರಾಮಾಯಣದ ಮಗ್ಗಲುಗಳನ್ನ ಟಚ್ ಮಾಡಿದ್ದಾರೆ ಡೈರೆಕ್ಟರ್ ನಿತೇಶ್ ತಿವಾರಿ. ಅದಕ್ಕೆ ದೃಶ್ಯರೂಪ ಕೂಡ ನೀಡಿ, ಹೊಸತನಕ್ಕೆ ಅಥ್ವಾ ವಿನೂತನ ನಿರೂಪಣಾ ಶೈಲಿಗೆ ನಾಂದಿ ಹಾಡಿದ್ದಾರೆ.

ಎಲ್ಲಾ ರಾಮಾಯಣಗಳಿಗಿಂತ ಈ ರಾಮಾಯಣ ಡಿಫರೆಂಟ್ ಏಕೆ?

ಪಾಯಿಂಟ್ ನಂ.1

ದಶಾನನ ಘೋರ ತಪಸ್ಸು

ಬ್ರಹ್ಮನಿಂದ ವರ

ಮೂರು ಲೋಕದ ಅಧಿಪತಿಯಾಗುವ ರಾವಣ

ಈ ಪ್ರಶ್ನೆ ನೋಡುಗರಲ್ಲಿ ಸಹಜವಾಗಿಯೇ ಮೂಡಲಿದೆ. ಅದಕ್ಕೆ ಉತ್ತರ ಈ ಚಿತ್ರದಲ್ಲಿನ ಕೆಲ ದೃಶ್ಯಗಳು. ಅದರಲ್ಲಿ ಅಸುರ ಕುಲದ ಉಳಿವಿಗಾಗಿ ಬ್ರಹ್ಮನಿಂದ ವರ ಪಡೆಯಲು ದಶಾನನ ಮಾಡುವ ಘೋರ ತಪಸ್ಸು ಒಂದಾಗಿದೆ. ಅಸುರರ ಹುಟ್ಟಡಗಿಸಿ ಲಂಕೆಯನ್ನ ಕುಬೇರನ ಕೈಗಿಡುವ ಇಂದ್ರ.. ಅಕ್ಷರಶಃ ಅಸುರರ ಕುಲವನ್ನ ಪಾತಾಳಕ್ಕೆ ತುಳಿಯುತ್ತಾನೆ. ಆದ್ರೆ ದಶಾನನ ಮಾಡುವ ತಪಸ್ಸಿನ ಫಲ, ಬ್ರಹ್ಮ ದೇವನ ವರದಿಂದ ರಾವಣನಾಗಿ ವಾಪಸ್ ಆಗಿ.. ಲಂಕೆಯ ಅಧಿಪತ್ಯ ಸಾಧಿಸುತ್ತಾನೆ. ಲಂಕೆಯನ್ನ ಅಕ್ಷರಶಃ ಸ್ವರ್ಣ ಲಂಕೆಯನ್ನಾಗಿ ಮಾರ್ಪಾಡು ಮಾಡ್ತಾನೆ. ಅಷ್ಟೇ ಅಲ್ಲ.. ಮೂರು ಲೋಕಗಳಿಗೂ ಅಧಿಪತಿಯಾಗಿ ಅಬ್ಬರಿಸಿ, ಆರ್ಭಟಿಸುತ್ತಾನೆ.

ಪಾಯಿಂಟ್ ನಂ.2

ಸೀತೆಯನ್ನ ಯೋಧಳಾಗಿ ಪ್ರಸ್ತುತಪಡಿಸಿರುವುದು

ಸಾಹಸ ದೃಶ್ಯಗಳಲ್ಲಿ ವೀರಳಂತೆ ಹೋರಾಡುವ ಸೀತೆ

ರಾಜಕುಮಾರಿಯಾಗಿದ್ದಾಗಲೇ ಮಿಥಿಲೆಯ ಸೀತೆ ಅದ್ಭುತ ಯೋಧಳು. ಆದರೆ ಸ್ವಯಂವರದ ಬಳಿಕ ಆಕೆ ಇಡೀ ರಾಮಾಯಣದಲ್ಲಿ ಎಲ್ಲೂ ವೀರಾವೇಷದಿಂದ ಹೋರಾಡಿದಂತೆ ಯಾವೊಬ್ಬ ನಿರ್ದೇಶಕನೂ ಇಲ್ಲಿಯ ತನಕ ತೋರಿಸಿದ ನಿದರ್ಶನವೇ ಇಲ್ಲ. ಈ ಚಿತ್ರದಲ್ಲಿ ಸೀತೆ ಕಲ್ಯಾಣದ ನಂತರ ಅಯೋಧ್ಯೆಯಲ್ಲಿ ಮಕ್ಕಳಿಗೆ ಸಮರ ಕಲೆಗಳನ್ನ ಹೇಳಿಕೊಡುವ ಹಾಗೂ ಆತ್ಮ ರಕ್ಷಣೆಗಾಗಿ ಅರಣ್ಯದಲ್ಲಿ ಅಸುರರೊಂದಿಗೆ ಕತ್ತಿ ಹಿಡಿದು, ವೀರಳಂತೆ ಹೋರಾಡುವ ಸಾಹಸದ ದೃಶ್ಯಗಳನ್ನ ಕಟ್ಟಿಕೊಟ್ಟಿದ್ದಾರೆ ನಿತೇಶ್ ತಿವಾರಿ.

ಪಾಯಿಂಟ್ ನಂ.3

ದಶಕಂಠ ರಾವಣನ ದ್ವಂದ್ವತೆ

ಯುದ್ಧದ ನಿರ್ಧಾರದ ಪ್ರೆಸೆಂಟೇಷನ್

ಮೂಗು ಮುರಿದ ಲಕ್ಷ್ಮಣ.. ಅದಕ್ಕೆ ಕಾರಣವಾದ ರಾಮ ಹಾಗೂ ಸೀತೆಯ ವಿರುದ್ಧ ಸೇಡು ತೀರಿಸಿಕೊಳ್ಳಲೇಬೇಕು ಅಂತ ಸಹೋದರ ದಶಕಂಠ ರಾವಣನ ಬಳಿ ಬಂದು ಅಹವಾಲು ತೋಡಿಕೊಳ್ಳುವ ಶೂರ್ಪನಖಿ. ಆ ನಂತ್ರ ಹತ್ತು ತಲೆಯ ರಾವಣ.. ಹತ್ತು ಬಗೆಯಲ್ಲಿ ಯೋಚಿಸುವ ಲಹರಿಗೆ ದೃಶ್ಯರೂಪ ಕೊಟ್ಟಿರೋ ಪರಿ ಅಮೇಜಿಂಗ್. ಹೌದು.. ತಾಳ್ಮೆಯೋ ಯುದ್ಧವೋ ಅನ್ನೋ ಗೊಂದಲದಲ್ಲಿರೋ.. ಹತ್ತು ಮಂದಿಯಷ್ಟು ಯೋಚಿಸುವ ಶಕ್ತಿಯಿರೋ ರಾವಣನಿಗೆ ಆ ದ್ವಂದ್ವಗಳನ್ನ ಹಾಗೂ ಗೊಂದಲಗಳನ್ನ ಪರಿಚಯಿಸೋ ವಿಧಾನಕ್ಕೆ ಶಿಳ್ಳೆ, ಚಪ್ಪಾಳೆ ಸಿಗಲಿದೆ. ಅದರಲ್ಲೂ ಯಶ್ ಹತ್ತು ತರಹೇವಾರಿ ರಾವಣನಾಗಿ ಅತ್ಯದ್ಭುತ ಹಾಗೂ ಮನಮೋಹಕವಾದಂತಹ ಅಭಿನಯ ನೀಡಿದ್ದಾರೆ.

ಪಾಯಿಂಟ್ ನಂ.4

ಬಾವ ವಿದ್ಯುತ್‌‌ಜೀವನನ್ನ ವದಿಸುವ ರಾವಣ

ಲಂಕೆಯ ಮೇಲೆ ದಶಾನನಗಿರೋ ವ್ಯಾಮೋಹ

ತಂಗಿ ಶೂರ್ಪನಖಿಯ ಗಂಡ.. ಅಂದ್ರೆ ಸ್ವಂತ ಬಾವನಾದ ವಿದ್ಯುತ್‌‌ಜೀವ ಜೊತೆಗೇ ಸೆಣಸಾಡುವ ಹಾಗೂ ಲಂಕೆ ಮೇಲೆ ಕಣ್ಣು ಹಾಕಿದ ಆತನಿಗೆ ಇತಿಶ್ರೀ ಹಾಡುವಂತಹ ರಾವಣನ ದೃಶ್ಯ ಒನ್ ಆಫ್ ದಿ ಹೈಲೈಟ್. ವಿದ್ಯುತ್‌‌ಜೀವ ಪಾತ್ರದಲ್ಲಿ ವಿವೇಕ್ ಒಬೇರಾಯ್ ಮನೋಜ್ಞವಾಗಿ ಅಭಿನಯಿಸಿ, ಹುಬ್ಬೇರಿಸಿದ್ದಾರೆ.

ಪಾಯಿಂಟ್ ನಂ.5

ಜಟಾಯು-ರಾವಣನ ಫೈಟ್

ಆರೂವರೆ ವರ್ಷದ ಎಫರ್ಟ್

ರಿಯಲಿಸ್ಟಿಕ್ ಟಚ್

ಈ ರಾಮಾಯಣದ ಮತ್ತೊಂದು ಮಜಲು ಅಂದ್ರೆ ಅದು ಸೀತಾಪಹರಣದ ವೇಳೆ ರಾವಣನನ್ನ ಅಡ್ಡಗಟ್ಟಲು ಮುಂದಾಗುವ ಪಕ್ಷಿರಾಜ ಜಟಾಯು. ಶ್ರೀರಾಮ ಹಾಗೂ ಅಯೋಧ್ಯೆಯ ದಶರಥನ ಮೇಲಿನ ಅಭಿಮಾನ, ಗೌರವಕ್ಕಾಗಿ ಜಟಾಯು ವೀರಾಧಿವೀರ ಲಂಕೇಶ್ವರನ ಜೊತೆಗೇ ಯುದ್ಧಕ್ಕೆ ಮುಂದಾಗುತ್ತೆ. ಇಂಟರೆಸ್ಟಿಂಗ್ ಅಂದ್ರೆ ಪುಷ್ಪಕ ವಿಮಾನದಲ್ಲಿದ್ದ ರಾವಣನನ್ನ ಆಗಸಕ್ಕೆ ಎತ್ತೊಯ್ದು, ತನ್ನ ಮೊಣಚಾದ ಕಾಲಿನ ಉಗುರಿನಿಂದ ರಾವಣನ ಶಿರಚ್ಚೇದನ ಮಾಡುತ್ತೆ. ಆದ್ರೆ ಆತನಿಗೆ ಸಾವಿಲ್ಲ ಅನ್ನೋದು ಅರಿವಾಗಿ, ಆತನಿಂದ ರೆಕ್ಕೆ ಮುರಿಸಿಕೊಂಡು ಆಗಸದಿಂದ ನೆಲ ಕಚ್ಚುತ್ತೆ. ಇದು ಸಾಕಷ್ಟು ರಾಮಾಯಣಗಳಲ್ಲಿ ತೋರಿಸಿದ್ದಾರೆ ಆದ್ರೂ.. ಇಲ್ಲಿ ವಿಶ್ಯುವಲಿ ಪ್ರೆಸೆಂಟ್ ಮಾಡಿರೋ ಪರಿ ವಿಶೇಷ. ನೋಡುಗರಿಗೆ ರೋಮಾಂಚನ ತರಿಸೋ ರೀತಿ, ರಿಯಲಿಸ್ಟಿಕ್ ಆಗಿ ಸುಮಾರು ಆರೂವರೆ ವರ್ಷಗಳ ಕಾಲ ಸಾವಿರಾರು ಮಂದಿ ತಂತ್ರಜ್ಞರು ಕೆಲಸ ಮಾಡಿ ಈ ಸಾಹಸ ದೃಶ್ಯವನ್ನ ಜೋಡಿಸಿರೋದು ಇಂಪ್ರೆಸ್ಸೀವ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled Design 2026 11 05T141926.619

ರಾವಣನಾಗಿ ಯಶ್ ಅಬ್ಬರ: ಮಗನ ಸಾಧನೆ ಬಗ್ಗೆ ತಾಯಿ ಪುಷ್ಪ ಸಂತಸ

by ಶಾಲಿನಿ ಕೆ. ಡಿ
November 5, 2026 - 2:24 pm
0

Untitled Design 2026 11 05T134446.639

ಮಾಸ್ಟರ್‌ಪೀಸ್ ಕನ್ನಡಿಗನ ವರ್ಲ್ಡ್‌‌‌ಕ್ಲಾಸ್ ‘ರಾಮಾಯಣ’..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 5, 2026 - 1:59 pm
0

Untitled Design 2026 11 05T133506.358

ದೇವಿರಮ್ಮ ದರ್ಶನಕ್ಕೆ ಹೊಸ ರೂಲ್ಸ್: 15ರಿಂದ 60 ವರ್ಷದವರಿಗೆ ಮಾತ್ರ ಬೆಟ್ಟ ಹತ್ತಲು ಅವಕಾಶ!

by ಶಾಲಿನಿ ಕೆ. ಡಿ
November 5, 2026 - 1:39 pm
0

Untitled Design 2026 11 05T131245.050

ಗಿಜಿಗುಡುವ ಬೆಂಗಳೂರಿನಲ್ಲಿ ಪ್ರಶಾಂತ ಜೀವನ: ಯಲಹಂಕದಲ್ಲಿ ತಲೆ ಎತ್ತುತ್ತಿದೆ ‘ಲೋ-ಡೆನ್ಸಿಟಿ’ ವಸತಿ ಯೋಜನೆ

by ಶಾಲಿನಿ ಕೆ. ಡಿ
November 5, 2026 - 1:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 05T141926.619
    ರಾವಣನಾಗಿ ಯಶ್ ಅಬ್ಬರ: ಮಗನ ಸಾಧನೆ ಬಗ್ಗೆ ತಾಯಿ ಪುಷ್ಪ ಸಂತಸ
    November 5, 2026 | 0
  • ಹಾಲಿನೊಂದಿಗೆ (1)
    ಜೈಲಿನಲ್ಲಿ ರಾಜಾತಿಥ್ಯ ವಿಡಿಯೋ ವೈರಲ್ ಕೇಸ್: ನಟ ಧನ್ವೀರ್‌ಗೆ ಮತ್ತೊಂದು ಸಂಕಷ್ಟ!
    November 5, 2026 | 0
  • Untitled Design 2026 11 05T083149.397
    ಕೊನೆಗೂ ಪ್ರೀತಿ ರಿವೀಲ್ ಮಾಡಿದ ಬಿಗ್ ಬಾಸ್ ಜೋಡಿ ಶಿಶಿರ್-ಐಶ್ವರ್ಯಾ
    November 5, 2026 | 0
  • Untitled Design 2026 11 05T070713.448
    ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡ ರಾಮಾಯಣ: ರಾಮನಾಗಿ ರಣಬೀರ್, ರಾವಣನಾಗಿ ಯಶ್ ಅಬ್ಬರ!
    November 5, 2026 | 0
  • Untitled Design 2026 11 04T181925.952
    ಗತವೈಭವದ ಘಮ ಹೊಂದಿರೋ ‘ಮೈಸೂರು ಸ್ಟುಡಿಯೋ’ ಪೋಸ್ಟರ್ ಬಿಡುಗಡೆ!
    November 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version