• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಾಂತಾರ-1 ಶೂಟಿಂಗ್‌‌ನಲ್ಲಿ ನಿನ್ನೆ ರಾಕೇಶ್ ಭಾಗಿಯಾಗಿರಲಿಲ್ಲ : ಹೊಂಬಾಳೆ ಫಿಲಂಸ್‌ ಸ್ಪಷ್ಟನೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 12, 2025 - 1:18 pm
in ಸಿನಿಮಾ
0 0
0
Untitled design 2025 05 12t131826.961

ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ಹಾಸ್ಯ ಕಲಾವಿದ, ಕಾಮಿಡಿ ಕಿಲಾಡಿಗಳು ಸೀಸನ್ 3 ಖ್ಯಾತಿಯ ರಾಕೇಶ್ ಪೂಜಾರಿ (33) ಅವರು ಮೇ 11, 2025 ರಂದು ಹೃದಯಾಘಾತದಿಂದ ನಿಧನರಾದರು. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್ 1 ಚಿತ್ರದಲ್ಲಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ರಾಕೇಶ್, ಕನ್ನಡ ಮತ್ತು ತುಳು ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ಅವರ ನಿಧನಕ್ಕೂ ಮುನ್ನ ಕಾಂತಾರ ಚಾಪ್ಟರ್ 1 ಚಿತ್ರೀಕರಣದಲ್ಲಿ ರಾಕೇಶ್‌ ಭಾಗಿಯಾಗಿದ್ದರು ಎಂದು ತಪ್ಪಾಗಿ ಸುದ್ದಿ ಹರಡಿತ್ತು. ಇದಕ್ಕೆ ಸಂಬಂಧಿಸಿದಂತೆ ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆ ನೀಡಿದೆ.

ಕಾಂತಾರ ಚಿತ್ರೀಕರಣದ ಬಗ್ಗೆ ತಪ್ಪು ಸುದ್ದಿ

ನಿನ್ನೆ ಕಾಂತಾರ ಚಾಪ್ಟರ್ 1 ಚಿತ್ರೀಕರಣದಲ್ಲಿ ರಾಕೇಶ್ ಭಾಗಿಯಾಗಿದ್ದರು ಎಂದು ಕೆಲವು ವರದಿಗಳು ಹೇಳಿದ್ದವು. ಆದರೆ ಇದು ಸತ್ಯವಲ್ಲ. ಹೊಂಬಾಳೆ ಫಿಲ್ಮ್ಸ್ ಹೇಳಿರುವ ಪ್ರಕಾರ, ರಾಕೇಶ್ ತಮ್ಮ ಪಾತ್ರದ ಚಿತ್ರೀಕರಣವನ್ನು ಒಂದು ತಿಂಗಳ ಹಿಂದೆಯೇ ಮುಗಿಸಿದ್ದರು. ಕೇವಲ ಸಣ್ಣ ಪ್ಯಾಚ್‌ವರ್ಕ್ ಮಾತ್ರ ಬಾಕಿಯಿತ್ತು. ರಿಷಬ್ ಶೆಟ್ಟಿ ಮುಂದಿನ ಶೆಡ್ಯೂಲ್‌ನಲ್ಲಿ ಇದನ್ನು ಚಿತ್ರಿಸಲು ಯೋಜಿಸಿದ್ದರು. ಮೇ 11 ರಂದು ಯಾವುದೇ ಚಿತ್ರೀಕರಣ ನಡೆದಿರಲಿಲ್ಲ, ಮತ್ತು ರಾಕೇಶ್ ಚಿತ್ರತಂಡದ ಜೊತೆ ಇರಲಿಲ್ಲ. ಈ ಸ್ಪಷ್ಟನೆ ನೀಡುವ ಮೂಲಕ ರಾಕೇಶ್ ಸಾವಿನ ಊಹಾಪೋಹಗಳಿಗೆ ತೆರೆಎಳೆದಿದೆ.

RelatedPosts

ಪ್ರೇಮದ ಊರಲಿ: ಪ್ರತೀ ದಿನ ಲಕ್ಷಾಂತರ ಟಿಕೆಟ್ಸ್ ಸೇಲ್.. ಬಾಕ್ಸ್ ಅಫೀಸ್ ಕ್ರಾಂತಿ

ಕನ್ನಡ ಚಿತ್ರಗಳಿಗೆ OTTಯಲ್ಲಿ ಡಿಮ್ಯಾಂಡೋ ಡಿಮ್ಯಾಂಡ್

ಬೃಂದಾವಿಹಾರಿ ಪೋಸ್ಟ್‌ಪೋನ್.. ಕನ್ನಡಿಗರ ಹೃದಯ ಗೆದ್ದ ಗಣಿ

ಬೃಂದಾವಿಹಾರಿ ರಿಲೀಸ್ ನವೆಂಬರ್ 20ಕ್ಕೆ ಪೋಸ್ಟ್ ಪೋನ್

ADVERTISEMENT
ADVERTISEMENT

ಹೊಂಬಾಳೆ ಫಿಲ್ಮ್ಸ್‌ನ ಸ್ಪಷ್ಟನೆ

ಹೊಂಬಾಳೆ ಫಿಲ್ಮ್ಸ್ ತಮ್ಮ ಅಧಿಕೃತ ಹೇಳಿಕೆಯಲ್ಲಿ, ರಾಕೇಶ್ ಪೂಜಾರಿಯ ನಿಧನಕ್ಕೂ ಕಾಂತಾರ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ರೀತಿ ತಪ್ಪು ಸುದ್ದಿಯು ಇತ್ತೀಚೆಗೆ ಚಿತ್ರದ ಜೂನಿಯರ್ ಕಲಾವಿದ ಕಪಿಲ್ ನಿಧನದ ಸಂದರ್ಭದಲ್ಲೂ ಹರಿದಾಡಿತ್ತು. ಕಪಿಲ್ ಕೂಡ ಚಿತ್ರೀಕರಣದ ಸಮಯದಲ್ಲಿ ಮೃತಪಟ್ಟಿದ್ದಾರೆ ಎಂಬ ಗಾಸಿಪ್‌ಗೆ ಹೊಂಬಾಳೆ ಸ್ಪಷ್ಟನೆ ನೀಡಿತ್ತು. ಅವರು ತಮ್ಮ ವೈಯಕ್ತಿಕ ಸಮಯದಲ್ಲಿ ನಿಧನರಾಗಿದ್ದರು ಎಂದು ತಿಳಿಸಿದೆ. ಈಗ ರಾಕೇಶ್ ವಿಷಯದಲ್ಲೂ ಇದೇ ರೀತಿಯ ಸುದ್ದಿ ಹರಿದಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಗ್ಯಾರಂಟಿ ನ್ಯೂಸ್‌ಗೆ ಹೊಂಬಾಳೆ ಫಿಲಂಸ್‌‌ನಿಂದ ಸ್ಪಷ್ಟನೆ ನೀಡಿದೆ.

ರಾಕೇಶ್ ಪೂಜಾರಿಯ ಕೊನೆಯ ಕ್ಷಣಗಳು

ರಾಕೇಶ್ ಅವರು ಮೇ 11 ರಂದು ಬೆಳಗ್ಗೆ ಆರೋಗ್ಯವಾಗಿದ್ದರು ಎಂದು ಅವರ ಆಪ್ತ ಸ್ನೇಹಿತ ಗೋವಿಂದೇ ಗೌಡ (ಜಿಜಿ) ತಿಳಿಸಿದ್ದಾರೆ. ಸಂಜೆ, ಕಾರ್ಕಳದ ನಿಟ್ಟೆಯಲ್ಲಿ ಗೆಳೆಯರ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಸುಸ್ತು ಎನಿಸಿತು ಎಂದು ರಾಕೇಶ್ ಹೇಳಿದ್ದರು. ವಿಡಿಯೋವೊಂದರಲ್ಲಿ ಅವರು ಎದೆಯನ್ನು ಮುಟ್ಟಿಕೊಂಡರೂ, ನಗುಮುಖದಿಂದ ಕಾಣಿಸಿಕೊಂಡಿದ್ದರು, ಆದರೆ ಅವರು ಎದೆನೋವನ್ನು ನಿರ್ಲಕ್ಷಿಸಿದ್ದರು. ಮಧ್ಯರಾತ್ರಿ ಹೃದಯಾಘಾತಕ್ಕೊಳಗಾಗಿ ಅವರು ನಿಧನರಾದರು ಎಂದು ವರದಿಗಳು ತಿಳಿಸಿವೆ.

ರಾಕೇಶ್ ಪೂಜಾರಿ ತಮ್ಮ ಹಾಸ್ಯ ಪ್ರತಿಭೆಯಿಂದ ಕನ್ನಡಿಗರ ಹೃದಯದಲ್ಲಿ ಸ್ಥಾನ ಗಳಿಸಿದ್ದರು. ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಗೆದ್ದ ಅವರು, ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ನಟನೆಯಿಂದ ಗಮನ ಸೆಳೆದಿದ್ದರು. ಅವರ ಅಕಾಲಿಕ ನಿಧನದಿಂದ ಅಭಿಮಾನಿಗಳಿಗೆ, ಕುಟುಂಬಕ್ಕೆ ಮತ್ತು ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ರಕ್ಷಿತಾ ಪ್ರೇಮ್ ಸೇರಿದಂತೆ ಅನೇಕರು ಭಾವುಕ ಸಂತಾಪ ಸೂಚಿಸಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (18)

ಕೇವಲ 600 ರೂಪಾಯಿ ವಿಚಾರಕ್ಕೆ ನಡೀತು ವ್ಯಕ್ತಿಯೊಬ್ಬನ ಭೀಕರ ಹ*ತ್ಯೆ

by ಕವಿತಾ
October 11, 2026 - 4:01 pm
0

Untitled design (17)

ಆನೇಕಲ್‌; ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ!

by ಕವಿತಾ
October 11, 2026 - 3:42 pm
0

Untitled design (16)

ಪ್ರೇಮದ ಊರಲಿ: ಪ್ರತೀ ದಿನ ಲಕ್ಷಾಂತರ ಟಿಕೆಟ್ಸ್ ಸೇಲ್.. ಬಾಕ್ಸ್ ಅಫೀಸ್ ಕ್ರಾಂತಿ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 11, 2026 - 3:31 pm
0

Untitled design (15)

ಕನ್ನಡ ಚಿತ್ರಗಳಿಗೆ OTTಯಲ್ಲಿ ಡಿಮ್ಯಾಂಡೋ ಡಿಮ್ಯಾಂಡ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 11, 2026 - 3:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (16)
    ಪ್ರೇಮದ ಊರಲಿ: ಪ್ರತೀ ದಿನ ಲಕ್ಷಾಂತರ ಟಿಕೆಟ್ಸ್ ಸೇಲ್.. ಬಾಕ್ಸ್ ಅಫೀಸ್ ಕ್ರಾಂತಿ
    October 11, 2026 | 0
  • Untitled design (15)
    ಕನ್ನಡ ಚಿತ್ರಗಳಿಗೆ OTTಯಲ್ಲಿ ಡಿಮ್ಯಾಂಡೋ ಡಿಮ್ಯಾಂಡ್
    October 11, 2026 | 0
  • Untitled design (14)
    ಬೃಂದಾವಿಹಾರಿ ಪೋಸ್ಟ್‌ಪೋನ್.. ಕನ್ನಡಿಗರ ಹೃದಯ ಗೆದ್ದ ಗಣಿ
    October 11, 2026 | 0
  • Untitled design 2026 10 10T174600.495
    ಬೃಂದಾವಿಹಾರಿ ರಿಲೀಸ್ ನವೆಂಬರ್ 20ಕ್ಕೆ ಪೋಸ್ಟ್ ಪೋನ್
    October 10, 2026 | 0
  • ಮೈಸೂರು (2)
    ಕರುನಾಡಿಗೆ KGF ರಮಿಕಾ ಸೇನ್ ರವೀನಾ ರಿಟರ್ನ್
    October 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version