ರೋಬೋ.. 2010ರಲ್ಲಿ ತೆರೆಕಂಡ ಶಂಕರ್ ನಿರ್ದೇಶನದ, ರಜನಿಕಾಂತ್ ಹಾಗೂ ಐಶ್ವರ್ಯಾ ರೈ ನಟನೆಯ ಸೈನ್ಸ್ ಫಿಕ್ಷನ್ ಎಂಟರ್ ಟೈನರ್. ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹತ್ತು, ಹಲವು ದಾಖಲೆಗಳನ್ನ ಬರೆದಿತ್ತು. ಬಾಕ್ಸ್ ಆಫೀಸ್ ನಲ್ಲೂ ಬರೋಬ್ಬರಿ 500 ಕೋಟಿ ಪೈಸಾ ವಸೂಲ್ ಮಾಡಿತ್ತು. ಅದರ ಬೆನ್ನಲ್ಲಿ ರೋಬೋ ಸೀಕ್ವೆಲ್ ರೋಬೋ-2 ಕೂಡ ಬಂದಿತ್ತು. ಆದ್ರೀಗ ರೋಬೋ ತೆರೆಕಂಡು ಒಂದೂವರೆ ದಶಕದ ಬಳಿಕ ಆ ಕಥೆ ಕದ್ದಕಥೆ ಅಂತ ಸುದ್ದಿ ಆಗ್ತಿದೆ.
ಅರುರ್ ತಮಿನಾದನ್ ಎಂಬುವವರ ಜಿಗುಬಾ ಕಾದಂಬರಿ ಆಧರಿಸಿದ ಕಥೆ ಈ ರೋಬೋ ಸಿನಿಮಾ ಆಗಿದ್ದು, ಅವರು ನಿರ್ದೇಶಕ ಶಂಕರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆಯಾದ ED, ಈ ಪ್ರಕರಣದಲ್ಲಿ ನಿರ್ದೇಶಕ ಶಂಕರ್ ಗೆ ಸೇರಿದ 10 ಕೋಟಿ ಮೌಲ್ಯದ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಂಡಿದೆ. ಶಂಕರ್ ಅವರ ಸ್ಥಿರಾಸ್ತಿಯನ್ನ ಕೂಡ ಇಡಿ ವಶಕ್ಕೆ ಪಡೆದುಕೊಂಡಿದೆ.
ಸುಜಾತ ಎಂಬುವವರ ಜೊತೆಗೂಡಿ ಶಂಕರ್ ಈ ಕಥೆಯನ್ನು ರಚಿಸಿ ಆದರಂತೆ. ಸುಜಾತ ಖ್ಯಾತ ಸಿನಿಮಾ ಕಥೆಗಾರ್ತಿ ಆಗಿದ್ದು, ಶಂಕರ್ ಅವರ ಹಲವಾರು ಸಿನಿಮಾಗಳಲ್ಲಿ ಕಥೆ, ಚಿತ್ರಕಥೆ ಒದಗಿಸಿದ್ದಾರೆ. ಇತ್ತೀಚೆಗೆಷ್ಟೇ ಶಂಕರ್ ಅವರಿಂದ ಸುಜಾತ ದೂರವಾಗಿದ್ದರು. ಇದೀಗ ಸುಜಾತ ಅವರೇ ಅರುರ್ ತಮಿನಾದನ್ ಜೊತೆಗೂಡಿ ಕೇಸ್ ದಾಖಲಿಸಿರಬಹುದು ಅನ್ನೋ ಅಲೆ ಎದ್ದಿದೆ.