ಬಾಕ್ಸ್ ಆಫೀಸ್ನಲ್ಲಿ ಸುನಾಮಿ, ಸುಂಟರಗಾಳಿ ಎಬ್ಬಿಸಿರೋ ತಲೈವಾ ರಜನಿಕಾಂತ್ರ ಜೈಲರ್-2 ಸಿನಿಮಾ ಗಲ್ಲಾ ಪೆಟ್ಟಿಗೆಗೆ ಪೆಟ್ಟು ಬೀಳುವ ಸಮಯ ಬಂದಿದೆ. ಇನ್ನೂ ರಿಲೀಸ್ ಆಗಿ ಹತ್ತು ದಿನ ಆಗಿಲ್ಲ. ಆಗಲೇ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್ ಆಗಿರೋ ಸುದ್ದಿ ಎಲ್ಲೆಡೆ ಹರಿದಾಡ್ತಿದೆ. ಇದು ಕಲೆಕ್ಷನ್ಗೆ ಭಾರೀ ಹೊಡೆತ ಬೀಳಲಿದ್ದು, ಈ ಕುರಿತ ಶಾಕಿಂಗ್ ಖಬರ್ ಇಲ್ಲಿದೆ.
- ಜೈಲರ್-2 ಬಾಕ್ಸ್ ಆಫೀಸ್ಗೆ ಬ್ರೇಕ್.. ನ-12ಕ್ಕೆ OTT ಎಂಟ್ರಿ
- 9 ದಿನ 628 ಕೋಟಿ ಪೈಸಾ ವಸೂಲ್.. ಕಲೆಕ್ಷನ್ಗೆ ಹೊಡೆತ
- ಎಲ್ಲಾ ಓಕೆ.. ಇಷ್ಟು ಬೇಗ ಯಾಕೆ..? ಅಗ್ರಿಮೆಂಟ್ದೇ ಎಫೆಕ್ಟ್
- ಫ್ಯಾಮಿಲಿ ಆಡಿಯೆನ್ಸ್ ದಿಲ್ ದೋಚಿದ ತಲೈವಾ ಜೈಲರ್-2
ಜೈಲರ್-2.. ಮೊದಲ ಭಾಗ ಜೈಲರ್ಗಿಂತ ಬಹಳ ಚೆನ್ನಾಗಿದೆ ಅನ್ನೋದನ್ನ ಗ್ಯಾರಂಟಿ ಪಿಚ್ಚರ್ ರಿವ್ಯೂ ರಿಪೋರ್ಟ್ನಲ್ಲಿ ಹೇಳಿದ್ವಿ. ಅದ್ರಂತೆ ಪ್ರೇಕ್ಷಕ ಪ್ರಭುಗಳು ಕೂಡ ಸಿನಿಮಾನ ಮುಗಿಬಿದ್ದು ನೋಡ್ತಿದ್ದಾರೆ. ಮಕ್ಕಳಿಂದ ಮುದುಕರ ವರೆಗೆ ಇಡೀ ಫ್ಯಾಮಿಲಿ ನುಗ್ಗಿ ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ತಿದ್ದಾರೆ. ಕಾಮಿಡಿ, ಮಾಸ್ ಎಲಿಮೆಂಟ್ಸ್, ಫ್ಯಾಮಿಲಿ ಸೆಂಟಿಮೆಂಟ್ಸ್ ಎಲ್ಲವೂ ಸಮರ್ಪಕವಾಗಿ ವರ್ಕ್ ಆಗಿವೆ. ಅದೇ ಕಾರಣದಿಂದ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿ, ಆರ್ಭಟಿಸುತ್ತಿದೆ ಜೈಲರ್ ಸೀಕ್ವೆಲ್.
ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ತಲೈವಾ ರಜನಿಕಾಂತ್, ಸಪೋರ್ಟಿಂಗ್ ರೋಲ್ನಲ್ಲಿ ಹೃತಿಕ್ ಗೆಸ್ಟ್ ಅಪಿಯರೆನ್ಸ್, ವಿದ್ಯಾಬಾಲನ್, ಮಿಥುನ್ ಚಕ್ರವರ್ತಿ ಹಾಗೂ ಎಸ್ ಜೆ ಸೂರ್ಯ ವಿಲನಿಸಂ, ಶಿವಣ್ಣ-ಜಾಕಿಶ್ರಾಫ್-ಮೋಹನ್ಲಾಲ್ ಕೆಮಿಯೋ ಎಲ್ಲವೂ ಅದ್ಭುತ. ಅನಿರುದ್ದ್ ರವಿಚಂದರ್ ಮ್ಯೂಸಿಕ್ ಮೋಡಿ ಮಾಡ್ತಿದ್ದು, ನೆಲ್ಸನ್ ದಿಲೀಪ್ ಕುಮಾರ್ ಅಕ್ಷರಶಃ ಮತ್ತೊಮ್ಮೆ ಮ್ಯಾಜಿಕ್ ಮಾಡಿದ್ದಾರೆ.
ಅಂದಹಾಗೆ ಜೈಲರ್-2 ತೆರೆಕಂಡ 9 ದಿನದಲ್ಲಿ ವರ್ಲ್ಡ್ವೈಡ್ ಬರೋಬ್ಬರಿ 628 ಕೋಟಿಗೂ ಅಧಿಕ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಸಾವಿರ ಕೋಟಿಯತ್ತ ಮುನ್ನುಗ್ಗುತ್ತಿದೆ. ಜೈಲರ್ ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ 650 ಕೋಟಿ. ಅಂತದ್ರಲ್ಲಿ ಇದು ಹತ್ತೇ ದಿನದಲ್ಲಿ 650 ಕೋಟಿ ಕ್ಲಬ್ ಸೇರಿದೆ. ಹೀಗಿರುವಾಗ ಸಿನಿಮಾದ ಓಟಿಟಿ ಡೇಟ್ ಹೊರಬಿದ್ದಿದೆ. ಇದೇ ನವೆಂಬರ್ 12ರಂದು ಅಮೆಜಾನ್ ಪ್ರೈಮ್ಗೆ ಎಂಟ್ರಿ ಕೊಡಲಿದೆಯಂತೆ ಜೈಲರ್-2. ಈ ಸುದ್ದಿ ಎಲ್ಲೆಡೆ ಜೋರಾಗಿ ಹರಿದಾಡ್ತಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ಗೆ ಬಹುದೊಡ್ಡ ಹೊಡತ ಬೀಳುವ ಸಾಧ್ಯತೆಯಿದೆ.
ಚೆನ್ನಾಗಿರೋ ಸಿನಿಮಾಗಳು ಒಳ್ಳೆಯ ಕಲೆಕ್ಷನ್ ಮಾಡ್ತಿರುವಾಗಲೇ ಹೀಗೆ ಓಟಿಟಿಗೆ ಲಗ್ಗೆ ಇಟ್ರೆ ಆ ಸಿನಿಮಾದ ನಿರ್ಮಾಪಕರುಗಳಿಗೆ ಬಹುದೊಡ್ಡ ಲಾಸ್ ಆಗಲಿದೆ. ಇದು ಓಟಿಟಿ ಪ್ಲಾಟ್ಫಾರ್ಮ್ ಜೊತೆಗಿನ ಅಗ್ರಿಮೆಂಟ್ ಆಗಿರಬಹುದು. ಆದ್ರೆ ಹೌಸ್ಫುಲ್ ಪ್ರದರ್ಶನ ಕಾಣ್ತಿರುವಾಗ ದಿಢೀರ್ ಅಂತ ಓಟಿಟಿ ಅಂದ್ರೆ.. ಥಿಯೇಟರ್ಗೆ ಹೋಗಿ ನೋಡೋರು ಕೂಡ ಓಟಿಟಿಗೆ ಬಂದ್ಮೇಲೆ ನೋಡಿದ್ರೆ ಆಯ್ತು ಅಂತ ಹಿಂದೆ ಸರಿಯುತ್ತಾರೆ. ಹೀಗಾಗಿ ಅಗ್ರಿಮೆಂಟ್ ಮಾಡಿಕೊಳ್ಳೋಕೆ ಮುನ್ನ ಹತ್ತು ಬಾರಿ ಯೋಚಿಸಿ ಮಾಡಿಕೊಂಡ್ರೆ ನಿರ್ಮಾಪಕರಿಗೆ ಮತ್ತಷ್ಟು ಲಾಭ ಆಗಲಿದೆ. ಅಂದಹಾಗೆ ಓಟಿಟಿ ರೈಟ್ಸ್ 160 ಕೋಟಿ ಬೃಹತ್ ಮೊತ್ತಕ್ಕೆ ಸೋಲ್ಡ್ಔಟ್ ಆಗಿದ್ದು, ಪ್ರೈಮ್ಗೆ ಎಂಟ್ರಿ ಕೊಡಲಿದ್ದಾರೆ ಜೈಲರ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





