ರಾಜಮೌಳಿ.. ರಾಜಮೌಳಿ.. ರಾಜಮೌಳಿ.. ಲೋಕಲ್ ನಿಂದ ಗ್ಲೋಬಲ್ ವರೆಗೆ, ನ್ಯಾಷನಲ್- ಇಂಟರ್ ನ್ಯಾಷನಲ್ ವರೆಗೆ ಸದ್ಯ ಇವರದ್ದೇ ಸುದ್ದಿ. ಅದಕ್ಕೆ ಕಾರಣ ಶ್ರೀನಿವಾಸ್ ರಾವ್ ಎಂಬುವ ವ್ಯಕ್ತಿ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ ಅವರ ಮೇಲೆ ಮಾಡಿರುವ ಗಂಭೀರ ಆರೋಪ. ಹೌದು.. ನಾನು ರಾಜಮೌಳಿಗಾಗಿ ನನ್ನ ಹುಡುಗಿಯನ್ನೇ ತ್ಯಾಗ ಮಾಡಿದೆ. ಹುಡುಗಿ ಅಷ್ಟೇ ಅಲ್ಲ, ಕಂಪ್ಲೀಟ್ ನನ್ನ ಜೀವನವನ್ನೇ ತ್ಯಾಗ ಮಾಡಿದೆ ಅಂತೆಲ್ಲಾ ಸೆಲ್ಫಿ ವಿಡಿಯೋ ಮಾಡೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ ಡೈರೆಕ್ಟರ್ ರಾಜಮೌಳಿ ಬಹುಕಾಲದ ಗೆಳೆಯ ಶ್ರೀನಿವಾಸ್ ರಾವ್.
ನನಗೀಗ 55 ವರ್ಷ ವಯಸ್ಸು. ಇಂದಿಗೂ ನಾ ಸಿಂಗಲ್ ಆಗಿಯೇ ಉಳಿದುಬಿಟ್ಟಿದ್ದೇನೆ. ಆರ್ಯ-2 ಸಿನಿಮಾ ರೀತಿ ನಾನು ಮದ್ವೆ ಆಗಬೇಕಿದ್ದ ಹುಡುಗಿಯನ್ನ ನನ್ನ ಸ್ನೇಹಿತನಿಗಾಗಿ ತ್ಯಾಗ ಮಾಡಿದೆ. ಅದನ್ನ ನಾನೀಗ ಸಿನಿಮಾ ಮಾಡ್ತೀನಿ ಅಂದಿದ್ದೇ ತಡ, ನನಗೆ ಕೊಡಬಾರದ ಹಿಂಸೆ ಕೊಡ್ತಿದ್ದಾರೆ ರಾಜಮೌಳಿ ಮತ್ತು ಅವರ ಪತ್ನಿ ರಮಾ ರಾಜಮೌಳಿ ಅನ್ನೋ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರಿಬ್ಬರಿಂದಲೇ ನಾನು ಸಾಯುತ್ತಿದ್ದೇನೆ. ಇದು ನನ್ನ ಡೆತ್ ಸ್ಟೇಟ್ಮೆಂಟ್ ಅಂತ ಒಂದ್ಕಡೆ ಬರವಣಿಗೆ ಮತ್ತೊಂದ್ಕಡೆ ಸೆಲ್ಫಿ ವಿಡಿಯೋ ಮೂಲಕ ಸ್ಪಷ್ಟಪಡಿಸಿ ಹರಿಬಿಟ್ಟಿದ್ದಾರೆ.
ಅಂದಹಾಗೆ ಈ ಶ್ರೀನಿವಾಸ್ ರಾವ್ ಯಾರು..? ರಾಜಮೌಳಿಗೂ ಈತನಿಗೂ ಏನು ಸಂಬಂಧ ಅಂತ ನೋಡೋದಾದ್ರೆ.. ಶ್ರೀನಿವಾಸ್ ರಾವ್ ಅಲಿಯಾಸ್ ಶ್ರೀನು, ಬಹಳ ವರ್ಷಗಳಿಂದ ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್ ಗಳಲ್ಲಿ ಗುರ್ತಿಸಿಕೊಂಡಂತಹ ಒಬ್ಬ ವ್ಯಕ್ತಿ. ರಾಜಮೌಳಿ ಸ್ಟೂಡೆಂಟ್ ನಂ.1 ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗೋಕೆ ಮೊದಲಿನಿಂದಲೂ ಒಡನಾಟವಿರೋ ವ್ಯಕ್ತಿ. ರಾಘವೇಂದ್ರ ರಾವ್ ನಿರ್ಮಾಣದ ಶಾಂತಿ ನಿವಾಸಂ ಸೀರಿಯಲ್ ಗೆ ರಾಜಮೌಳಿ ಡೈರೆಕ್ಟ್ ಮಾಡ್ತಿದ್ದ ದಿನಗಳಿಂದ ಸ್ನೇಹಿತರು. ಅಲ್ಲದೆ, ಮೌಳಿ ಹಂತ ಹಂತವಾಗಿ ಸ್ಟಾರ್ ಡೈರೆಕ್ಟರ್ ಆಗಿ ಬೆಳೆದುಕೊಂಡು ಬಂದಂತೆ, ಅವ್ರೊಟ್ಟಿಗೆ ಶ್ರೀನಿವಾಸ್ ರಾವ್ ಕೂಡ ಪ್ರೊಡಕ್ಷನ್ ಕೆಲಸಗಳನ್ನ ನೋಡ್ಕೊಳ್ತಾ ಬರ್ತಿದ್ರಂತೆ. ಜೂನಿಯರ್ ಎನ್ ಟಿ ಆರ್ ಹಾಗೂ ರಾಜಮೌಳಿ ಕಾಂಬೋನಲ್ಲಿ ಬಂದಂತಹ ಯಮದೊಂಗ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರಂತೆ ಈ ಶ್ರೀನಿವಾಸ್ ರಾವ್.
ಅಂದಹಾಗೆ ರಾಜಮೌಳಿಯ ಸಿನಿಮಾಗಳು ಸಾವಿರಾರು ಕೋಟಿ ಗಳಿಸುತ್ತವೆ ಅನ್ನೋದು ಪ್ರೂವ್ ಆಗಿದೆ. ಆದ್ರೀಗ ರಾಜಮೌಳಿ ಚಿತ್ರದ ಬಜೆಟ್ಟೇ ಸಾವಿರಾರು ಕೋಟಿಗಳು ಅನ್ನೋದು ಇಂಟರೆಸ್ಟಿಂಗ್. ಹೌದು.. ಬಾಹುಬಲಿ, ತ್ರಿಬಲ್ ಆರ್ ಚಿತ್ರಗಳ ಬಳಿಕ ಪ್ರಿನ್ಸ್ ಮಹೇಶ್ ಬಾಬು ಜೊತೆ ಇನ್ನೂ ಹೆಸರಿಡದ ಸಿನಿಮಾವೊಂದರ ಶೂಟಿಂಗ್ ಶುರುವಿಟ್ಟಿದ್ದಾರೆ ಮೌಳಿ. ಇತ್ತೀಚೆಗೆ ಮುಹೂರ್ತ ಮಾಡಿ, ಶೂಟಿಂಗ್ ಕೂಡ ಕಿಕ್ ಸ್ಟಾರ್ಟ್ ಮಾಡಿದ್ದಾರೆ. ಹಾಲಿವುಡ್ ಡೈರೆಕ್ಟರ್ ಗಳೇ ಬೆರಗಾಗೋ ರೇಂಜ್ ಗೆ ಆಸ್ಕರ್ ರೇಸ್ ನಲ್ಲಿ ನಾಟು ನಾಟು ಘಾಟು ಹಬ್ಬಿಸಿದ್ದ ಮೌಳಿ, ಇದೀಗ ಥೇಟ್ ಹಾಲಿವುಡ್ ಸ್ಟಾಂಡರ್ಡ್ ಮೂವಿ ಮಾಡಲು ಹೊರಟಿದ್ದಾರೆ. ಇದೀಗ ಇಂತಹ ಸಮಯದಲ್ಲಿ ಅವರ ಮೇಲೆ ಈ ರೀತಿಯ ಗಂಭೀರ ಆರೋಪ ಬಂದಿರೋದು ಹತ್ತು ಹಲವು ಗುಮಾನಿಗಳಿಗೆ ಸಾಕ್ಷಿ ಆಗ್ತಿದೆ.
ಇಷ್ಟಕ್ಕೂ ಆರೋಪ ಮಾಡ್ತಿರೋ ಶ್ರೀನಿವಾಸ್ ರಾವ್ ಉದ್ದೇಶ ಏನು..? ಆತನ ಹಿಂದಿನ ಮಾಸ್ಟರ್ ಮೈಂಡ್ ಯಾರು..? ನಿಜಕ್ಕೂ ಆತನ ಮೆಂಟಲ್ ಸ್ಟೇಟಸ್ ಹೇಗಿದೆ ಅನ್ನೋದು ಕೂಡ ಬಯಲಿಗೆ ಬರಬೇಕಿದೆ. ದೊಡ್ಡವರನ್ನ ಟೀಕಿಸಿದ್ರೆ ದೊಡ್ಡವರಾಗಿಬಿಡ್ತೀವಿ ಅನ್ನೋದು ಹಲವರ ದಡ್ಡತನ. ಹಾಗಂತ ಅವರು ದಡ್ಡರು ಅಂತಲೂ ನಾವು ಹೇಳ್ತಿಲ್ಲ. ಇನ್ ಕೇಸ್ ಅವರ ಆರೋಪ ಸರಿಯಾಗಿದ್ರೆ, ಅದಕ್ಕೆ ಸಾಕ್ಷಿಗಳಿದ್ರೆ, ಕೋರ್ಟ್ ಇದೆ, ಕಾನೂನು ಇದೆ. ಫಸ್ಟ್ ಆಫ್ ಆಲ್ ಆತ್ಮಹತ್ಯೆ ಮಾಡ್ಕೊಳ್ತಿದ್ದೇನೆ ಅಂತ ಹೇಳೋದೇ ಕಾನೂನಿನ ಪ್ರಕಾರ ತಪ್ಪು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರೋ ರಾಜಮೌಳಿ ಮೇಲೆ ಗಂಭೀರ ಆರೋಪ ಮಾಡಿ, ರಾತ್ರೋರಾತ್ರಿ ಫೇಮಸ್ ಆಗೋಕೆ ಈ ರೀತಿ ಮಾಡಿದ್ರೂ ಅಚ್ಚರಿಯಿಲ್ಲ ಅನ್ನೋದು ಒಂದಷ್ಟು ಹೈದ್ರಾಬಾದ್ ಮೂಲಗಳ ಮಾಹಿತಿ. ಅಂದಹಾಗೆ ಈ ಹಿಂದೆ ಕೂಡ ಈ ರೀತಿ ತೆಲುಗು ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರುಗಳ ಮೇಲೆ ಇಲ್ಲ ಸಲ್ಲದ ಆರೋಪಗಳನ್ನ ಮಾಡಿದ್ರು ರಾಕೇಶ್ ಮಾಸ್ಟರ್. ಹೌದು.. ತೆಲುಗು ಚಿತ್ರರಂಗದ ಫೇಮಸ್ ಕೊರಿಯೋಗ್ರಾಫರ್ ರಾಕೇಶ್ ಮಾಸ್ಟರ್, ಸಿಕ್ಕ ಸಿಕ್ಕವ್ರ ಮೇಲೆ ಆರೋಪಗಳನ್ನ ಮಾಡಿ, ಎಲ್ಲಾ ಸ್ಟಾರ್ ಫ್ಯಾನ್ಸ್ ನಿಂದ ಛೀಮಾರಿ ಹಾಕಿಸಿಕೊಂಡಿದ್ರು. 2023ರಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಆತ ಇಹಲೋಕ ಕೂಡ ತ್ಯಜಿಸಿದ್ರು. ಆದ್ರೆ ಅವರ ಮಾತುಗಳನ್ನ ಯಾರೂ ಸಹ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ರಾಕೇಶ್ ಮಾಸ್ಟರ್ ಹಾದಿ ಹಿಡಿದ್ರಾ ಶ್ರೀನಿವಾಸ್ ರಾವ್ ಅನ್ನೋದು ಕೂಡ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇದೆಲ್ಲಾ ಏನೇ ಇರಲಿ. ಡೆತ್ ನೋಟ್ ಬರೆದು, ಡೆತ್ ಸ್ಟೇಟ್ಮೆಂಟ್ ನ ವಿಡಿಯೋಕರಿಸಿರೋ ಶ್ರೀನಿವಾಸ್ ರಾವ್ ಜೀವಂತವಾಗಿರಲಿ ಅನ್ನೋದು ನಮ್ಮ ಆಶಯ. ದಯವಿಟ್ಟು ಯಾರೂ ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ. ಆತ್ಮಹತ್ಯೆ ಮಹಾಪರಾಧ.