ಚಿತ್ರರಂಗದಿಂದ ದೂರ ಆಗಿಬಿಡ್ತಾರಾ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಂತ ಬೇಸರದಲ್ಲಿದ್ದ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳಿಗೆ ಐ ಆ್ಯಮ್ ಬ್ಯಾಕ್ ಅಂದಿದ್ದಾರೆ ಆಂಧ್ರ ಡಿಸಿಎಂ. ಯೆಸ್.. ಹರಿಹರ ವೀರಮಲ್ಲು ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಐತಿಹಾಸಿಕ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಕಲ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬರ್ತಿದೆ.
- ಧರ್ಮ ಯುದ್ಧಕ್ಕೆ ವೀರಮಲ್ಲು ಸನ್ನದ್ಧ.. ಪವರ್ ಪಾಲಿಟ್ರಿಕ್ಸ್
- ಡಿಸಿಎಂ ಆದ ಬಳಿಕ ಪವನ್ ಕಲ್ಯಾಣ್ ಚೊಚ್ಚಲ ಸಿನಿಮಾ
- ಔರಂಗಜೇಬ್ ವಿರುದ್ಧ ವೀರಮಲ್ಲು ಮಹಾ ಧರ್ಮ ಯುದ್ಧ
- ಕೊಹಿನೂರು ಡೈಮಂಡ್ ಕದಿಯುವವನ ಪಾತ್ರದಲ್ಲಿ DCM
ಇದು ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಟ್ ಟಾಲಿವುಡ್ ಎಂಟರ್‌ಟೈನರ್ ಹರಿಹರ ವೀರಮಲ್ಲು ಚಿತ್ರದ ಟ್ರೈಲರ್ ಝಲಕ್. ಪವರ್ ಸ್ಟಾರ್ ಪವನ್ ಕಲ್ಯಾಣ್, ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರವೊಂದರಲ್ಲಿ ಬಣ್ಣ ಹಚ್ಚಿದ್ದು, ಧರ್ಮಕ್ಕಾಗಿ ಮೊಘಲರ ವಿರುದ್ಧ ಯುದ್ಧ ಸಾರುವ, ಗತವೈಭವವನ್ನು ಇಂದಿನ ಜನರೇಷನ್‌ಗೆ ಉಣಬಡಿಸಲು ಸಜ್ಜಾಗಿರೋ ಸಿನಿಮಾ.
ಟೀಸರ್ ಹಾಗೂ ಸಾಂಗ್ಸ್‌ನಿಂದ ಸಿನಿಮಾ ಮೇಲಿನ ಭರವಸೆ ದುಪ್ಪಟ್ಟು ಮಾಡಿದ್ದ ಈ ಸಿನಿಮಾ, ಇದೀಗ ಬೊಂಬಾಟ್ ಟ್ರೈಲರ್‌ನಿಂದ ನಾಡಿಮಿಡಿತ ಹೆಚ್ಚಿಸಿದೆ. ಹೌದು.. 17ನೇ ಶತಮಾನ ಮೊಘಲ್ ಸಾಮ್ರಾಜ್ಯದ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯೋ ಈ ಕಥೆಗೆ ಕ್ರಿಶ್ ಹಾಗೂ ಜ್ಯೋತಿ ಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೇಳಿ ಕೇಳಿ ಪವನ್ ಕಲ್ಯಾಣ್ ಮೊದಲೇ ಮಾರ್ಷಲ್ ಆರ್ಟ್ಸ್‌ನಲ್ಲಿ ಪಂಟರ್. ಅವರನ್ನ ಇಟ್ಕೊಂಡು ಕತ್ತಿ ಹಾಗೂ ಈಟಿ ವರಸೆ ಮಾಡಿಸಿದ್ದಾರೆ ಡೈರೆಕ್ಟರ್.
ಕೊಹಿನೂರು ಡೈಮಂಡ್‌ನ ಕದಿಯುವ ಮಹಾವೀರನ ಪಾತ್ರದಲ್ಲಿ ಪವನ್ ಕಲ್ಯಾಣ್ ಬಣ್ಣ ಹಚ್ಚಿದ್ದು, ಕೊನೆಗೆ 6ನೇ ಮೊಘಲ್ ಚಕ್ರವರ್ತಿ ಔರಂಗಜೇಬ್‌ನನ್ನೇ ಅಲ್ಲಾಡಿಸುವಂತಹ ಕಥಾನಕವಿದು. ಬಾಲಿವುಡ್ ಸೆನ್ಸೇಷನ್ ಬಾಬಿ ಡಿಯೋಲ್ ಇಲ್ಲಿ ಔರಂಗಜೇಬ್ ಪಾತ್ರದಲ್ಲಿ ಕಾಣ ಸಿಗಲಿದ್ದು, ಇವರಿಬ್ಬರ ನಡುವಿನ ಕಾಳಗವನ್ನು ನೋಡೋಕೆ ಎರಡು ಕಣ್ಣು ಸಾಲದು ಅಂತಿದ್ದಾರೆ ಸಿನಿಪಂಡಿತರು.
ಅಂದಹಾಗೆ ಪವರ್ ಸ್ಟಾರ್ ಡಿಸಿಎಂ ಆದ ಬಳಿಕ ರಿಲೀಸ್ ಆಗ್ತಿರೋ ಚೊಚ್ಚಲ ಸಿನಿಮಾ ಹರಿಹರ ವೀರಮಲ್ಲು. ಇತಿಹಾಸದಲ್ಲಿ ಹುದುಗಿ ಹೋಗಿರೋ ಅಂತಹ ನೈಜ ಕಥೆಗೆ ಕನ್ನಡಿ ಆಗಿದೆ ಈ ಸಿನಿಮಾ. ಧರ್ಮ ಸಂಸ್ಥಾಪನೆಗಾಗಿ ಹರಿಹರ ವೀರಮಲ್ಲು ಅನ್ನೋ ಮಹಾ ವೀರ ಮಾಡಿದ ತ್ಯಾಗ, ಬಲಿದಾನಗಳ ದೃಶ್ಯಕಾವ್ಯ ಇದಾಗಲಿದೆ. ನಿಧಿ ಅಗರ್ವಾಲ್ ಇಲ್ಲಿ ಪವನ್ ಕಲ್ಯಾಣ್‌ಗೆ ಜೋಡಿಯಾಗಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನರ್ಗೀಸ್, ನೋರಾ ಸೇರಿದಂತೆ ಸಾಕಷ್ಟು ಮಂದಿಯ ಗ್ಲಾಮರ್ ಚಿತ್ರಕ್ಕೆ ಮತ್ತಷ್ಟು ಮೆರುಗು ತರಲಿದೆ.
54 ವರ್ಷದ ಪವನ್ ಕಲ್ಯಾಣ್, ಯಂಗ್‌ಸ್ಟರ್ಸ್‌ನ ನಾಚಿಸುವಂತಹ ಎನರ್ಜಿಯಿಂದ ಯುದ್ಧ ಸನ್ನಿವೇಶಗಳು ಹಾಗೂ ಸಾಹಸ ದೃಶ್ಯಗಳನ್ನ ಮಾಡಿದ್ದಾರೆ. ಅವ್ರ ಹಾರ್ಡ್ ವರ್ಕ್ ಹಾಗು ಡೆಡಿಕೇಷನ್‌ಗೆ ಇಡೀ ದೇಶ ಹೊಗಳುತ್ತಿದೆ. ಡಿಸಿಎಂ ಆದ ಬಳಿಕ ಗೇಮ್ ಚೇಂಜರ್ ಆಗಿ ಮೋದಿ ದಿಲ್ ಗೆದ್ದಿರೋ ಪವನ್, ಸದ್ಯ ನ್ಯಾಷನಲ್ ಲೆವೆಲ್ ಲೀಡರ್‌ಗಳಂತೆ ಫೇಮಸ್. ಹಾಗಾಗಿ ಪರಭಾಷೆಗಳಲ್ಲೂ ಈ ಸಿನಿಮಾದ ಟ್ರೈಲರ್‌ಗೆ ಬೊಂಬಾಟ್ ರೆಸ್ಪಾನ್ಸ್ ಸಿಗ್ತಿದೆ.
ಐದು ಕೋಟಿಗೂ ಅಧಿಕ ವೀವ್ಸ್‌ನಿಂದ ಟ್ರೈಲರ್ ಟ್ರೆಂಡಿಂಗ್‌ನಲ್ಲಿದ್ದು, ಡಿಸಿಎಂ ಸಾಹೇಬರ ಮೊದಲ ಐತಹಾಸಿಕ ಸಿನಿಮಾ ಅನ್ನೋ ಕಾರಣಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಸೆಲೆಬ್ರೇಷನ್‌ಗೆ ಸಜ್ಜಾಗಿದ್ದಾರೆ ಪವನ್ ಫ್ಯಾನ್ಸ್. ಅದೇನೇ ಇರಲಿ, ಇದೇ ಜುಲೈ 24ಕ್ಕೆ ಹರಿಹರ ವೀರ ಮಲ್ಲು ಚಿತ್ರದಿಂದ ಬಿಗ್ ಸ್ಕ್ರೀನ್ ಮೇಲೆ ಪವರ್‌ಫುಲ್ ಪವರ್ ಸ್ಟಾರ್ಮ್ ಕನ್ಫರ್ಮ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





