ಇಯರ್ ಎಂಡ್ಗೆ ಬರಬೇಕಿದ್ದ ಅಜಯ್ ರಾವ್-ಬೃಂದಾ ಆಚಾರ್ಯ ಪಾರ್ಟ್ನರ್ ಮೂವಿ ಸಂಕ್ರಾಂತಿಗೆ ಪೋಸ್ಟ್ಪೋನ್ ಆಗಿದೆ. ಸಾಂಗ್ಸ್ನಿಂದಲೇ ಚಿತ್ರಪ್ರೇಮಿಗಳಲ್ಲಿ ಕಾತರತೆ ಹೆಚ್ಚಿಸಿದ್ದ ಲವ್ ಕಮ್ ಫ್ಯಾಮಿಲಿ ಎಂಟರ್ಟೈನರ್.. ಮುಂದಕ್ಕೆ ಹೋಗೋಕೆ ಕಾರಣ ಏನು..? ಚಿತ್ರದ ವಿಶೇಷತೆ ಏನು ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ…
- ಸಂಕ್ರಾಂತಿಗೆ ಪಾರ್ಟ್ನರ್ ಪೋಸ್ಟ್ಪೋನ್.. ಲೇಟಾದ್ರೂ ಲೇಟೆಸ್ಟ್
- ಯೂತ್ ಜೊತೆ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಪಾರ್ಟ್ನರ್..!
- ಅಜಯ್ ರಾವ್-ಬೃಂದಾ ಜೊತೆ ರಂಗಾಯಣ ರಘು- ಚಿತ್ಕಲಾ..!
- ಸಾಂಗ್ಸ್ ಸೂಪರ್ ಹಿಟ್.. ಹೊಸ ವರ್ಷದ ಭರವಸೆಯ ಸಿನಿಮಾ
ಜನ ಸಿನಿಮಾನ ಮೆಚ್ಚಿಕೊಂಡು ಥಿಯೇಟರ್ಗೆ ನುಗ್ಗಬೇಕು ಅಂದ್ರೆ ಕಂಟೆಂಟ್ ಬಹಳ ಮುಖ್ಯ. ಅಷ್ಟೇ ಅಲ್ಲ.. ಯಾವ ಸಮಯದಲ್ಲಿ ಸಿನಿಮಾನ ರಿಲೀಸ್ ಮಾಡ್ತೀವಿ ಅನ್ನೋದು ಅದಕ್ಕಿಂತ ಮುಖ್ಯ. ಯೆಸ್.. ಇದನ್ನ ಯಾಕೆ ಹೇಳ್ತಿದ್ದೀವಿ ಅಂದ್ರೆ.. ವರ್ಷಾಂತ್ಯದ ಗಡಿಯಲ್ಲಿ ನಾವಿದ್ದೀವಿ. ತಿಂಗಳು ಕಳೆದರೆ ಹೊಸ ವರ್ಷ ಶುರು. ಹಾಗಾಗಿ ರಿಲೀಸ್ ಆಗದೇ ಉಳಿದಿರೋ ಸಿನಿಮಾಗಳೆಲ್ಲಾ ಇಯರ್ ಎಂಡ್ಗೆ ಥಿಯೇಟರ್ಗೆ ಬರೋ ಧಾವಂತದಲ್ಲಿ ಇರುತ್ತವೆ. ಒಂಥರಾ ಟ್ರಾಫಿಕ್ ಜಾಮ್ ಅನ್ನಬಹುದು. ವಾರಕ್ಕೆ ಐದರಿಂದ ಏಳೆಂಟು ಚಿತ್ರಗಳು ತೆರೆಗಪ್ಪಳಿಸುತ್ತಿದ್ದು.. ಥಿಯೇಟರ್ ಸಮಸ್ಯೆ ಜೊತೆಗೆ ಕಲೆಕ್ಷನ್ ಮೇಲೂ ಅದು ಪ್ರತಿಕೂಲ ಪರಿಣಾಮ ಬೀರಲಿದೆ.
ಅಂತಹ ಯಾವುದೇ ತಲೆ ನೋವು ಬೇಡ ಅಂತಲೇ ಅಜಯ್ ರಾವ್ ಹಾಗೂ ಬೃಂದಾ ಆಚಾರ್ಯ ನಟನೆಯ ಪಾರ್ಟ್ನರ್ ಮೂವಿ ಈ ವರ್ಷಾಂತ್ಯದ ಬದಲಿಗೆ.. 2027ರ ಹೊಸ ವರ್ಷದಲ್ಲಿ ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗಿದೆ. ಅಂದಹಾಗೆ ಸಿನಿಮಾ ಲೇಟ್ ಆದಷ್ಟೂ ಲೇಟೆಸ್ಟ್ ಆಗಿ ಬರಲಿದೆ ಅನ್ನೋದು ಕಾತರಿ ಆಗಿದೆ. ಹೇಳ್ಬೇಕು ಅಂದ್ರೆ ವರ್ಷಾಂತ್ಯಕ್ಕೆ ಬರೋದಾಗಿ ಯಾವುದೇ ನಿಖರವಾದ ಡೇಟ್ ಕೂಡ ಅನೌನ್ಸ್ ಮಾಡಿರಲಿಲ್ಲ ಚಿತ್ರತಂಡ. ಆದ್ರೀಗ ಡಿಸ್ಟ್ರಿಬ್ಯೂಟರ್ ಸಲಹೆ, ಸೂಚನೆಯಂತೆ ಪಾರ್ಟ್ನರ್ ಜನವರಿ 15ರಂದು ಸಂಕ್ರಾಂತಿ ಹಬ್ಬಕ್ಕೆ ಬರ್ತಿದೆ.
ಶಿವ ತೇಜಸ್ ನಿರ್ದೇಶನದ ಈ ಸಿನಿಮಾ ಯೂತ್ ಜೊತೆ ಫ್ಯಾಮಿಲಿ ಆಡಿಯೆನ್ಸ್ಗೂ ಇಷ್ಟವಾಗಲಿದ್ದು.. ಹದಿ ಹರೆಯದ ಮನಸ್ಸುಗಳ ಜೊತೆ ಕೌಟುಂಬಿಕ ನೆಲೆಗಟ್ಟಿನಲ್ಲಿ ಈ ಚಿತ್ರವನ್ನ ಕಟ್ಟಿದ್ದಾರೆ. ಅದಕ್ಕೆ ಸದ್ಯ ರಿಲೀಸ್ ಆಗಿರೋ ಎರಡು ಸಾಂಗ್ಸ್ ಸಾಕ್ಷಿ. ಅಮೋರಾ ಸಾಂಗ್ ಅಂತೂ ಯೂತ್ ದಿಲ್ ದೋಚಿದೆ. ಸಿಕ್ಕಾಪಟ್ಟೆ ಮಂದಿ ರೀಲ್ಸ್ ಕೂಡ ಮಾಡಿದ್ದು.. ಅಜಯ್ ರಾವ್-ಬೃಂದಾ ಕೆಮಿಸ್ಟ್ರಿ ಹಾಗೂ ಡ್ಯಾನ್ಸ್ಗೆ ಕ್ಲೀನ್ ಬೋಲ್ಡ್ ಆಗಿಬಿಟ್ಟಿದ್ದಾರೆ.
ಅಮೋರಾ ಸಾಂಗ್ ನಂತ್ರ ಬಿಡುಗಡೆಯಾದ ಲವಲವಿಕೆ ಗೀತೆ ಕೂಡ ಕಣ್ಣಿಗೂ ತಂಪು.. ಕಿವಿಗೂ ಇಂಪು. ಹೌದು.. ರಂಗಾಯಣ ರಘು ಹಾಗೂ ಚಿತ್ಕಲಾ ನಟ ಅಜಯ್ ರಾವ್ ತಂದೆ-ತಾಯಿಯಾಗಿ ಕಾಣಸಿಗಲಿದ್ದು.. ಸೊಸೆಯನ್ನ ಮನೆ ತುಂಬಿಸಿಕೊಳ್ಳೋ ಪರಿ, ಅವರ ನಡುವಿನ ಬಾಂಧವ್ಯ, ಬಣ್ಣಿಸಲಾಗದ ಭಾವನೆಗಳು, ಎಮೋಷನ್ಸ್ ಈ ಹಾಡಲ್ಲಿ ಕಾಣಸಿಕ್ಕಿವೆ. ಹಾಗಾಗಿ ಇದು ಹೊಸದಾಗಿ ಮದ್ವೆಯಾದ ನೂತನ ದಂಪತಿ ಹಾಗೂ ಕುಟುಂಬಸ್ಥರಲ್ಲಿ ನಡೆಯೋ ಏಳು ಬೀಳುಗಳನ್ನ ಎಳೆ ಎಳೆಯಾಗಿ ಬಿಚ್ಚಿಡುವ ಸೂಚನೆ ನೀಡಿದೆ. ಹೊಡಿ ಬಡಿ ಕಡಿ ಚಿತ್ರಗಳ ನಡುವೆ ಹೀಗೆ ವಾಸ್ತವಕ್ಕೆ ಹತ್ತಿರ ಇರೋ ಕೌಟುಂಬಿಕ ನೆಲೆಗಟ್ಟಿನ ಚಿತ್ರಗಳು ಜನಕ್ಕೆ ಜಾಸ್ತಿ ಇಷ್ಟ ಆಗ್ತಿದ್ದು.. ಪಾರ್ಟ್ನರ್ ಚಿತ್ರ ಕೂಡ ಕನ್ನಡ ಚಿತ್ರಪ್ರೇಮಿಗಳಿಗೆ ರುಚಿಸುವ ಲಕ್ಷಣ ತೋರಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





