ಬಹುಭಾಷಾ ನಟಿ ಮೃಣಾಲ್ ಠಾಕೂರ್ ದಿನ ನಟ ಧನುಷ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಅಂತೆ ಕಂತೆಗಳಿಗೆ ಇತ್ತೀಚೆಗಷ್ಟೇ ಬ್ರೇಕ್ ಬಿದ್ದಿತ್ತು. ಇದೀಗ ಮತ್ತೊಬ್ಬ ಸ್ಟಾರ್ ಜೊತೆ ಆಕೆಯ ಹೆಸರು ದಟ್ಟವಾಗಿ ಕೇಳಿಬರ್ತಿದೆ. ಇಂಟರೆಸ್ಟಿಂಗ್ ಅಂದ್ರೆ ಆತ ಕ್ರಿಕೆಟ್ ಲೋಕದ ಸ್ಟಾರ್. ಇಷ್ಟಕ್ಕೂ ಯಾರು ಆ ಸ್ಟಾರ್ ಕ್ರಿಕೆಟರ್..? ಡೇಟಿಂಗ್‌ನಲ್ಲಿ ಸಿಕ್ಕಿ ಬಿದ್ದಿದ್ದು ಹೇಗೆ..? ವಿರಾಟ್-ಅನುಷ್ಕಾ ರೀತಿ ಮತ್ತೊಂದು ಕಲ್ಯಾಣವಾಗುತ್ತಾ ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.
- ಜೈಸ್ವಾಲ್ ಜೊತೆ ಮೃಣಾಲ್.. ಕ್ರಿಕೆಟರ್ ಡೇಟ್ ವಿತ್ ಗ್ಲಾಮರ
- ಒಂದೇ ಕೆಫೆಯಲ್ಲಿ ತಾರೆಯರ ಮಿಂಚು.. ವಿಡಿಯೋ ವೈರಲ್..!
- ಇಷ್ಟು ದಿನ ಧನುಷ್ ಜೊತೆ ಮೃಣಾಲ್ ಹೆಸರು.. ಈಗ ಜೈಸ್ವಾಲ್
- ಸಾಲು ಸಾಲು ಸಕ್ಸಸ್‌ಫುಲ್ ಚಿತ್ರಗಳಿಂದ ಸದ್ದು ಮಾಡ್ತಿರೋ ನಟಿ
ಸೆಲೆಬ್ರಿಟಿಗಳ ಪರ್ಸನಲ್ ಲೈಫ್ ಬಗ್ಗೆ ಅವರುಗಳ ಫ್ಯಾನ್ಸ್‌ಗಷ್ಟೇ ಅಲ್ಲ, ಶ್ರೀಸಾಮಾನ್ಯರಿಗೂ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ. ಅದ್ರಲ್ಲೂ ಸಿನಿಮಾ ತಾರೆಯರು ಒಟ್ಟಿಗೆ ಒಮ್ಮೆ ಯಾರೊಟ್ಟಿಗಾದ್ರೂ ಕಾಣಿಸಿಕೊಂಡ್ರೆ ಕಥೆ ಮುಗೀತು. ಅವ್ರ ಡೇಟಿಂಗ್, ಸೀಕ್ರೆಟ್ ಚಾಟಿಂಗ್, ಮೀಟಿಂಗ್ ಎಲ್ಲವೂ ಸುದ್ದಿಯಾಗ್ತಾನೇ ಇರುತ್ತೆ. ಪಾಪರಾಝಿಗಳ ಕಣ್ತಪ್ಪಿಸಿ ಅವರು ಎಲ್ಲೂ ಓಡಾಡೋಕೆ ಸಾಧ್ಯವೇ ಇಲ್ಲ ಅನ್ನಬಹುದು. ಸದ್ಯ ಬಹುಭಾಷಾ ನಟಿ ಮೃಣಾಲ್ ಠಾಕೂರ್‌ಗೆ ಈಗ ಅಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ.
ಯೆಸ್.. ಇಷ್ಟು ದಿನ ನಟ ಧನುಷ್ ಜೊತೆ ಮೃಣಾಲ್ ಹೆಸರು ಥಳುಕು ಹಾಕಿಕೊಳ್ತಿತ್ತು. ಅವರಿಬ್ಬರೂ ಒಟ್ಟಿಗೆ ನಟಿಸಿಲ್ಲ. ಆದ್ರೂ ಸಹ ಇಬ್ಬರೂ ಡೇಟ್ ಮಾಡ್ತಿದ್ದಾರೆ. ಮದ್ವೆ ಆಗ್ತಾರೆ ಎನ್ನಲಾಗಿತ್ತು. ಆದ್ರೆ ಆ ವದಂತಿಗಳಿಗೆ ಸ್ವತಃ ಮೃಣಾಲ್ ಅವರೇ ಫುಲ್‌ಸ್ಟಾಪ್ ಇಟ್ಟಿದ್ದರು. ಇದೀಗ ಮತ್ತೊಬ್ಬ ಸ್ಟಾರ್ ಜೊತೆ ಚೆಲುವೆ ಮೃಣಾಲ್ ಹೆಸರು ಕೇಳಿಬರ್ತಿದೆ. ಆದ್ರೆ ಈ ಬಾರಿ ಆತ ಸಿನಿಮಾ ಸ್ಟಾರ್ ಅಲ್ಲ. ಬದಲಿಗೆ ಕ್ರಿಕೆಟ್ ಸ್ಟಾರ್. ಇಂಡಿಯನ್ ಕ್ರಿಕೆಟ್ ಲೋಕದ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್.
ಜೈಸ್ವಾಲ್ ಜೊತೆ ಮೃಣಾಲ್ ಹೆಸ್ರು ಕೇಳಿಬರೋಕೆ ಕಾರಣ ಆಗಿರೋದು ಅದೊಂದು ಕೆಫೆ. ಹೌದು.. ಮುಂಬೈನ ಬಾಂದ್ರಾ ವೆಸ್ಟ್‌ನಲ್ಲಿರೋ ಬೂಜೀ ಕೆಫೆಯಲ್ಲಿ ಇವರಿಬ್ಬರೂ ಒಂದೇ ಸಮಯದಲ್ಲಿ ಕಾಣಿಸಿಕೊಂಡಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದ್ದು, ನೆಟ್ಟಿಗರು ಸಿಕ್ಕಾಪಟ್ಟೆ ಚರ್ಚೆ ಮಾಡ್ತಿದ್ದಾರೆ, ಟ್ರೋಲ್ ಜೊತೆ ಮೀಮ್ಸ್ ಮಾಡ್ತಿದ್ದಾರೆ.
ಅಂದಹಾಗೆ ಇಂಡಿಯನ್ ಕ್ರಿಕೆಟರ್ ಜೈಸ್ವಾಲ್ ವಯಸ್ಸು 24. ಮೃಣಾಲ್ ವಯಸ್ಸು 33. ಇವರಿಬ್ಬರ ನಡುವೆ ಬರೋಬ್ಬರಿ 9 ವರ್ಷಗಳ ವಯಸ್ಸಿನ ಅಂತರವಿದೆ. ಅದ್ಹೇಗೆ ಇದು ಸಾಧ್ಯ ಅನ್ನೋ ಮಾತುಗಳೂ ಸಹ ಕೇಳಿಬರ್ತಿವೆ. ಆದ್ರೆ ಪ್ರೀತಿ ಅಥ್ವಾ ಸ್ನೇಹಕ್ಕೆ ಏಜ್ ಡಸಂಟ್ ಮ್ಯಾಟರ್ ಅನ್ನೋದು ಕೂಡ ನಾವು ಗಮನದಲ್ಲಿಟ್ಟುಕೊಳ್ಳಬೇಕಿದೆ. ಇವರಿಬ್ಬರೂ ನೋಡುಗರ ಕಣ್ಣು ಕುಕ್ಕುವ ಹಾಗೆ ಒಟ್ಟಿಗೆ ಹೊರಬರುವ ಬದಲಿಗೆ ಪ್ರತ್ಯೇಕವಾಗಿ ಆ ಕೆಫೆಯಿಂದ ಹೊರಬಂದಿದ್ದು, ಇದು ನ್ಯಾಷನಲ್ ಇಂಟರ್‌ನ್ಯಾಷನಲ್ ನ್ಯೂಸ್ ಆಗಿ ಹೊರಹೊಮ್ಮಿದೆ.
ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾರನ್ನ ಕಿಂಗ್ ವಿರಾಟ್ ಕೊಹ್ಲಿ ಪ್ರೀತಿಸಿ, ಮದುವೆಯಾದಂತೆ ಇದೀಗ ಸಿನಿಮಾ ಬ್ಯೂಟಿ ಮೃಣಾಲ್ ಹಾಗೂ ಕ್ರಿಕೆಟ್ ಸ್ಟಾರ್ ಜೈಸ್ವಾಲ್ ಕೂಡ ಯಾಕೆ ಮದ್ವೆ ಆಗಬಾರದು ಅಂತಿದ್ದಾರೆ ಕೆಲ ಮಂದಿ. ಅದೇನೇ ಇರಲಿ, ಇವರಿಬ್ಬರ ನಡುವಿನ ರಿಲೇಷನ್‌ಶಿಪ್ ಬಗ್ಗೆ ಇಬ್ಬರಲ್ಲಿ ಯಾರೂ ಬಾಯಿಬಿಟ್ಟಿಲ್ಲ. ಅಧಿಕೃತವಾಗಿ ಅವರುಗಳೇ ಸ್ಪಷ್ಟನೆ ಕೊಟ್ರೆ ಎಲ್ಲಕ್ಕೂ ಉತ್ತರ ಸಿಗಲಿದೆ. ಅಲ್ಲಿಯ ತನಕ ಈ ಗಾಸಿಪ್‌ಗೆ ಮಾತ್ರ ಯಾರಿಂದಲೂ ಬ್ರೇಕ್ ಹಾಕೋಕೆ ಸಾಧ್ಯವೇ ಇಲ್ಲ ಅನ್ನೋದು ಸ್ಪಷ್ಟ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





