ಮ್ಯಾಕ್ಸ್‌ನಂತೆ ಮಾರ್ಕ್ ಕೂಡ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಬಾದ್‌ಷಾ ಕಿಚ್ಚ ಕರಿಯರ್‌ನ ಮಾಸ್ ಎಂಟರ್‌ಟೈನರ್‌ಗಳಲ್ಲಿ ಒಂದಾಗಿರೋ ಮಾರ್ಕ್, ಮೊದಲ ದಿನ ರಿಮಾರ್ಕಬಲ್ ಕಲೆಕ್ಷನ್ ಮೂಲಕ ಎಲ್ಲರ ಹುಬ್ಬೇರಿಸಿದೆ. ಯೆಸ್.. ವರ್ಲ್ಡ್ ವೈಡ್ ರಿಲೀಸ್ ಆಗಿರೋ ಮಾರ್ಕ್, ಕರ್ನಾಟಕವೊಂದರಲ್ಲೇ ಫಸ್ಟ್ ಡೇ ಬರೋಬ್ಬರಿ 16 ಕೋಟಿ ಗಳಿಸಿದೆ.
- ಫಸ್ಟ್ ಡೇ ಕರ್ನಾಟಕ ಕಲೆಕ್ಷನ್ 16ಕೋಟಿ.. ಮಾರ್ಕ್ ಕಿಚ್ಚು..!
- ಕಳೆದ ವರ್ಷ ಮ್ಯಾಕ್ಸ್, ಈ ವರ್ಷ ಮಾರ್ಕ್.. ಸೂಪರ್ ಹಿಟ್
- ವರ್ಲ್ಡ್‌ವೈಡ್ ಕಲೆಕ್ಷನ್ ಅಲ್ಲ.. ಜಸ್ಟ್ ಕರ್ನಾಟಕ ರಿಪೋರ್ಟ್
- ತೆಲುಗು ಡೈರೆಕ್ಟರ್ ಜೊತೆ ರಾಮ್ಕಾಮ್ ಜಾನರ್ ಚಿತ್ರಕ್ಕೆ ಕಿಚ್ಚ ಜೈ
ಕಿಚ್ಚನ ಗತ್ತು ಪ್ಯಾನ್ ಇಂಡಿಯಾಗೆ ಗೊತ್ತು. ಬಾಸ್‌ಗಳ ಬಿಗ್‌ಬಾಸ್ ಆಗಿರೋ ಬಾದ್‌ಷಾ ಕಿಚ್ಚ ಸುದೀಪ್, ಕಳೆದ ವರ್ಷದಂತೆ ಈ ವರ್ಷ ಕೂಡ ಕ್ರಿಸ್‌ಮಸ್‌ಗೆ ಬಿಗ್ ಬ್ಯಾಂಗ್ ಮಾಡಿದ್ದಾರೆ. ಯೆಸ್.. ಕಳೆದ ವರ್ಷ ಮ್ಯಾಕ್ಸ್ ಚಿತ್ರದಿಂದ ಮಸ್ತ್ ಮನರಂಜನೆ ನೀಡಿದ್ದ ಸುದೀಪ್, ಮಾರ್ಕ್‌ನಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಮತ್ತದೇ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಜೊತೆ ಅನ್ನೋದು ಇಂಟರೆಸ್ಟಿಂಗ್.
ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಕೂಡ ಈ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ವಿಶ್ವದ ಮೂಲೆ ಮೂಲೆಯಲ್ಲಿ ಮಾರ್ಕ್ ಬಿಡುಗಡೆ ಆಗಿದೆ. ಆದ್ರೆ ಕರ್ನಾಟಕವೊಂದರಲ್ಲೇ ಫಸ್ಟ್ ಡೇ ಬರೋಬ್ಬರಿ 15 ಕೋಟಿ 90 ಲಕ್ಷ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿರೋದು ವಿಶೇಷ. ಇದನ್ನ ಅಫಿಶಿಯಲಿ ಚಿತ್ರತಂಡವೇ ರಿವೀಲ್ ಮಾಡಿದೆ.
ಕಂಟೆಂಟ್ ಬೇಸ್ಡ್ ಸಿನಿಮಾಗಳು ಗೆದ್ದೇ ಗೆಲ್ಲುತ್ತವೆ ಅನ್ನೋದಕ್ಕೆ ಇದು ಸಾಕ್ಷಿ ಆಗಿದೆ. ಬುಲೆಟ್ ಟ್ರೈನ್ ಸ್ಪೀಡ್ ಸ್ಕ್ರೀನ್ ಪ್ಲೇ ಇರೋ ಮಾರ್ಕ್ ನೋಡುಗರನ್ನ ಎರಡೂವರೆ ಗಂಟೆ ಕಾಲ ಹಿಡಿದು ಕೂರಿಸುತ್ತೆ. ಕಿಚ್ಚನ ಎಂಟ್ರಿ, ಮಾಸ್ ಫೈಟ್ಸ್, ಸೈಕ್ ಡ್ಯಾನ್ಸ್, ಮಕ್ಕಳ ಎಮೋಷನ್ಸ್, ಪೊಲಿಟಿಕಲ್ ಡ್ರಾಮಾ, ಖಾಕಿ ಖದರ್, ಗ್ಯಾಂಗ್‌ಸ್ಟರ್‌ಗಳ ಕ್ರೈಂ.. ಹೀಗೆ ಎಲ್ಲವೂ ನೋಡುಗರಿಗೆ ಮಜಾ ಕೊಡ್ತಿವೆ.
ಮಾರ್ಕ್ ಸಿನಿಮಾದಲ್ಲಿ ಇಡೀ ಸುದೀಪ್ ಕುಟುಂಬ ತೊಡಗಿಸಿಕೊಂಡಿದೆ. ಕಿಚ್ಚ ನಟನೆ ಜೊತೆ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಪ್ರಿಯಾ ಸುದೀಪ್ ಅವರು ಡಿಸ್ಟ್ರಿಬ್ಯೂಷನ್‌ಗೆ ಕೈ ಹಾಕಿ ಭೇಷ್ ಅನಿಸಿಕೊಂಡಿದ್ದಾರೆ. ಇನ್ನು ಸಾನ್ವಿ ಸುದೀಪ್ ಕನ್ನಡ ಚಿತ್ರರಂಗಕ್ಕೆ ಗಾಯಕಿಯಾಗಿ ಮಾರ್ಕ್ ಚಿತ್ರದ ಮೂಲಕ ಕಾಲಿಟ್ಟಿದ್ದು, ಮಸ್ತ್ ಮಲೈಕಾ ಸಾಂಗ್‌ನಿಂದ ಕಿಕ್ ನೀಡಿದ್ದಾರೆ.
ಕಿಚ್ಚನ ಫ್ಯಾನ್ಸ್ ಜೊತೆ ಎಲ್ಲಾ ಚಿತ್ರಪ್ರೇಮಿಗಳಿಗೂ ಮಾರ್ಕ್ ರುಚಿಸುತ್ತಿದ್ದು, ಪರಭಾಷೆಗಳಲ್ಲೂ ಬಿಗ್ ಓಪನಿಂಗ್ ಪಡೆದಿದೆ. ಅಂದಹಾಗೆ ಕಿಚ್ಚ ಬಿಗ್‌ಬಾಸ್ ಮುಗಿಸಿ ಕೂಡಲೇ ತೆಲುಗು ಡೈರೆಕ್ಟರ್ ಜೊತೆ ಒಂದೊಳ್ಳೆ ರಾಮ್‌ಕಾಮ್ ಚಿತ್ರಕ್ಕೆ ಕೈ ಜೋಡಿಸ್ತಿದ್ದಾರೆ. ಹೀಗೆ ವೆರೈಟಿ ಆಫ್ ಜಾನರ್ ಸಿನಿಮಾಗಳನ್ನ ಮಾಡ್ತಿರೋ ಕಿಚ್ಚ, ಅಭಿನಯದಲ್ಲಿ ಚಕ್ರವರ್ತಿ ಅನ್ನೋದನ್ನ ಪ್ರೂವ್ ಮಾಡುತ್ತಲೇ ಇದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





