ಲವ್ ಟುವರ್ಡ್ಸ್ ಫ್ಯಾಮಿಲಿ.. ಸದ್ಯ ಚಂದನವನದಲ್ಲಿ ಇಂಥದ್ದೊಂದು ಫೀಲ್ ಗುಡ್ ಟೈಟಲ್‌ನಿಂದ ಚಿತ್ರಪ್ರೇಮಿಗಳಿಗೆ ಮಸ್ತ್ ಮನರಂಜನೆ ನೀಡೋಕೆ ಸಿನಿಮಾವೊಂದು ಬರ್ತಿದೆ. ಇತ್ತೀಚೆಗೆ ಅದ್ರ ಕುಂದಾಪುರದ ಹೆಣ್ಣಿವಳು ಅನ್ನೋ ಸಾಂಗ್ ಕೂಡ ರಿಲೀಸ್ ಆಗಿದ್ದು, ಬಹುದೊಡ್ಡ ಟೆಕ್ನಿಕಲ್ ಟೀಂನಿಂದ ಇಂಟರೆಸ್ಟಿಂಗ್ & ಇಂಪ್ರೆಸ್ಸೀವ್ ಅನಿಸಿದೆ.
- ಇದು ಡಬಲ್ ಇಂಜಿನ್, ಫಾರೆಸ್ಟ್ ಡೈರೆಕ್ಟರ್ ಲವ್ ಫ್ಯಾಮಿಲಿ
- ಹೀರೋ ಆಗಿ ಧೀರಜ್ ಪರಿಚಯ.. ರಾಧೆ ಜೊತೆ ರೊಮ್ಯಾನ್ಸ್
- ಮನೋರಂಜನ್‌ನಿಂದ ಕುಂದಾಪುರದ ಹೆಣ್ಣಿವಳು ಸಾಂಗ್
- ಚಿತ್ರಪ್ರೇಮಿಗಳ ಹೃದಯದತ್ತ ‘ಲವ್ ಟುವರ್ಡ್ಸ್ ಫ್ಯಾಮಿಲಿ’
ಇದು ಲವ್ ಟುವರ್ಡ್ಸ್ ಫ್ಯಾಮಿಲಿ ಚಿತ್ರದ ಫಸ್ಟ್ ಸಾಂಗ್ ಝಲಕ್. ಇದನ್ನ ಇತ್ತೀಚೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹಿರಿಯ ಮಗ ಮನೋರಂಜನ್ ರವಿಚಂದ್ರನ್ ಲಾಂಚ್ ಮಾಡೊ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ರು. ಈ ಹಿಂದೆ ಡಬಲ್ ಇಂಜಿನ್, ಫಾರೆಸ್ಟ್ ಅನ್ನೋ ಸಿನಿಮಾಗಳನ್ನ ಮಾಡಿ, ಭೇಷ್ ಅನಿಸಿಕೊಂಡಿದ್ದ ಚಂದ್ರಮೋಹನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರೋದು ವಿಶೇಷ. ಕುಂದಾಪುರದ ಹೆಣ್ಣಿವಳು ಅನ್ನೋ ಹಾಡು ಇದಾಗಿದ್ದು, ನಾಗಾರ್ಜುನ ಶರ್ಮ ಸಾಹಿತ್ಯ, ವಿಜಯ್ ಪ್ರಕಾಶ್ ಗಾಯನವಿದ್ದು ಆನಂದಲೀಲಾ ಸಂಗೀತ ಸಂಯೋಜನೆಯಿದೆ.
ನಿರ್ದೇಶಕ ಬಹದ್ದೂರ್ ಚೇತನ್ ಕುಮಾರ್, ನಿರ್ದೇಶಕ ಮಹೇಶ್ ಕುಮಾರ್, ನಟ ಮಂಜು ಪಾವಗಡ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಟೀಂಗೆ ಬೆನ್ನೆಲುಬಾಗಿ ನಿಂತರು. ಲಿಂಗರಾಜ್ ಬೀದರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಉದಯೋನ್ಮುಖ ನಟ ಧೀರಜ್ ಈ ಚಿತ್ರದಿಂದ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡ್ತಿದ್ದಾರೆ. ಮತ್ತೊಬ್ಬ ನವ ನಾಯಕನಟಿ ರಾಧೆ ಕೂಡ ಬೆಳ್ಳಿಪರದೆಗೆ ಪರಿಚಯ ಆಗ್ತಿದ್ದಾರೆ.
ಮೊದಲಿಗೆ ಇದು ಏಳುಮಲೆ ಸಿನಿಮಾನ ಹೋಲುವ ಕಥೆ ಆಗಿತ್ತಂತೆ. ನಂತರ ಬೇರೆಯದೇ ಕಥೆ ಮಾಡಿದ ಡೈರೆಕ್ಟರ್, ಇದು ಒಂದು ಸಾವು, ತಿಥಿಯ ನಡುವೆ 11 ದಿನಗಳಲ್ಲಿ ನಡೆಯುವ ಕಥೆಯಾಗಿದೆ. ಇದರ ಮಧ್ಯೆ ಒಂದು ಲವ್ ಸ್ಟಾರ್ಟ್ ಆಗುತ್ತೆ. ನಾಯಕ, ನಾಯಕಿ ಇಬ್ಬರ ಮೇಲೆ ಹೆಚ್ಚಿನ ಕಥೆ ಸಾಗಲಿದೆ. ಸಿನಿಮಾದಲ್ಲಿ ಒಟ್ಟು 3 ಹಾಡುಗಳಿದ್ದು, ಕುಂದಾಪುರ, ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಅಂದಹಾಗೆ ಧೀರಜ್ ಮೈಸೂರಿನ ರಂಗವಲ್ಲಿ ತಂಡದಲ್ಲಿದ್ದವರು. ನಂತ್ರ ಮದಗಜ ಚಿತ್ರ ಸೇರಿದಂತೆ ಸೀರಿಯಲ್‌ಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದಾರೆ.
ಒಟ್ಟಾರೆ ಈ ಹಾಡಿನಿಂದ ಲವ್ ಫ್ಯಾಮಿಲಿ ತನ್ನ ಪ್ರಮೋಷನ್ಸ್ ಕಿಕ್‌ಸ್ಟಾರ್ಟ್ ಮಾಡಿದ್ದು, ಅಕ್ಟೋಬರ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಪ್ರೇಕ್ಷಕರ ಮುಂದೆ ಬರ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





