ಗಾಂಧಿನಗರದ ಗಲ್ಲಿಯಿಂದ ಹೈದರಾಬಾದ್ ಹೈವೇವರೆಗೆ ಈಗ ಒಂದೇ ಸೌಂಡು.. ಅದುವೇ ‘ಕೆಡಿ: ದಿ ಡೆವಿಲ್’. ಏಪ್ರಿಲ್ 30ಕ್ಕೆ ಕರುನಾಡಲ್ಲಿ ಯುದ್ಧ ಆರಂಭಿಸಿದ್ದ ಕೆಡಿ ಈಗ ಪಕ್ಕದ ರಾಜ್ಯಗಳಿಗೆ ಲಗ್ಗೆ ಇಡಲು ರೆಡಿಯಾಗಿದೆ. ಸೆನ್ಸಾರ್ ಕತ್ತರಿ ನಡುವೆಯೂ ಕನ್ನಡದಲ್ಲಿ ಗೆದ್ದು ಬೀಗಿರೋ ಧ್ರುವ ಸರ್ಜಾ, ಈಗ ತೆಲುಗು ಟ್ರೈಲರ್ ಮೂಲಕ ಟಾಲಿವುಡ್ ನಲ್ಲಿ ಸೌಂಡ್ ಮಾಡ್ತಿದ್ದಾರೆ. ಅಷ್ಟಕ್ಕೂ ಈ ಕೆಡಿ ಅಬ್ಬರ ಹೇಗಿದೆ? ಓಟಿಟಿಯಲ್ಲಿ ಯಾರಿಗೆ ದಕ್ಕಿದೆ ಈ ಸಿನಿಮಾ? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
- ಕೆಡಿ ತೆಲುಗು ಟ್ರೈಲರ್ ರಿಲೀಸ್, ಟಾಲಿವುಡ್‌ನಲ್ಲಿ ಧ್ರುವ ಅಬ್ಬರ
- ಧ್ರುವ ರಾ ಸ್ಟೈಲ್‌ಗೆ ಫಿದಾ ಆದ ತೆಲುಗು ಸಿನಿ ಪ್ರೇಕ್ಷಕರು..!
- ಕನ್ನಡದ ಬಳಿಕ ತೆಲುಗಿನಲ್ಲಿ ಕೆಡಿ ಬಾಕ್ಸ್ ಆಫೀಸ್ ಟಾರ್ಗೆಟ್..!
- ಕೆಡಿ ಓಟಿಟಿ ಡೀಲ್‌ಗೆ ಕ್ರೇಜ್, ಯಾವ ಪ್ಲಾಟ್‌ಫಾರ್ಮ್‌ಗೆ ಸಿಗಲಿದೆ ಸಿನಿಮಾ?
ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ‘ಶೋಮ್ಯಾನ್’ ಜೋಗಿ ಪ್ರೇಮ್ ಕಾಂಬಿನೇಷನ್ ಅಂದ್ರೆ ಅಲ್ಲಿ ಹೈವೋಲ್ಟೇಜ್ ಗ್ಯಾರಂಟಿ. ಕಳೆದ ಏಪ್ರಿಲ್ 30ರಂದು ತೆರೆಕಂಡ ‘ಕೆಡಿ: ದಿ ಡೆವಿಲ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ವಿಂಟೇಜ್ ಲುಕ್‌ನಲ್ಲಿ ಧ್ರುವ ಅಬ್ಬರಿಸಿದ್ರೆ, ಪ್ರೇಮ್ ಮೇಕಿಂಗ್‌ಗೆ ಕನ್ನಡಿಗರು ಫಿದಾ ಆಗಿದ್ದಾರೆ. ಮಿಕ್ಸಿಡ್ ರೆಸ್ಪಾನ್ಸ್ ನಡುವೆಯೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದ್ದು, ಕನ್ನಡ ಚಿತ್ರರಂಗದ ಖಾತೆಗೆ ಮತ್ತೊಂದು ಬ್ಲಾಕ್ ಬಸ್ಟರ್ ಗೆಲುವು ಸಿಕ್ಕಿದೆ.
ಕನ್ನಡದಲ್ಲಿ ಅಬ್ಬರಿಸಿದ್ರೂ, ಸೆನ್ಸಾರ್ ತಾಂತ್ರಿಕ ಕಾರಣಗಳಿಂದಾಗಿ ಬೇರೆ ಭಾಷೆಗಳಲ್ಲಿ ಈ ‘ಕೆಡಿ’ ದರ್ಶನ ಸ್ವಲ್ಪ ತಡವಾಗಿತ್ತು. ಆದ್ರೆ ಈಗ ಆ ಕಾಯುವಿಕೆಗೆ ತೆರೆ ಬಿದ್ದಿದೆ. ಇದೀಗ ರಿಲೀಸ್ ಆಗಿರೋ ತೆಲುಗು ವರ್ಷನ್ ಟ್ರೈಲರ್ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡು ಟ್ರೆಂಡಿಂಗ್ ಲಿಸ್ಟ್ ಸೇರಿದೆ. ಧ್ರುವ ಅವರ ರಾ ಸ್ಟೈಲ್‌ಗೆ ತೆಲುಗು ಮಂದಿ ಕೂಡ ಈಗಲೇ ಸಲಾಮ್ ಹೊಡೆಯುತ್ತಿದ್ದು, ಟಾಲಿವುಡ್ ಬಾಕ್ಸ್ ಆಫೀಸ್ ಕೂಡ ಶೇಕ್ ಆಗೋದು ಪಕ್ಕಾ ಎನ್ನಲಾಗುತ್ತಿದೆ.
ಇನ್ನು ಥಿಯೇಟರ್‌ನಲ್ಲಿ ಧೂಳೆಬ್ಬಿಸುತ್ತಿರೋ ಈ ಸಿನಿಮಾದ ಡಿಜಿಟಲ್ ರೈಟ್ಸ್ ಕುರಿತು ಕ್ರೇಜಿ ಸುದ್ದಿಯೊಂದು ಹೊರಬಿದ್ದಿದೆ. ಕೆಡಿ ಚಿತ್ರದ ಓಟಿಟಿ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿದ್ದು, ದೊಡ್ಡ ಮಟ್ಟದ ಡೀಲ್ ಕುದುರಿದೆ ಎಂಬ ಮಾಹಿತಿ ಸಿನಿವಲಯದಲ್ಲಿ ಹರಿದಾಡುತ್ತಿದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಈ ಡೆವಿಲ್‌ನನ್ನು ಸ್ವಾಗತಿಸಲು ರೆಡಿಯಾಗಿವೆ. ಒಟ್ಟಿನಲ್ಲಿ, ಸೆನ್ಸಾರ್ ಅಡೆತಡೆಗಳನ್ನ ಮೆಟ್ಟಿ ನಿಂತಿರುವ ‘ಕೆಡಿ’, ಈಗ ದಕ್ಷಿಣ ಭಾರತದಾದ್ಯಂತ ತನ್ನ ಸಾಮ್ರಾಜ್ಯ ವಿಸ್ತರಿಸಲು ಸಜ್ಜಾಗಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





