ಕರಾವಳಿ ಸಿನಿಮಾ ರಿಲೀಸ್‌ಗೆ ಇನ್ನೊಂದೇ ಒಂದು ವಾರ ಬಾಕಿಯಿದೆ. ರಾಜ್ ಬಿ ಶೆಟ್ರು ಈ ಚಿತ್ರದ ಕ್ಯಾಂಪ್ ಸೇರಿದ ಬಳಿಕ ಅದ್ರ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಯಾಕಂದ್ರೆ ಅವ್ರೊಂಥರಾ ಕರಾವಳಿಯ ರಾಯಭಾರಿಯೂ ಹೌದು. ಸಿನಿಮಾಗೆ ಸೆನ್ಸಾರ್‌ನಿಂದ ಕ್ಲೀನ್ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಸ್ಟಾರ್ ಸಿಂಗರ್‌ಗಳ ಕಂಠದಾನದಿಂದಾಗಿ ಇದೊಂದು ಮ್ಯೂಸಿಕಲ್ ಸಾಗಾ ಅನಿಸಿಕೊಳ್ತಿದೆ. ಈ ಕುರಿತ ಇಂಟರೆಸ್ಟಿಂಗ್ ಸ್ಟೋರಿ ನಿಮಗಾಗಿ.
- ಕರಾವಳಿಯಲ್ಲಿ ಸ್ಟಾರ್ ಸಿಂಗರ್ಸ್.. 100% ಮ್ಯೂಸಿಕ್ ಸಾಗಾ
- ಬಿ ಜಯಶ್ರೀ, ಸಿದ್ದ್ ಶ್ರೀರಾಮ್, ವಿಪಿ, ಆಬಿ.. ಅದ್ಭುತ ಕಂಠಗಳು
- U/A ಸರ್ಟಿಫಿಕೇಟ್.. ಸು ಫ್ರಮ್ ಸೋ ಪ್ರೀಮಿಯರ್ ಸ್ಟ್ರ್ಯಾಟಜಿ
- ಕ್ಯಾಪ್ಟನ್ ಗುರುದತ್‌ಗೆ ರಾಜ್ ಬಿ ಶೆಟ್ಟಿ ಸಾಥ್.. ಕಂಬಳ ಕಿಕ್ಕು..!
ಕಾಂತಾರ ನಂತ್ರ ಕರಾವಳಿ ಭಾಗದ ಕಂಬಳದ ಕುರಿತು ಎಳೆ ಎಳೆಯಾಗಿ ತೋರಿಸುವ ಕಾರ್ಯ ಮಾಡಿದೆ ಕರಾವಳಿ ಚಿತ್ರತಂಡ. ಸಿನಿಮಾ ಇದೇ ಜುಲೈ 24ಕ್ಕೆ ಗ್ರ್ಯಾಂಡ್ ಆಗಿ ತೆರೆಗಪ್ಪಳಿಸುತ್ತಿದ್ದು, ಸಿನಿಮಾಗೆ ಇತ್ತೀಚೆಗೆ ಕ್ಲೀನ್ U/A ಸೆನ್ಸಾರ್ ಪ್ರಮಾಣಪತ್ರ ದೊರಕಿದೆ. ಗುರುದತ್ ಗಾಣಿಗ ಆ್ಯಕ್ಷನ್ ಕಟ್ ಹೇಳಿ, ನಿರ್ಮಾಣ ಮಾಡಿರೋ ಈ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಸೋಲ್ ಸ್ಟಾರ್ ರಾಜ್ ಬಿ ಶೆಟ್ಟಿ ಲೀಡ್‌ನಲ್ಲಿ ಕಾಣಸಿಗಲಿದ್ದಾರೆ.
ಟೀಸರ್‌ಗಳಂತೆ ಟ್ರೈಲರ್ ಕೂಡ ವಿಭಿನ್ನ ಮೇಕಿಂಗ್‌ನಿಂದ ಹುಬ್ಬೇರಿಸಿದ್ದು, ಇದೀಗ ಹಾಡುಗಳು ಒಂದಕ್ಕಿಂತ ಒಂದು ಕಣ್ಮನ ತಣಿಸುತ್ತಿವೆ. ವೆರೈಟಿ ಹಾಡುಗಳಿಂದ ಆಲ್ಬಮ್ ಮಸ್ತ್ ಅನಿಸಿದ್ದು, ಸ್ಟಾರ್ ಸಿಂಗರ್‌ಗಳ ಕಂಠದಿಂದ ಇದೊಂದು ಔಟ್ ಅಂಡ್ ಔಟ್ ಮ್ಯೂಸಿಕಲ್ ಸಾಗಾ ಅನಿಸಿದೆ. ಹೌದು.. ವಿ ಜಯಶ್ರೀ, ಸಿದ್ದ್ ಶ್ರೀರಾಮ್, ವಿಜಯ್ ಪ್ರಕಾಶ್, ಕಾಂತಾರ ಖ್ಯಾತಿಯ ಆಬಿ, ಆನಂದ್ ಶ್ರೀರಾಜ್ ಹಾಗೂ ಸಾಯಿ ವಿಘ್ನೇಶ್ ಅಂತಹ ಘಟಾನುಘಟಿ ಗಾಯಕರುಗಳ ಧ್ವನಿ ಈ ಕರಾವಳಿ ಆಲ್ಬಮ್‌ನಲ್ಲಿರೋದು ವಿಶೇಷ.
ಈಗಾಗ್ಲೇ ಮುದ್ದು ಗುಮ್ಮ ಹಾಡಿಗೆ ಸಿದ್ದ್ ಶ್ರೀರಾಮ್ ಹಾಡಿದ್ದು, ಹಾಡು ಸಖತ್ ಹಿಟ್ ಆಗಿದೆ. ಅದ್ರ ಬೆನ್ನಲ್ಲಿ ಬಂದಂತಹ ಸಾಯಿ ವಿಘ್ನೇಶ್ ಹಾಡಿರೋ ಬಾ ಕರಾವಳಿಗೆ ಗೀತೆ ಕೂಡ ಕಡಲ ಕಿನಾರೆಯ ವಿಶೇಷತೆಗಳಿಂದ ಅದ್ಭುತ ಅನಿಸಿತ್ತು. ಇದೀಗ ದಿ ರೇಜ್ ಆಫ್ ಕಂಬಳ ಗೀತೆ ಅನಾವರಣಗೊಂಡಿದೆ. ಆನಂದ್ ಶ್ರೀರಾಜ್ ಕಂಠದಲ್ಲಿ ಅದ್ರ ಗತ್ತು, ಗಮ್ಮತ್ತು ಮತ್ತಷ್ಟು ಹೆಚ್ಚಿದೆ. ಇನ್ನೂ ಕಾಂತಾರ ಫೇಮ್ ಕೆನಡಿಯನ್ ಸಿಂಗರ್ ಆಬಿ, ಬಿ ಜಯಶ್ರೀ, ವಿಪಿ ಅಂತಹ ದಿಗ್ಗಜ ಗಾಯಕರಿಂದ ಕರಾವಳಿ ಮತ್ತಷ್ಟು ರಂಗೇರಲಿದೆ. ಸದ್ಯ ಚಿತ್ರತಂಡ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಪ್ಲ್ಯಾನ್ಸ್ ಮಾಡ್ತಿದ್ದು, ಶೆಟ್ರ ಸು ಫ್ರಮ್ ಸೋ ಸ್ಟ್ರ್ಯಾಟಜಿ ಇಲ್ಲಿ ಅಪ್ಲೈ ಮಾಡಲಿದ್ದಾರೆ ಕ್ಯಾಪ್ಟನ್ ಗುರುದತ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





