ನಮ್ಮ ಕನ್ನಡದ ನಟೀಮಣಿಯೊಬ್ರು ಮಾಜಿ ಮುಖ್ಯಮಂತ್ರಿಯನ್ನ ಮದ್ವೆ ಆಗೋ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ನಾವು ಹೇಳ್ತಿರೋದು ತ್ರಿಶಾ ಕಥೆ ಅಲ್ಲ. ಈ ಹಿಂದೆ ಸದ್ದು ಮಾಡಿದ್ದ ಮುಖ್ಯಮಂತ್ರಿ ಐ ಲವ್ ಯೂ ಬಗ್ಗೆಯೂ ಅಲ್ಲ. ಅದನ್ನೂ ಮೀರಿದ ಸ್ಟೋರಿ. ಹಾಗಾದ್ರೆ ಆ ನಟಿ ಯಾರು..? ಯಾವ ರಾಜ್ಯದ ಸಿಎಂ..? ಇದು ಹೇಗೆ ಸಾಧ್ಯವಾಯ್ತು ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.
- ಮಾಜಿ ಸಿಎಂ ಜೊತೆ ಕಾನ್ಸ್ಟೇಬಲ್ ಸರೋಜಾ ಕಲ್ಯಾಣ..!
- ರುಷಿಕಾ-ಬಿಪ್ಲಬ್ ಕುಮಾರ್ ದೇಬ್ ಆರತಕ್ಷತೆಗೆ ಮೋದಿ..?
- ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕೈ ಹಿಡಿದ ತ್ರಿವೇಣಿ
- ಜೂ- 19ರಂದು ಮದ್ವೆ.. ಜೂ- 24ಕ್ಕೆ ರಾಯಲ್ ರಿಸೆಪ್ಷನ್..!
ತ್ರಿವೇಣಿ ರಾವ್.. ಅಪ್ಪಟ ಕನ್ನಡ ಚೆಲುವೆ. ಕನ್ನಡ ಅಷ್ಟೇ ಅಲ್ಲದೆ, ಪಕ್ಕದ ಟಾಲಿವುಡ್ಗೂ ಚಿರಪರಿಚಿತೆ ಈ ಚೆಂದುಳ್ಳಿ ಚೆಲುವೆ. ಅದ್ಯಾಕೋ ಸಡನ್ ಆಗಿ ತ್ರಿವೇಣಿ ರಾವ್ ಅನ್ನೋ ಹೆಸರನ್ನ ರುಷಿಕಾ ರಾಜ್ ಅಂತಲೂ ಬದಲಿಸಿಕೊಂಡರು. ಹೀಗೆಲ್ಲಾ ಇಂಟ್ರಡಕ್ಷನ್ ಕೊಟ್ರೆ ಗೊತ್ತಾಗಲ್ಲ ಅನಿಸುತ್ತೆ. ಅದೇ ಟಗರು ಸಿನಿಮಾದ ಕಾನ್ಸ್ಟೇಬಲ್ ಸರೋಜಾ ಅಂದ್ರೆ ಥಟ್ ಅಂತ ನೆನಪಿಗೆ ಬರ್ತಾರೆ. ಅವರೇ ಈ ಬ್ಯೂಟಿ. ಈಕೆ ಇತ್ತೀಚೆಗೆ ಅಂದ್ರೆ ಜೂನ್ 19ರಂದು ತುಂಬಾ ಪ್ರೈವೇಟ್ ಆಗಿ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಕೈ ಹಿಡಿಯೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಯೆಸ್.. ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್ ಕೈ ಹಿಡಿಯೋ ಮೂಲಕ ಆತನ ಮನೆ ಮತ್ತು ಮನ ಬೆಳಗೋಕೆ ಶುರು ಮಾಡಿದ್ದಾರೆ. ಅಂದಹಾಗೆ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ಗೆ ತ್ರಿವೇಣಿ ಮೊದಲ ಪತ್ನಿಯಲ್ಲ. ಕಳೆದ ವರ್ಷ ಮೊದಲ ಪತ್ನಿ ನೀತಿಗೆ ಡಿವೋರ್ಸ್ ನೀಡಿದ್ದ ಬಿಪ್ಲಬ್, ಇದೀಗ ತ್ರಿವೇಣಿಯನ್ನ ಎರಡನೇ ಮದ್ವೆ ಆಗಿದ್ದಾರೆ. ಇದೇ ಜೂನ್ 19ಕ್ಕೆ ಇವರುಗಳ ಗ್ರ್ಯಾಂಡ್ ರಾಯಲ್ ರಿಸೆಪ್ಷನ್ ಅಗರ್ತಲಾದ ಐಷಾರಾಮಿ ಹೋಟೆಲ್ ಪೋಲೋ ಟವರ್ಸ್ನಲ್ಲಿ ನಡೆಯಲಿದ್ದು, ಪಿಎಂ ಮೋದಿಯಿಂದ ಹಿಡಿದು ಹಾಲಿ ಹಾಗೂ ಮಾಜಿ ಸಿಎಂಗಳು ಆಗಮಿಸೋ ಸಾಧ್ಯತೆಯಿದೆ.
ತ್ರಿವೇಣಿ ವೆಡ್ಸ್ ಬಿಪ್ಲಬ್ ಕುಮಾರ್ ದೇಬ್ ವೆಡ್ಡಿಂಗ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದು, ಅದ್ಹೇಗೆ ಇವರಿಬ್ಬರ ನಡುವೆ ಪರಿಚಯ ಆಯ್ತು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಮೂಲಗಳ ಪ್ರಕಾರ ನಟಿ ತ್ರಿವೇಣಿ ರಾವ್, ತಮ್ಮ ತಾಯಿಗಾಗಿ ಈ ಮದ್ವೆ ಆದರು ಎನ್ನಲಾಗ್ತಿದೆ. ಆದ್ರೆ ಇದೊಂದು ಪ್ರೇಮ ವಿವಾಹ ಅಂತಲೂ ಹೇಳಲಾಗ್ತಿದೆ. ಇವರಿಬ್ಬರ ನಡುವೆ ಪರಸ್ಪರ ಸ್ನೇಹ ಏರ್ಪಟ್ಟಿತ್ತು. ನಂತ್ರ ಪ್ರೇಮಾಂಕುರಿಸಿ, ಇದೀಗ ಸಪ್ತಪದಿ ತುಳಿದಿದ್ದಾರೆ ಅನ್ನೋದು ಅಸಲಿ ಕಥೆ.
ಅಂದಹಾಗೆ ಟಗರು ಸಿನಿಮಾದಲ್ಲಿ ಡಾಲಿ ಜೊತೆಗಿನ ಕಾನ್ಸ್ಟೇಬಲ್ ಸರೋಜಾ ಕೆಮಿಸ್ಟ್ರಿ ಯೂತ್ಗೆ ಸಖತ್ ಇಷ್ಟವಾಗಿತ್ತು. ಅದ್ರಿಂದ ಫೇಮಸ್ ಆದ ಈಕೆ ಅಪ್ಪು ಜೊತೆ ರಾಜರತ್ನ, ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ, ರಾಜಮಾರ್ತಾಂಡ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಮಿಂಚಿದ್ರು. ಅಲ್ಲದೆ, ನಾಯಕನಟಿಯಾಗಿಯೂ ಕಮಾಲ್ ಮಾಡಿದ್ದ ಈಕೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಚಿತ್ರದಿಂದ ತಮ್ಮ ಬಹುದಿನದ ಕನಸು ನನಸು ಮಾಡಿಕೊಂಡಿದ್ರು.
ತ್ರಿವೇಣಿ ರಾವ್ ನಟಿಯಾಗಿ ಸದ್ದು ಮಾಡೋಕೆ ಮುನ್ನ ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿಯ ಅರುಂಧತಿ, ಭಾಗಮತಿ ಹಾಗೂ ಬಾಹುಬಲಿ ಸಿನಿಮಾಗಳ ಪಾತ್ರಗಳಿಗೆ ಡ್ಯೂಪ್ ಹಾಕಿದ್ರು. ಡ್ಯೂಪ್ ಆರ್ಟಿಸ್ಟ್ ಆಗಿದ್ದ ತ್ರಿವೇಣಿ ರಾವ್ಗೆ ಶಿವಣ್ಣ-ಡಾಲಿಯ ಟಗರು ಹಣೆಬರಹ ಬದಲಿಸಿತ್ತು. ಒಟ್ಟಾರೆ ನಮ್ಮ ಕನ್ನಡತಿಯೋರ್ವಳು ಒಂದು ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರನ್ನ ವರಿಸಿ, ಸಿಎಂ ಹೆಂಡ್ತಿ ಅನಿಸಿಕೊಳ್ತಿರೋದು ಖುಷಿಯ ವಿಚಾರ. ಅವ್ರ ದಾಂಪತ್ಯ ಜೀವನಕ್ಕೆ ಶುಭವಾಗಲಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್




