ಕನ್ನಡ ಸಿನಿಮಾ ನಟಿ ರನ್ಯಾ ರಾವ್ ಅವರನ್ನು ಏರ್ಪೋಟ್ ಕಸ್ಟಮ್ಸ್ ಡಿಆರ್ಐ ತಂಡದ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಅಕ್ರಮ ಚಿನ್ನ ಸಾಗಾಟ ಆರೋಪದ ಹಿನ್ನೆಲೆಯಲ್ಲಿ ರನ್ಯಾ ರಾವ್ ಅವರನ್ನುವಶಕ್ಕೆ ಪಡೆದಿರುವ ಏರ್ಪೋಟ್ ಕಸ್ಟಮ್ಸ್ ಡಿಆರ್ಐ ತಂಡದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 4 ರಂದು ರಾತ್ರಿ ವೇಳೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಬಂದಿಳಿದಿದ್ದರು. ಈ ವೇಳೆ ಅಧಿಕಾರಿಗಳ ತಂಡ ಆಗಲೇ ಸಂಗ್ರಹಿಸಿದ್ದ ಮಾಹಿತಿಯಂತೆ ರನ್ಯಾ ರಾವ್ ಬಳಿ ಅಕ್ರಮವಾಗಿತ್ತೆನ್ನಲಾದ 14 ಕೆಜಿ ಹೆಚ್ಚು ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ವಿದೇಶದಿಂದ ರನ್ಯಾ ಹೆಚ್ಚುವರಿ ಚಿನ್ನಾಭರಣ ತಂದಿರುವ ಆರೋಪ ಎದುರಿಸುತ್ತಿದ್ದಾರೆ. ರನ್ಯಾ ದುಬೈನಿಂದ ಬೆಂಗಳೂರಿಗೆ ಬಂದಿಳಿದಾಗ ಕಸ್ಟಮ್ಸ್ ತಂಡ ಬಂಧಿಸಿದೆ. ತನಿಖೆ ಮುಂದುವರೆದಿದೆ.