ಮ್ಯಾಕ್ಸ್ ಬಳಿಕ ಮತ್ತೊಂದು ಧಮಾಕೇದಾರ್ ಸ್ಟೋರಿಯೊಂದಿಗೆ ಚಿತ್ರ ಪ್ರೇಮಿಗಳಿಗೆ ಮಸ್ತ್ ಮನರಂಜನೆ ಕೊಡೋಕೆ ಬರ್ತಿದ್ದಾರೆ ಕಿಚ್ಚ ಹಾಗೂ ಡೈರೆಕ್ಟರ್ ವಿಜಯ್. ಕೆ-47 ಸಿನಿಮಾ ಅಫಿಶಿಯಲಿ ಸೆಟ್ಟೇರಿದ್ದು, ಚೆನ್ನೈನಲ್ಲಿ ಶೂಟಿಂಗ್ ಸಹ ಕಿಕ್ಸ್ಟಾರ್ಟ್ ಮಾಡಿದೆ. ಇಷ್ಟಕ್ಕೂ ಈ ಚಿತ್ರದಲ್ಲಿ ಕಿಚ್ಚನ ಕ್ವೀನ್ ಯಾರು..? ಆಕೆಯ ಹಿನ್ನೆಲೆ ಏನು ಅಂತೀರಾ..? ಜಸ್ಟ್ ವಾಚ್.
- ಇವಳೇ ನೋಡಿ K47 ಕಿಚ್ಚನ ಕ್ವೀನ್.. ಯಾರು ಈ ದೀಪ್ಷಿಕಾ?
- ತಮಿಳು ಪೋರಿ.. ಮೈಖೆಲ್, ಮಾರ್ಗನ್ ಬ್ಯೂಟಿ ಈ ಕ್ಯೂಟಿ
- ಚೆನ್ನೈನಲ್ಲಿ ಶೂಟಿಂಗ್ ಶುರು.. ಮತ್ತೊಂದು ವಿಜಯದ ಹಾದಿ
- ಫಾಸ್ಟ್ ಸ್ಕ್ರೀನ್ಪ್ಲೇ.. ಪ್ರೇಕ್ಷಕರ ದಿಲ್ ಗೆದ್ದ ‘ಮ್ಯಾಕ್ಸ್’ ಡೈರೆಕ್ಟರ್..!
ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ಗೆ ಮ್ಯಾಕ್ಸಿಮಮ್ ಕಲೆಕ್ಷನ್ ನೀಡಿ, ನೋಡುಗರ ನಿರೀಕ್ಷೆಯಂತೆ ಮಸ್ತ್ ಮನರಂಜನೆ ನೀಡಿದ ಸಿನಿಮಾ ಅಂದ್ರೆ ಮ್ಯಾಕ್ಸ್. ಇದೀಗ ಅದೇ ಮ್ಯಾಕ್ಸ್ ಟೀಂ ಮತ್ತೆ ಒಂದಾಗಿದೆ ಅದೇ ಕೆ-47. ಅರ್ಥಾತ್ ಕಿಚ್ಚನ 47ನೇ ಸಿನಿಮಾ. ಯೆಸ್.. ಬಿಲ್ಲ ರಂಗ ಬಾಷ ಚಿತ್ರವನ್ನು ಪಕ್ಕಕ್ಕಿಟ್ಟು ಕೂಡಲೇ ಈ ಸಿನಿಮಾನ ಕೈಗೆತ್ತಿಕೊಂಡಿರೋ ಬಾದ್ಷಾ ಕಿಚ್ಚ ಸುದೀಪ್, ಮತ್ತೊಂದು ವಿಜಯದ ಹಾದಿಯಲ್ಲಿದ್ದಾರೆ.





