ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್.
ಬಿಗ್‌ಬಾಸ್ ಕನ್ನಡ 9ನೇ ಸೀಸನ್ ವಿಜೇತರಾಗಿರುವ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ’ಜೈ’ ಚಿತ್ರ ಇಂದು ತುಳು ಮತ್ತು ಕನ್ನಡ ಭಾಷೆಯಲ್ಲಿ ವಿಶ್ವದಾದ್ಯಂತ ತೆರೆ ಕಂಡಿದೆ. ಈ ನಡುವೆ ಸಿನಿಮಾದ ಮೊದಲ ಟಿಕೆಟ್ ಅನ್ನು ನಟ ಕಿಚ್ಚ ಸುದೀಪ್ ಖರೀದಿಸಿದ್ದಾರೆ. ಹಾಗಾದ್ರೆ ಜೈ ಚಿತ್ರ ಹೇಗಿದೆ ಈ ವಾರ ತೆರೆಕಂಡ ಸಿನಿಮಾಗಳಲ್ಲಿ ‘ಜೈ’ ಗೆ ಸಿಕ್ಕ ಜಯ ಎಷ್ಟು..? ಹೇಳ್ತಿವಿ ನೋಡಿ
ಗಿರಿಗಿಟ್, ಗಮ್ಜಾಲ್, ಸರ್ಕಸ್ ಚಿತ್ರಗಳ ಯಶಸ್ಸಿನ ಬಳಿಕ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಜೈ ತುಳು ಮತ್ತು ಕನ್ನಡ ಭಾಷೆಯಲ್ಲಿ ಇಂದು ವಿಶ್ವದಾದ್ಯಂತ ತೆರೆ ಕಂಡಿದೆ. ಕನ್ನಡ ಸಿನಿಮಾಗಳು ಕನ್ನಡ ಮಣ್ಣನ್ನ ದಾಟಿ ಸದ್ದು ಸುದ್ದಿ ಮಾಡ್ತಿವೆ. ಅದಕ್ಕೆ ಸಾಕ್ಷಿ ಇತ್ತೀಚಿನ ಸು ಫ್ರಮ್ ಸೋ, ಕಾಂತಾರ ಸಿನಿಮಾಗಳು. ಕನ್ನಡದ ಈ ಸಿನಿಮಾಗಳು ಕನ್ನಡಕ್ಕಿಂತ ಬೇರೆ ಭಾಷೆಯಲ್ಲೇ ದೊಡ್ಡ ಸೌಂಡ್ ಮಾಡಿದ್ವು. ಬಾಕ್ಸಾಫೀಸ್ ಚಿಂದಿ ಉಡಾಯಿಸಿದ್ದವು. ಈಗ ಅದೇ ಹಾದಿಯಲ್ಲಿ ರೂಪೇಶ್ ಶೆಟ್ಟಿ ನಟನೆಯ ಜೈ ಸಿನಿಮಾ ಮುಂದಡಿ ಇಟ್ಟಿದೆ.
ರೂಪೇಶ್ ಶೆಟ್ಟಿ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ
‘ಜೈ’ ಚಿತ್ರದ ಮೊದಲ ಟಿಕೆಟ್ ಖರೀದಿಸಿದ ಕಿಚ್ಚ
ರಾಜ್ಯ, ದೇಶ ಮಾತ್ರವಲ್ಲದೆ ವಿದೇಶದಲ್ಲು ಇಂದಿನಿಂದ ಜೈ ಸಿನಿಮಾ ಬಿಡುಗಡೆಗೊಂಡಿದೆ. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಜೈ ಚಿತ್ರ ಪ್ರೀಮಿಯರ್ ಆಗಿದೆ. ಅಲ್ಲೆಲ್ಲಾ ಕನ್ನಡ ಹಾಗೂ ತುಳು ಸಿನಿಮಾವನ್ನ ನೋಡಿದವರು ಹಾಡಿ ಕೊಂಡಾಡ್ತಿದ್ದಾರೆ. ವಿಭಿನ್ನ ಪ್ರಚಾರದಿಂದ ಗಮನ ಸೆಳೆದಿರುವ ಜೈ ಚಿತ್ರ, ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಪ್ರೇಮಿಯರ್ ನಲ್ಲಿ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ.
ಜೈ ಸಿನಿಮಾ ಮಂಗಳೂರಿನ ಚಿತ್ರಮಂದಿರಗಳಲ್ಲಿ ಗ್ರಾಂಡ್ ಓಪನಿಂಗ್ ಪಡೆದುಕೊಂಡಿದೆ. ಮಂಗಳೂರಿನಲ್ಲಿ ರೂಪವಾಣಿ, ಪಿವಿಆರ್, ಭಾರತ್ ಸಿನಿಮಾಸ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್, ಕುಂದಾಪುರದಲ್ಲಿ ಭಾರತ್ ಸಿನಿಮಾಸ್, ದೇರಳಕಟ್ಟೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ನಲ್ಲಿ ಜೈ ಸಿನಿಮಾ ತೆರೆ ಕಂಡಿದೆ.
ತುಳುನಾಡಿನ ರಾಕ್ ಸ್ಟಾರ್‌ಗೆ ಕೆ.ಎಲ್ ರಾಹುಲ್ ಶುಭಹಾರೈಕೆ
ರೂಪೇಶ್ & ಸುನೀಲ್ ಶೆಟ್ಟಿ ‘ಜೈ’ಗೆ ಸಿಕ್ತಾ ಬಹುಪರಾಕ್..?
ಅಂದಹಾಗೆ ನಟ ಸುದೀಪ್ 501 ರೂಪಾಯಿ ಕೊಟ್ಟು ಜೈ ಚಿತ್ರದ ಮೊದಲ ಟಿಕೆಟ್ ಖರೀದಿಸಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಇಂಟೆರೆಸ್ಟಿಂಗ್ ಅಂದ್ರೆ ಜೈ ಚಿತ್ರ ಕುರಿತು ಕ್ರಿಕೆಟಿಗ ಕೆ .ಎಲ್. ರಾಹುಲ್ ತಮ್ಮ ಶುಭಕೋರಿದ್ದಾರೆ.
ಇನ್ನೂ ವಿಶೇಷ ಅಂದರೆ ಈ ಚಿತ್ರದ ಪಾತ್ರ ಒಂದರಲ್ಲಿ ಕೆ .ಎಲ್. ರಾಹುಲ್ ಹಾಗು ಸುನೀಲ್ ಶೆಟ್ಟಿ ಕೂಡ ನಟಿಸಿದ್ದಾರೆ. ರೂಪೇಶ್ ಶೆಟ್ಟಿ ಸಿನಿಮಾದ ನಿರ್ದೇಶಕರಾಗಿದ್ದು, ಕತೆ ಹಾಗೂ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಚಿತ್ರಕತೆ ರೂಪೇಶ್ ಶೆಟ್ಟಿ ಮತ್ತು ವೇಣು ಹಸ್ರಳ್ಳಿ. ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ, ನೃತ್ಯ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ನವೀನ್ ಶೆಟ್ಟಿ ಆರ್ಯನ್ಸ್. ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿದೆ. ಜೈ ಸಿನಿಮಾದಲ್ಲಿ ಅದ್ವಿತಿ ಶೆಟ್ಟಿ, ಸುನೀಲ್ ಶೆಟ್ಟಿ, ಡಾ ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮನೋಜ್ ಚೇತನ್ ಡಿ ಸೋಜ ಇನ್ನಿತರರು ಅಭಿನಯಿಸಿದ್ದಾರೆ. ಒಟ್ಟಾರೆ ಜೈ ಸಿನಿಮಾಗೆ ಪ್ರೇಕ್ಷರರು ಬಹುಪರಾಕ್ ಎನ್ನುತಿದ್ದಾರೆ.





