ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಹಲವು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಅದರಲ್ಲಿಯೂ, ನಟ ಗೋವಿಂದಾ ಹಾಗೂ ಸುನೀತಾ ಅಹುಜಾ ಡಿವೋರ್ಸ್ ಪಡೆಯಲಿದ್ದಾರೆ ಎಂಬ ವದಂತಿ ಹೆಚ್ಚು ಚರ್ಚೆಯಾಗುತ್ತಿದೆ.
ಹಲವಾರು ಮಾಧ್ಯಮಗಳ ಪ್ರಕಾರ, ಸುನೀತಾ ಆರು ತಿಂಗಳ ಹಿಂದೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದರೂ, ಗೋವಿಂದಾರ ವಕೀಲರು ಈ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಸುನೀತಾ ಅಹುಜಾ ಸ್ಪಷ್ಟನೆ
ಈ ವಿವಾದದ ನಡುವೆ, ಸುನೀತಾ ಅಹುಜಾ ಅವರ ವೀಡಿಯೊ ಒಂದು ವೈರಲ್ ಆಗಿದೆ. ಅದರಲ್ಲಿ ಅವರು ಹೀಗೆ ಹೇಳಿದ್ದಾರೆ: “ನಾವು ಬೇರೆ ಬೇರೆ ಇರುವುದನ್ನು ಡಿವೋರ್ಸ್ ಎಂದು ತಪ್ಪಾಗಿ ಅರ್ಥೈಸಬೇಡಿ. ಗೋವಿಂದಾ ರಾಜಕೀಯದಲ್ಲಿ ಸಕ್ರಿಯರಾದ ನಂತರ, ಕಾರ್ಯಕರ್ತರು ನಮ್ಮ ಮನೆಗೆ ಬರತೊಡಗಿದರು. ಅದರಿಂದಾಗಿ ನಾವು ಎದುರುಗಡೆ ಆಫೀಸ್ ತೆಗೆದುಕೊಂಡಿದ್ದೇವೆ. ಇದು ನಮ್ಮ ವೈಯಕ್ತಿಕ ಜೀವನಕ್ಕೆ ಸುಳ್ಳು ಸುದ್ದಿಗಳನ್ನು ಹೊಸೆಯಲು ಕಾರಣವಾಗಬಾರದು. ಯಾರಪ್ಪನಿಂದಲೂ ನಮ್ಮಿಬ್ಬರನ್ನು ಬೇರ್ಪಡಿಸಲು ಸಾಧ್ಯವಿಲ್ಲ!” ಎಂದು ಹೇಳಿದ್ದಾರೆ.
ವಿವಾಹವಿಚ್ಛೇದನದ ಸುಳ್ಳು ಸುದ್ದಿಗಳ ಹಿನ್ನೆಲೆ:
ಗೋವಿಂದಾ ಮತ್ತು ಸುನೀತಾ 35 ವರ್ಷಗಳಿಂದ ವಿವಾಹಿತರಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ರಿಯಲ್ ಟೈಮ್ ನಲ್ಲಿ ಬಾಲಿವುಡ್ ಸೆಲಿಬ್ರಿಟಿಗಳ ಬಗ್ಗೆ ಫೇಕ್ ನ್ಯೂಸ್ ಹೆಚ್ಚಾಗಿ, ಅನೇಕರು ಗೊಂದಲಕ್ಕೊಳಗಾಗುತ್ತಿದ್ದಾರೆ. ಸುನೀತಾ ಅವರ ಹೇಳಿಕೆಯಿಂದ ಈ ಎಲ್ಲಾ ವದಂತಿಗಳಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ.