ಎಕ್ಕ ರಿಲೀಸ್ ಡೇಟ್ ಹತ್ತಿರ ಆಗ್ತಿದ್ದಂತೆ ಚಿತ್ರದ ಒಂದೊಂದೇ ಸಾಂಗ್ ಹೊರಬರ್ತಿವೆ. ಯುವರಾಜ್‌ಕುಮಾರ್ ಸುಕ್ಕಾ ಖದರ್‌ಗೆ ಪ್ರೇಕ್ಷಕರು ಸ್ಟನ್ ಆಗಿದ್ದಾರೆ. ಸ್ಯಾಂಪಲ್ಸ್‌ನಿಂದಲೇ ಸಿಕ್ಕಾಪಟ್ಟೆ ಹಂಗಾಮ ಮಾಡ್ತಿರೋ ಎಕ್ಕ, ಅಂಡರ್‌ವರ್ಲ್ಡ್ ರೌಡಿಸಂನ ರೈಮ್ಸ್ ಗೀತೆಯಿಂದ ಎಲ್ಲರ ಗಮನ ಸೆಳೆದಿದೆ. ಬ್ಯಾಂಗಲ್ ಹಾಗೂ ಎಕ್ಕ ಮಾರ್ ಜೊತೆ ರೌಡಿ ರೈಮ್ಸ್‌ನ ಒಮ್ಮೆ ಕಣ್ತುಂಬ್ಕೊಂಡ್ ಬಿಡಿ.
ಯಾವುದೇ ಸಿನಿಮಾಗೆ ಕಂಟೆಂಟ್ ಕಿಂಗ್. ಅದೇ ರೀತಿ ತನ್ನ ಕಂಟೆಂಟ್ ಹಾಗೂ ಹಾಡುಗಳ ಮೂಲಕ ಸಿನಿಪ್ರಿಯಕರ ನಿರೀಕ್ಷೆ ಹೆಚ್ಚಿಸಿರೋ ಸಿನಿಮಾ ಎಕ್ಕ. ಈಗಾಗ್ಲೇ ಎಕ್ಕ ಚಿತ್ರದ ಟೈಟಲ್ ಟ್ರ್ಯಾಕ್ ಹಾಗೂ ಬ್ಯಾಂಗಲ್ ಬಂಗಾರಿ ಹಾಡುಗಳು ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಸೇರಿವೆ. ಇದೀಗ ಸಿನಿಮಾದ ಮತ್ತೊಂದು ಗೀತೆ ಹೊರಬಿದ್ದಿದೆ. ಅದೇ ರೌಡಿ ರೈಮ್ಸ್.
ರೌಡಿ ರೈಮ್ಸ್ ಸಾಂಗ್ ಆನಂದ್ ಆಡಿಯೋದಲ್ಲಿ ಅನಾವರಣಗೊಳಿಸಲಾಗಿದೆ. ಈ ಹಾಡಲ್ಲಿ ರೌಡಿಗಳ ಚಿತ್ರಣವೇ ಇದೆ. ಇದರಲ್ಲಿ A to Z ವಿಷಯ ಇದೆ. ಅಂದ್ರೆ A ಅಕ್ಷರದಿಂದ Z ಅಕ್ಷರದವರೆಗೂ ರೌಡಿಗಳ ಮ್ಯಾಟರ್‌ನ ಇಲ್ಲಿ ಮಜಬೂತಾವಾಗಿ ಹೇಳಲಾಗಿದೆ. ಸಂಗೀತ ನಿರ್ದೇಶಕ ಚರಣ್ ರಾಜ್ ಇಲ್ಲೂ ಟ್ರೆಂಡಿ ಟ್ಯೂನ್ ಕೊಟ್ಟಿದ್ದಾರೆ. ದುನಿಯಾ ವಿಜಯ್‌ರ ಭೀಮ, ಸಲಗದಂತೆ ಇಲ್ಲಿಯೂ ವಿಭಿನ್ನತೆ ಎದ್ದು ಕಾಣ್ತಿದೆ.
ರೌಡಿ ರೈಮ್ಸ್ ಹಾಡಿಗೆ ನಾಗಾರ್ಜುನ್ ಶರ್ಮಾ ಹಾಗೂ ನಿರ್ದೇಶಕ ರೋಹಿತ್ ಪದಕಿ ಇಬ್ಬರೂ ಸಾಹಿತ್ಯ ಒದಗಿಸಿದ್ದಾರೆ. ಸಂಗೀತ ನಿರ್ದೇಶಕ ಚರಣ್ ರಾಜ್ ಹಾಗೂ ರೋಹಿತ್ ಪದಕಿ ರೌಡಿ ರೈಮ್ಸ್ ಗೆ ಧ್ವನಿಯಾಗಿದ್ದಾರೆ. ಈ ಮೂಲಕ ಡೈರೆಕ್ಟರ್ ಸಿಂಗರ್ ಕೂಡ ಆಗಿ ಮಿಂಚು ಹರಿಸಿದ್ದಾರೆ. ಚರಣ್ ರಾಜ್ ಸಂಗೀತದ ಮೋಡಿ ಚಿತ್ರಕ್ಕಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಸೇರಿ ಜಂಟಿಯಾಗಿ ಈ ಸಿನಿಮಾನ ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಕೂಡ ನಟಿಸಿದ್ದಾರೆ. ಬಾಲಿವುಡ್‌ನ ಅತುಲ್ ಕುಲಕರ್ಣಿ ಕೂಡಾ ಅಭಿನಯಿಸಿದ್ದು, ಇವರೊಟ್ಟಿಗೆ ಚಿತ್ರದಲ್ಲಿ ಸಂಜನಾ ಆನಂದ್, ಸಂಪದಾ ಸೇರಿ ಇಬ್ಬರು ನಾಯಕಿಯರಿದ್ದಾರೆ. ಜುಲೈ 18ರಂದು ಎಕ್ಕ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
ಯುವ ಸಿನಿಮಾದ ಬಳಿಕ ರಾಘವೇಂದ್ರ ರಾಜ್‌ಕುಮಾರ್ ಕಿರಿ ಮಗ ಯುವರಾಜ್ ಎರಡನೇ ಸಿನಿಮಾ ಇದಾಗಿದ್ದು, ರಾ ಅಂಡ್ ರಗಡ್ ಪಾತ್ರ, ರೋಹಿತ್ ಕಲ್ಟ್ ಮೇಕಿಂಗ್, ಚರಣ್ ರಾಜ್ ಸುಕ್ಕಾ ಟ್ಯೂನ್ಸ್ ಹಾಗೂ ಮೂರು ಪ್ರೊಡಕ್ಷನ್ ಹೌಸ್‌ಗಳ ಭರ್ಜರಿ ಬಂಡವಾಳದಿಂದ ಸಿನಿಮಾ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡಲಿದೆ. ಸ್ಯಾಂಪಲ್ಸ್‌ನಂತೆ ಸಿನಿಮಾ ಕೂಡ ನೋಡುಗರಿಗೆ ಬೇಜಾನ್ ಕಿಕ್ ಕೊಡೋದ್ರಲ್ಲಿ ಡೌಟೇ ಇಲ್ಲ ಅನಿಸ್ತಿದೆ.