• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರೆಟ್ರೋ ಹೀರೋಗಳ ಹಿಂದೆ ದುಲ್ಕರ್.. ‘ಕಾಂತ’ ಕಹಳೆ

ನ-14ಕ್ಕೆ ಕಾಂತ ತೆರೆಗೆ.. ಸ್ಯಾಂಪಲ್ಸ್ ಸಖತ್ ಸೆನ್ಸೇಷನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 1, 2025 - 2:35 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design 2025 11 01t142946.374

ಮಲಯಾಳಂನ ಯಂಗೆಸ್ಟ್ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಸದಾ ಹೊಸತನಕ್ಕೆ ಹಾತೊರೆಯುವ ಕಲಾವಿದ. ಸದಾ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸೋ ದುಲ್ಕರ್‌ಗೆ ರೆಟ್ರೋ ರೋಲ್ಸ್ ಅಂದ್ರೆ ಅಚ್ಚುಮೆಚ್ಚು. ಮಹಾನಟಿಯಲ್ಲಿ ಜೆಮಿನಿ ಗಣೇಶನ್ ಆಗಿ ಮಿಂಚಿದ್ದ ಈ ಹ್ಯಾಂಡ್ಸಮ್ ಹೀರೋ ಇದೀಗ ತಮಿಳಿನ ಮೊದಲ ಸೂಪರ್ ಸ್ಟಾರ್ ಎಂಕೆಟಿ ಭಾಗವತರ್ ಆಗಿ ಕಮಾಲ್ ಮಾಡಲಿದ್ದಾರೆ.

ದುಲ್ಕರ್ ಸಲ್ಮಾನ್.. ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಅವ್ರ ಮುದ್ದಿನ ಮಗ. ಕಡಿಮೆ ಕಾಲಾವಧಿಯಲ್ಲಿ ಭಿನ್ನ, ವಿಭಿನ್ನ ಪಾತ್ರಗಳು ಹಾಗೂ ಸಿನಿಮಾಗಳಿಂದ ತಂದೆಯಂತೆ ಬಹುಬೇಗ ಪ್ರೇಕ್ಷಕರ ಅಚ್ಚುಮೆಚ್ಚಿನ ಸ್ಟಾರ್ ಅನಿಸಿಕೊಂಡರು. ಅದ್ರಲ್ಲೂ ಮಲಯಾಳಂ ಅಲ್ಲದೆ, ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ತಮ್ಮ ನಟನಾ ಗತ್ತು ತೋರಿಸಿ, ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟರು.

RelatedPosts

“ಬೆಂಗಳೂರಿಗೆ ಬಂದರೆ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತದೆ”; ನ್ಯಾಚುರಲ್ ಸ್ಟಾರ್ ನಾನಿ

ಪಾ. ರಂಜಿತ್ ನಿರ್ದೇಶನದ ‘ವೆಟ್ಟುವಮ್’ ಸಿನಿಮಾಗೆ ಕನ್ನಡದಲ್ಲಿ ಕಿಚ್ಚ ಸುದೀಪ್ ಧ್ವನಿ

ಅಂದು ಒಕೇ ಒಕ್ಕಡು..ಇಂದು ಕಾಮನ್‌‌ಮ್ಯಾನ್..CM ಕಥೆ

ರಣವೀರ್ ಸಿಂಗ್-ದೀಪಿಕಾ ದಂಪತಿಗೆ ಎರಡನೇ ಹೆಣ್ಣು ಮಗು ಜನನ

ADVERTISEMENT
ADVERTISEMENT

ಲಕ್ಕಿ ಭಾಸ್ಕರ್, ಕಿಂಗ್ ಆಫ್ ಕೋಥಾ ಚಿತ್ರಗಳ ರೀಸೆಂಟ್ ಹಿಟ್ಸ್‌ನಿಂದ ಟಾಕ್ ಆಫ್ ದಿ ಟೌನ್ ಆಗಿರೋ ದುಲ್ಕರ್, ಇತ್ತೀಚೆಗೆ  ಲೋಕಾ ಅನ್ನೋ ಸಿನಿಮಾನ ಪ್ರೊಡ್ಯೂಸ್ ಮಾಡಿ, ಅದ್ರಲ್ಲಿ ಸ್ಪೆಷಲ್ ಅಪಿಯರೆನ್ಸ್ ಕೂಡ ನೀಡಿದ್ರು. ಅದು ಕೂಡ ಪ್ಯಾನ್ ಇಂಡಿಯಾ ಸದ್ದು ಗದ್ದಲ ಮಾಡಿತು. ಇದೀಗ ಕಾಂತ ಚಿತ್ರದ ಸ್ಯಾಂಪಲ್ಸ್‌‌ನಿಂದ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದಾರೆ ದುಲ್ಕರ್.

ರೆಟ್ರೋ ಹೀರೋಗಳ ಹಿಂದೆ ದುಲ್ಕರ್.. ‘ಕಾಂತ’ ಕಹಳೆ

ಮಹಾನಟಿಯಲ್ಲಿ ಜೆಮಿನಿ ಗಣೇಶನ್.. ಈಗ ಭಾಗವತರ್

ಯೆಸ್.. ಕಾಂತ ಸಿನಿಮಾ ಇದೇ ನವೆಂಬರ್ 14ಕ್ಕೆ ತೆರೆಗಪ್ಪಳಿಸುತ್ತಿದ್ದು, ಇದು ತಮಿಳಿನ ಮೊದಲ ಸೂಪರ್ ಸ್ಟಾರ್ ಎಂ.ಕೆ.ಟಿ. ಭಾಗವತರ್ ಕುರಿತ ಬಯೋಪಿಕ್ ಆಗಿದೆ. ಭಾಗವತರ್ ಆಗಿ ದುಲ್ಕರ್ ಬಣ್ಣ ಹಚ್ಚಿದ್ದು, ರೆಟ್ರೋ ಶೈಲಿಯ ಚಿತ್ರಗಳಿಗೆ ಹೇಳಿ ಮಾಡಿಸಿದಂತಹ ಕಲಾವಿದ ಅನಿಸಿಕೊಂಡಿದ್ದಾರೆ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ದುಲ್ಕರ್ ಸಲ್ಮಾನ್.

ಸ್ವತಂತ್ರ ಪೂರ್ವ ಭಾರತದಲ್ಲಿ, ತಮಿಳು ಚಿತ್ರರಂಗದ ಆರಂಭದ ದಿನಗಳಲ್ಲಿ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿದ ಭಾಗವತರ್, ಯಶಸ್ಸಿನ ಉತ್ತುಂಗದಲ್ಲಿದ್ದರು. ತನ್ನ ವಿರುದ್ಧ ಲೇಖನ ಬರೆದ ಅನ್ನೋ ಕಾರಣಕ್ಕೆ ಫಿಲ್ಮ್ ಮ್ಯಾಗಜಿನ್ ಜರ್ನಲಿಸ್ಟ್ ಸಿ.ಎನ್. ಲಕ್ಷ್ಮೀಕಾಂತನ್ ಅನ್ನೋರ ಕೊಲೆಗೆ ಸುಪಾರಿ ನೀಡಿ, ಕೊಲೆಗಾರನ ಪಟ್ಟ ಕಟ್ಟಿಕೊಂಡು ಜೈಲು ಪಾಲಾಗ್ತಾರೆ. ದುರಂತ ಅಂದ್ರೆ ಆತ ಜೈಲಲ್ಲಿದ್ದಾಗ ಅದೇ ಜೈಲಿನ ಪಕ್ಕದಲ್ಲಿದ್ದ ಟೆಂಟ್‌ವೊಂದರಲ್ಲಿ ಬರೋಬ್ಬರಿ ಎರಡು ವರ್ಷಗಳ ಕಾಲ ಆತನದ್ದೇ ಸಿನಿಮಾವೊಂದು ಪ್ರದರ್ಶನ ಕಂಡಿದೆ.

ತಮಿಳು ಚಿತ್ರರಂಗದ ಮೊಟ್ಟ ಮೊದಲ ಸೂಪರ್ ಸ್ಟಾರ್ ಅನಿಸಿಕೊಂಡಿದ್ದ ಎಂಕೆಟಿ ಭಾಗವತರ್, ನಟನೆಯ ಜೊತೆಗೆ ಒಳ್ಳೆಯ ಕಾರ್ನಾಟಿಕ್ ಗಾಯಕ ಕೂಡ ಹೌದು. ಸೆಲ್ವಮಣಿ ಸೆಲ್ವರಾಜ್ ನಿರ್ದೇಶನದ ಕಾಂತ ಸಿನಿಮಾ ಸದ್ಯ ಟೀಸರ್ ಹಾಗೂ ಸಾಂಗ್ಸ್‌ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದು, ರಾಣಾ ದಗ್ಗುಬಾಟಿ ಹಾಗೂ ಭಾಗ್ಯಶ್ರೀ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ.

ನ-14ಕ್ಕೆ ಕಾಂತ ತೆರೆಗೆ.. ಸ್ಯಾಂಪಲ್ಸ್ ಸಖತ್ ಸೆನ್ಸೇಷನ್

ತಮಿಳು ಮೊದಲ ಸೂಪರ್ ಸ್ಟಾರ್ ಆಗಿ ದುಲ್ಕರ್ ಕಿಕ್

ಅಂದಹಾಗೆ ದುಲ್ಕರ್ ಸಲ್ಮಾನ್ ಈ ಹಿಂದೆ ಮಹಾನಟಿ ಅನ್ನೋ ಅಭಿನೇತ್ರಿ ಸಾವಿತ್ರಿ ಬಯೋಪಿಕ್‌‌ನಲ್ಲಿ ಜೆಮಿನಿ ಗಣೇಶನ್ ಆಗಿ ಕಮಾಲ್ ಮಾಡಿದ್ರು. ಆಗಲೂ ಸಹ ಥೇಟ್ ಲೆಜೆಂಡ್ ಜೆಮಿನಿ ಗಣೇಶನ್ ರೀತಿ, ಹಾವ ಭಾವದ ಜೊತೆ ಆ ಪಾತ್ರಕ್ಕೆ ಜೀವ ತುಂಬುವ ಕಾರ್ಯ ಮಾಡಿದ್ರು. ಇದೀಗ ಕಾಂತ.. ಇವೆರಡನ್ನೂ ನೋಡ್ತಿದ್ರೆ ಅದ್ಯಾಕೋ ದುಲ್ಕರ್ ರೆಟ್ರೋ ಸ್ಟಾರ್‌‌ಗಳ ಪಾತ್ರಗಳ ಹಿಂದೆ ಬಿದ್ದಂತಿದೆ. ಹೊಡಿ ಬಡಿ ಕಡಿ ಸಿನಿಮಾಗಳು, ಬಿಲ್ಡಪ್ ಪಾತ್ರಗಳನ್ನ ಬಯಸೋ ಇಂದಿನ ಸ್ಟಾರ್ಸ್‌ ನಡುವೆ ದುಲ್ಕರ್ ಅಂತಹ ಟ್ರೂ ಕಲಾವಿದ ಇರೋದು ಖುಷಿಯ ವಿಚಾರ.

 

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 09 19T221248.967

KPSC ಹಗರಣಕ್ಕೆ ಬಿಗ್ ಟ್ವಿಸ್ಟ್; ಐಎಎಸ್ ಅಧಿಕಾರಿ ಜ್ಞಾನೇಂದ್ರ- ಕನ್ನಾಳೆಗೆ ಮತ್ತೊಂದು ಸಂಕಷ್ಟ!

by ಶಾಲಿನಿ ಕೆ. ಡಿ
September 19, 2026 - 10:14 pm
0

Untitled design 2026 09 19T215804.442

“ಬೆಂಗಳೂರಿಗೆ ಬಂದರೆ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತದೆ”; ನ್ಯಾಚುರಲ್ ಸ್ಟಾರ್ ನಾನಿ

by ಶಾಲಿನಿ ಕೆ. ಡಿ
September 19, 2026 - 9:59 pm
0

Untitled design 2026 09 19T214531.387

ಮಸೀದಿ ಮುಂದೆ ಪಟಾಕಿ ಸಿಡಿಸಿ ಮೆರವಣಿಗೆ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೇಸ್‌‌ ದಾಖಲು

by ಶಾಲಿನಿ ಕೆ. ಡಿ
September 19, 2026 - 9:46 pm
0

Untitled design 2026 09 19T212541.422

ಪಾ. ರಂಜಿತ್ ನಿರ್ದೇಶನದ ‘ವೆಟ್ಟುವಮ್’ ಸಿನಿಮಾಗೆ ಕನ್ನಡದಲ್ಲಿ ಕಿಚ್ಚ ಸುದೀಪ್ ಧ್ವನಿ

by ಶಾಲಿನಿ ಕೆ. ಡಿ
September 19, 2026 - 9:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 19T215804.442
    “ಬೆಂಗಳೂರಿಗೆ ಬಂದರೆ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತದೆ”; ನ್ಯಾಚುರಲ್ ಸ್ಟಾರ್ ನಾನಿ
    September 19, 2026 | 0
  • Untitled design 2026 09 19T212541.422
    ಪಾ. ರಂಜಿತ್ ನಿರ್ದೇಶನದ ‘ವೆಟ್ಟುವಮ್’ ಸಿನಿಮಾಗೆ ಕನ್ನಡದಲ್ಲಿ ಕಿಚ್ಚ ಸುದೀಪ್ ಧ್ವನಿ
    September 19, 2026 | 0
  • Untitled design 2026 09 19T194715.635
    ಅಂದು ಒಕೇ ಒಕ್ಕಡು..ಇಂದು ಕಾಮನ್‌‌ಮ್ಯಾನ್..CM ಕಥೆ
    September 19, 2026 | 0
  • Untitled design 2026 09 19T193349.677
    ರಣವೀರ್ ಸಿಂಗ್-ದೀಪಿಕಾ ದಂಪತಿಗೆ ಎರಡನೇ ಹೆಣ್ಣು ಮಗು ಜನನ
    September 19, 2026 | 0
  • Untitled design 2026 09 19T175841.845
    ಹಾಲಿವುಡ್‌ನತ್ತ ‘ಮಹಾರಾಜ’ ಸೇತುಪತಿ ದಂಡಯಾತ್ರೆ
    September 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version