ಶಿವರಾಜ್ ಕುಮಾರ್.. ಇವರು ಸನ್ ಆಫ್ ಬಂಗಾರದ ಮನುಷ್ಯ ಅನ್ನೋದು ಎಷ್ಟು ನಿಜವೋ, ಎನರ್ಜಿ ಹೌಸ್ ಅನ್ನೋದು ಕೂಡ ಅಷ್ಟೇ ಸತ್ಯ. ಕ್ಯಾನ್ಸರ್ ಕುಲುಮೆಯಲ್ಲಿ ಬೆಂದು ಬಂದಂತಹ ಶಿವಣ್ಣ, ಇದೀಗ ಮತ್ತಷ್ಟು ಹೊಳಪು ಹೆಚ್ಚಿಸಿಕೊಂಡಿದ್ದಾರೆ. ಚಿಕಿತ್ಸೆ ನಂತ್ರ ಕಂಪ್ಲೀಟ್ ರಿಕವರ್ ಆಗಿದ್ದಾರೆ. ಅದಕ್ಕೆ ಅವರ ಸಿನಿಮೋತ್ಸಾಹ, ಲವಲವಿಕೆತನವೇ ಸಾಕ್ಷಿ. ಹೌದು.. ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ವಾಪಸ್ ಆಗಿರೋ ಲಿವಿಂಗ್ ಲೆಜೆಂಡ್, ಅಭಿಮಾನಿ ದೇವರುಗಳಿಂದ ಅದ್ಧೂರಿ ಸ್ವಾಗತ ಪಡೆದರು. ನಂತ್ರ ಝೀ ವಾಹಿನಿಯ ಕಾರ್ಯಕ್ರಮವೊಂದಕ್ಕೆ ಹೋಗಿಬಂದರು. ಆಪ್ತರು, ಚಿತ್ರರಂಗದ ಮಂದಿಯನ್ನ ಮನೆಯಲ್ಲೇ ಭೇಟಿ ಮಾಡ್ತಿದ್ರು. ಡಾಲಿ ಮದ್ವೆಗಾಗಿ ಮೈಸೂರಿಗೂ ಹೋಗಿಬಂದರು. ಇದೀಗ ನಿನ್ನೆಯಷ್ಟೇ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ, ತಾನು ದೈಹಿಕ ಹಾಗೂ ಮಾನಸಿಕವಾಗಿ ಕಂಬ್ಯಾಕ್ ಮಾಡಿದ್ದೀನಿ ಅನ್ನೋದನ್ನ ಕರುನಾಡಿಗೆ ಸಾರಿದ್ದಾರೆ.
ಅಂದಹಾಗೆ ಮಾರ್ಚ್-2ರಿಂದ ಅಂದ್ರೆ ನಾಳೆ ಸೋಮವಾರದಿಂದಲೇ ಶಿವಣ್ಣ 131 ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗೋದಾಗಿ ಶಿವಣ್ಣ ಅಧಿಕೃತವಾಗಿ ಹೇಳಿದ್ದಾರೆ. ಫಿಲ್ಮ್ ಫೆಸ್ಟ್ ವೇದಿಕೆಯಲ್ಲೇ ಈ ಖುಷಿ ಸುದ್ದಿ ಹಂಚಿಕೊಂಡಿರೋ ಶಿವಣ್ಣ, ಹೆಚ್ ಎಂ ಟಿಯಲ್ಲಿ ಹಾಕಿರೋ ಸೆಟ್ ಗೆ ಎಂಟ್ರಿ ಕೊಡಲಿದ್ದಾರೆ. ಇಲ್ಲೊಂದು ಎರಡು ದಿನ ಶೂಟಿಂಗ್ ಮುಗಿಸಿ, ಹೈದ್ರಾಬಾದ್ ಗೆ ಹಾರಲಿದ್ದಾರಂತೆ. ಅಲ್ಲಿ ರಾಮ್ ಚರಣ್ ತೇಜಾ- ಬುಚ್ಚಿಬಾಬು ಕಾಂಬೋನ RC16 ಸಿನಿಮಾದಲ್ಲಿ ಚಿರಂಜೀವಿ ಮಗನ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ನಮ್ಮ ಕರುನಾಡ ಚಕ್ರವರ್ತಿ.
ಜನವರಿ ಒಂದರಂದು ಹೊಸ ವರ್ಷಕ್ಕಾಗಿ ಅಮೆರಿಕಾದಿಂದಲೇ ವಿಡಿಯೋ ರಿವೀಲ್ ಮಾಡಿದ್ದ ಶಿವಣ್ಣ, ಅಲ್ಲೊಂದು ಮಾತು ಹೇಳಿದ್ರು. ಶಿವಣ್ಣ ವಿಲ್ ಬಿ ಬ್ಯಾಕ್ ಸೂನ್. ಮೊದಲಿನಂತೆ ಡ್ಯಾನ್ಸ್ ಹಾಗೂ ಫೈಟ್ ಮಾಡ್ತೀನಿ ಅಂದಿದ್ರು. ಅದನ್ನು ಈಗ ನಿಜವಾಗಿಸಲು ಹೊರಟಿದ್ದಾರೆ ನಮ್ಮ ಶಿವಣ್ಣ