ಡಾನ್.. ಭಾರತೀಯ ಚಿತ್ರರಂಗದಲ್ಲಿ ಈ ಹೆಸರು ಕೇಳ್ತಿದ್ದಂತೆ ನೆನಪಾಗೋ ಫಸ್ಟ್ ನೇಮ್ ಬಿಗ್ ಬಿ ಅಮಿತಾಬ್ ಬಚ್ಚನ್. ಹೌದು.. 70ರ ದಶಕದಲ್ಲಿ ತೆರೆಕಂಡಿದ್ದ ಅಮಿತಾಬ್ ರ ಡಾನ್ ಮೂವಿ ಇತಿಹಾಸದ ಪುಟಗಳನ್ನ ಸೇರಿರೋದು ಗೊತ್ತೇಯಿದೆ. ಆದ್ರೆ ಈ ಜನರೇಷನ್ ಪಾಲಿಗೆ ಡಾನ್ ಯಾರು ಅಂತ ಕೇಳಿದ್ರೆ ಥಟ್ ಅಂತ ಹೇಳ್ತಾರೆ ಕಿಂಗ್ ಖಾನ್ ಶಾರೂಖ್ ಅಂತ.
2006ರಲ್ಲಿ ಅದೇ ಬಿಗ್ ಬಿ ಸಿನಿಮಾದ ಡಾನ್ ಟೈಟಲ್ ನಲ್ಲೇ ಡಾನ್: ದಿ ಚೇಸ್ ಬಿಗಿನ್ಸ್ ಅಗೈನ್ ಅನ್ನೋ ಸಿನಿಮಾನ ಫರಾನ್ ಅಖ್ತರ್ ನಿರ್ದೇಶಿಸಿ, ನಿರ್ಮಿಸಿದ್ರು. 38 ಕೋಟಿಯಲ್ಲಿ ತಯಾರಾದ ಇಂಟರ್ ನ್ಯಾಷನಲ್ ಡ್ರಗ್ ಮಾಫಿಯಾ ಕುರಿತ ಡಾನ್, ಬಾಕ್ಸ್ ಆಫೀಸ್ ನಲ್ಲಿ 106 ಕೋಟಿ ಬೃಹತ್ ಮೊತ್ತ ಕಲೆಕ್ಷನ್ ಮಾಡಿತು. ಅದಾದ ಬಳಿಕ ಅದ್ರ ಸೀಕ್ವೆಲ್ ಡಾನ್-2 ಕೂಡ ಬಂತು. 2011ರಲ್ಲಿ ಡಾನ್-2 ಸಿನಿಮಾ ಒನ್ಸ್ ಅಗೈನ್ ಅದೇ ಫರಾನ್ ಅಖ್ತರ್ ಅದೇ ಕಿಂಗ್ ಖಾನ್ ಶಾರೂಖ್ ರನ್ನ ಇಟ್ಕೊಂಡು ಮಾಡಿದ್ರು. ಎರಡನೇ ಬಾರಿ ಕೂಡ ಭರ್ಜರಿಯಾಗೇ ಬಾಕ್ಸ್ ಆಫೀಸ್ ಕಮಾಲ್ ಮಾಡಿತ್ತು.
76 ಕೋಟಿ ಬಜೆಟ್ ನಲ್ಲಿ ಸಿದ್ದವಾಗಿದ್ದ ಡಾನ್-2 ಸಿನಿಮಾ, 203 ಕೋಟಿಗಳಿಸೋ ಮೂಲಕ ದಾಖಲೆ ಬರೆದಿತ್ತು. ಇದೀಗ ಫರಾನ್ ಅಖ್ತರ್ ಡಾನ್-3 ಮಾಡಲು ಸಜ್ಜಾಗಿದ್ದಾರೆ. ಆದ್ರೆ ಈ ಬಾರಿಯ ಡಾನ್ ಸೀರೀಸ್ ನಿಂದ ಕಿಂಗ್ ಖಾನ್ ಶಾರೂಖ್ ರನ್ನ ಕೈ ಬಿಡಲಾಗಿದೆ. ಹಾಗಾದ್ರೆ ಬಾಲಿವುಡ್ ನ ಹೊಚ್ಚ ಹೊಸ ಡಾನ್ ಯಾರು ಅಂತೀರಾ..? ರಣ್ವೀರ್ ಸಿಂಗ್.
ಯೆಸ್.. ಡಾನ್-3 ಸಿನಿಮಾ ಇದೇ ವರ್ಷದಲ್ಲಿ ಸೆಟ್ಟೇರಲಿದ್ದು, ಅದರಲ್ಲಿ ಡಾನ್ ರೋಲ್ ನಲ್ಲಿ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ರಣ್ವೀರ್ ಸಿಂಗ್ ಲೀಡ್ ರೋಲ್ ನಲ್ಲಿ ಮಿಂಚು ಹರಿಸಲಿದ್ದಾರೆ. ಅದನ್ನ ಸ್ವತಃ ಡೈರೆಕ್ಟರ್ ಕಮ್ ಪ್ರೊಡ್ಯೂಸರ್ ಫರಾನ್ ಅಖ್ತರ್ ಅವರೇ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ ಡಾನ್ ರಣ್ವೀರ್ ಸಿಂಗ್ ಜೊತೆ ಕಿಯಾರಾ ಅಡ್ವಾನಿ ರೊಮ್ಯಾನ್ಸ್ ಮಾಡೋದು ಕೂಡ ಪಕ್ಕಾ ಆಗಿದೆ.
ಶಾರೂಖ್ ರೀಪ್ಲೇಸ್ಮೆಂಟ್ ಗೆ ಹೀರೋ-ಡೈರೆಕ್ಟರ್ ಮಧ್ಯೆ ಹೊಂದಾಣಿಕೆ ಇರಲಿಲ್ಲ ಅನ್ನೋದು ಓಪನ್ ಸೀಕ್ರೆಟ್. ಅದೇನೇ ಇರಲಿ, ಶಾರೂಖ್ ರನ್ನ ಬಿಟ್ಟು ಡಾನ್ ಪಾತ್ರದಲ್ಲಿ ರಣ್ವೀರ್ ಸಿಂಗ್ ಹೇಗೆ ಕಾಣಿಸಿಕೊಳ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
| Reported by: ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್