ಬಳ್ಳಾರಿ ಧ್ರುವ ಸರ್ಜಾ ಅಭಿಮಾನಿಗಳ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರು ಹಾಗೂ ಧ್ರುವ ಆಸರೆ ಫೌಂಡೇಶನ್ ಸಂಸ್ಥಾಪಕರಾದ ಎಂ.ಜಿ ಕನಕ ಅವರ ನೇತೃತ್ವದಲ್ಲಿ ಸುಮಾರು 400 ಆಟೋಗಳಿಗೆ ‘ಕೆಡಿ’ ಚಲನಚಿತ್ರದ ಸ್ಟಿಕರ್ ಗಳನ್ನು ಅಂಟಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಕನ್ನಡ ಚಲನಚಿತ್ರ ನಾಯಕ ನಟರಾದ ಧ್ರುವ ಸರ್ಜಾ ಅವರು ಭಾನುವಾರ ವಿಡಿಯೋ ಕಾಲ್ ಮುಖಾಂತರ ಆಟೋಗಳಿಗೆ ‘ಕೆಡಿ’ ಚಲನಚಿತ್ರದ ಸ್ಟಿಕರ್ ಗಳನ್ನು ಅಂಟಿಸೋಕೆ ಚಾಲನೆ ನೀಡಿದರು.
ಇದೇ ವೇಳೆ ಧ್ರುವ ಆಸರೆ ಫೌಂಡೇಶನ್ ಸಂಸ್ಥಾಪಕರಾದ ಎಂ.ಜಿ ಕನಕ ಅವರು ಮಾತನಾಡಿ ಸುಮಾರು 400 ಆಟೋಗಳಿಗೆ ಕೆಡಿ ಚಲನಚಿತ್ರದ ಸ್ಟಿಕರ್ ಗಳನ್ನು ಅಂಟಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆನೆ. ಆದ್ದರಿಂದ ಧ್ರುವ ಸರ್ಜಾ ಅವರ ವಿಡಿಯೋ ಕಾಲ್ ಮುಖಾಂತರ ಆಟೋಗಳಿಗೆ ‘ಕೆಡಿ’ ಚಲನಚಿತ್ರದ ಸ್ಟಿಕರ್ ಅಂಟಿಸಲು ಚಾಲನೆ ನೀಡಿದ್ದು ನನ್ನ ಅದೃಷ್ಟ ಎಂದೆಂದಿಗೂ ನಿಮ್ಮ ಅಭಿಮಾನಿಯಾಗಿರುತ್ತೇನೆ ಹಾಗೂ ನಿಮ್ಮ ಹೆಸರಿನಲ್ಲಿ ಇನ್ನು ಹೆಚ್ಚಿನ ಮಟ್ಟದಲ್ಲಿ ಬಡವರಿಗೆ ನಿರ್ಗತಿಕರಿಗೆ ಮತ್ತು ಹಿರಿಯರಿಗೆ ಸಹಾಯ ಮಾಡುತ್ತೇನೆ ಎಂದು ಎಂ.ಜಿ ಕನಕ ಹೇಳಿದರು.
ಈ ಸಂದರ್ಭದಲ್ಲಿ ಅಭಿಮಾನಿಗಳಾದ ಉಮಾರ್ ಫಾರೂಕ್, ಕಿರಣ್ ಕುಮಾರ್, ಕೊಳಗಲ್ ಶಿವು, ಚೇಳ್ಳಗುರ್ಕೀ ನಾಗರಾಜ್, ಗಂಗಾಧರ್, ಆಟೋ ಶಿವು, ಕಾರ್ತಿಕ್, ಬಿ.ಬೆಳಗಲ್ ಗಣೇಶ್, ಭೀಮ, ಆರಿಫ್ ಸೇರದಂತೆ ಅನೇಕರು ಉಪಸ್ಥಿತರಿದ್ದರು.