ತುಳುನಾಡಿನ ಜನತೆ ಜೊತೆ ಇಡೀ ಕರುನಾಡಿಗೆ ಪಿಕ್ಚರ್ ತೋರಿಸಿದ್ದ ಶಿಲ್ಪಾ ಗಣೇಶ್.. ಇದೀಗ ಮತ್ತೊಂದು ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ. ಕೋಸ್ಟಲ್‌ವುಡ್ ಸೂಪರ್ ಸ್ಟಾರ್ ಅರ್ಜುನ್ ದೇವ್ ಜೊತೆ ಟಾಸ್ ಹಾಕ್ತಿದ್ದಾರೆ. ಯೆಸ್.. ಕನ್ನಡ-ತುಳುನಲ್ಲಿ ರಿಲೀಸ್ ಆಗ್ತಿರೋ ಟಾಸ್ ಮೂವಿಯನ್ನ ತಮ್ಮದೇ ಬ್ಯಾನರ್ ಮೂಲಕ ಪ್ರೆಸೆಂಟ್ ಮಾಡಿ, ರಿಲೀಸ್ ಕೂಡ ಮಾಡ್ತಿದ್ದಾರೆ.
ಅರ್ಜುನ್ ದೇವ್ ಜೊತೆಗೂಡಿ ಶಿಲ್ಪಾ ಗಣೇಶ್ ‘ಟಾಸ್’
ಸು ಫ್ರಮ್ ಸೋ ಶನೀಲ್ ಜೊತೆ ಕೈ ಜೋಡಿಸಿದ ಶಿಲ್ಪಾ
ಹೆಲೋ ಹೆಲೋ ನೀಲಾಂಬರಿ.. ಇದು ಕನ್ನಡ ಹಾಗೂ ತುಳು ಎರಡು ಭಾಷೆಗಳಲ್ಲಿ ರಲೀಸ್ ಆಗಿರೋ ಟಾಸ್ ಅನ್ನೋ ಚಿತ್ರದ ಸಾಂಗ್ ಝಲಕ್. ಈ ಸಿನಿಮಾ ಇದೇ ಸೆಪ್ಟೆಂಬರ್ 18ಕ್ಕೆ ರಾಜ್ಯದಾದ್ಯಂತ ಪ್ರೇಕ್ಷಕರನ್ನ ರಂಜಿಸಲು ಬರ್ತಿದ್ದು, ಗೋಲ್ಡನ್ ಮೂವೀಸ್ ಪ್ರೆಸೆಂಟ್ ಮಾಡ್ತಿದ್ದು, ಅವಿಕಾ ಪ್ರೊಡಕ್ಷನ್ಸ್ & BRBಬಿ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ತುಳು ನಾಡಿನ ಸೂಪರ್ ಸ್ಟಾರ್ ಅರ್ಜುನ್ ದೇವ್ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ಚಿತ್ರ ಇದಾಗಿದೆ. ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ ಈ ಟಾಸ್‌ಗಿದೆ. ಮಣಿಕಾಂತ್ ಕದ್ರಿ ಸಂಗೀತ, ಜೋಯೆಲ್ ಶರ್ಮನ್ ಡಿಸೋಜಾ ಸಿನಿಮಾಟೋಗ್ರಫಿ, ಯಾಶ್ವಿನ್ ಕೆ ಶೆಟ್ಟಿಗೇರ್ ಸಂಕಲನ ಚಿತ್ರಕ್ಕಿದೆ.
ಸುಫ್ರಮ್ ಸೋ ಖ್ಯಾತಿಯಾ ಶನೀಲ್ ಗೌತಮ್ ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿರೋದು ಹೈಲೈಟ್. ಟಾಸ್ ಸಿನಿಮಾ ನೋಡಿ ಮೆಚ್ಚಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್ ಅವರು, ಈ ಚಿತ್ರವನ್ನ ತಮ್ಮ ಗೋಲ್ಡನ್ ಮೂವೀಸ್ ಬ್ಯಾನರ್ ನಡಿ ಖುದ್ದು ತಾವೇ ಪ್ರೆಸೆಂಟ್ ಕೂಡ ಮಾಡ್ತಿದ್ದಾರೆ. ಅದ್ರಂತೆ ಪ್ರಚಾರ ಆರಂಭಿಸಿರೋ ಚಿತ್ರತಂಡ, ಚಿತ್ರದ ಮೊದಲ ಹಾಡನ್ನ ಬಿಡುಗಡೆ ಮಾಡಿದೆ.
ಹೆಲೋ ಹೆಲೋ ನೀಲಾಂಬರಿ ಅನ್ನೋ ಮೆಲೋಡಿ ಡ್ಯುಯೆಟ್ ಹಾಡಲ್ಲಿ ಅರ್ಜುನ್ ದೇವ್ ಮತ್ತು ನಾಯಕಿ ಸುತೇಜ್ ಶೆಟ್ಟಿ ಕೆಮಿಸ್ಟ್ರಿ ಆಕರ್ಷಕವಾಗಿದ್ದು, ಮಣಿಕಾಂತ್ ಕದ್ರಿ ಟ್ಯೂನ್, ಯೋಗರಾಜ್ ಭಟ್ ಸಾಹಿತ್ಯವಿದೆ. ಈ ಹಾಡನ್ನ ಅರ್ಮಾನ್ ಮಾಲೀಕ್ ಅಷ್ಟೇ ಸೊಗಸಾಗಿ ಹಾಡಿದ್ದಾರೆ ಕೂಡ. ಆನಂದ್ ಆಡಿಯೋನಲ್ಲಿ ಕನ್ನಡ ಮತ್ತು ತುಳು ಎರಡೂ ಭಾಷೆಯಲ್ಲಿ ಈ ಹಾಡು ಲಭ್ಯವಿದೆ. ಹಾಡಿನ ಜೊತೆ ಅದ್ರ ಮೇಕಿಂಗ್ ಕೂಡ ರಿವೀಲ್ ಮಾಡಿದೆ ಟೀಂ.
ಒಟ್ಟಾರೆ ಟಾಸ್ ಸಿನಿಮಾದ ಈ ಹಾಡು ಹಾಗೂ ಅದ್ರ ಮೇಕಿಂಗ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದು, ಇದೇ ಸೆಪ್ಟೆಂಬರ್ 18ಕ್ಕೆ ಬಿಡುಗಡೆ ಮಾಡೋ ಧಾವಂತದಲ್ಲಿದ್ದಾರೆ. ಇತ್ತೀಚೆಗೆ ಪಿಕ್ಚರ್ ಸಿನಿಮಾ ಮಾಡಿ ಎಲ್ಲರ ಹುಬ್ಬೇರಿಸಿದ್ದ ಶಿಲ್ಪಾ ಗಣೇಶ್, ಅದ್ರ ಬೆನ್ನಲ್ಲೇ ಇದೀಗ ಟಾಸ್ ಹಾಕಿ ಎರಡನೇ ಹೆಜ್ಜೆ ಇಟ್ಟಿರೋದು ಖುಷಿಯ ವಿಚಾರ.





