ಧ್ರುವ ಸರ್ಜಾ ಮೇಲೆ ಐರಾವತ ಡೈರೆಕ್ಟರ್ ಮಾಡಿದ್ದ 3 ಕೋಟಿ ರೂಪಾಯಿ ವಂಚನೆ ಆರೋಪ ಕೇಸ್, ಸದ್ಯ ಹೈ ಕೋರ್ಟ್ ಮೆಟ್ಟಿಲೇರಿದೆ. ಮುಂಬೈ ಹೈ ಕೋರ್ಟ್‌ನಿಂದ ಧ್ರುವಗೆ ಬಿಗ್ ರಿಲೀಫ್ ಸಿಕ್ಕಿದ್ದು, ಚಾರ್ಜ್‌ಶೀಟ್ ಸಲ್ಲಿಸದಂತೆ ಪೊಲೀಸರಿಗೆ ಕೋರ್ಟ್ ನಿರ್ದೇಶನ ಕೂಡ ಮಾಡಿದೆ. ಈ ಕುರಿತ ಇನ್‌ಸೈಡ್ ಸ್ಟೋರಿ ಇಲ್ಲಿದೆ.
- 3.1ಕೋಟಿ ವಂಚನೆ ಕೇಸ್.. ಹೈಕೋರ್ಟ್‌ನಿಂದ ಧ್ರುವಗೆ ರಿಲೀಫ್
- ಚಾರ್ಜ್‌ಶೀಟ್ ಸಲ್ಲಿಸದಂತೆ ಪೊಲೀಸರಿಗೆ ಕೋರ್ಟ್ ನಿರ್ದೇಶನ
- ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.. ಆದ್ರೆ ಇದು ಸಿವಿಲ್ ಕೇಸ್..!
- ಕೋರ್ಟ್‌ನಲ್ಲಿ ಧ್ರುವ ಪರ ವಕೀಲೆ ಆಶಿಮಾ ಮಂಡ್ಲಾ ಖಡಕ್ ವಾದ
ಮಾರ್ಟಿನ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರಾರಾಜಿಸಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೇಲೆ ಐರಾವತ ಡೈರೆಕ್ಟರ್ ರಾಘವೇಂದ್ರ ಹೆಗಡೆ 3 ಕೋಟಿ 10 ಲಕ್ಷ ರೂಪಾಯಿ ವಂಚನೆ ಆರೋಪ ಮಾಡಿದ್ರು. ಈ ಬಗ್ಗೆ ಮುಂಬೈ ಪೊಲೀಸರು ಧ್ರುವ ಸರ್ಜಾ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ನೋಟಿಸ್ ಕೂಡ ನೀಡಿದ್ರು. ಆದ್ರೀಗ ಪ್ರಕರಣ ಮುಂಬೈ ಹೈ ಕೋರ್ಟ್ ಮೆಟ್ಟಿಲೇರಿದ್ದು, ಮುಂದಿನ ವಿಚಾರಣೆವರೆಗೂ ಚಾರ್ಜ್‌ಶೀಟ್ ಸಲ್ಲಿಸದಂತೆ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿದೆ.
ಯೆಸ್.. ಇದೊಂದು ಸಿವಿಲ್ ಕೇಸ್ ಆಗಿದ್ದು, ಇದಕ್ಕೆ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿರೋದ್ಯಾಕೆ ಅಂತ ಧ್ರುವ ಸರ್ಜಾ ಪರ ವಕೀಲೆ ಆಶಿಮಾ ಮಂಡ್ಲಾ ಮುಂಬೈ ಹೈ ಕೋರ್ಟ್‌ನಲ್ಲಿ ಖಡಕ್ ವಾದ ಮಂಡಿಸಿದ್ದರು. ಅದಕ್ಕೆ ಕೋರ್ಟ್‌ನಿಂದ ಧ್ರುವ ಸರ್ಜಾಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಮುಂದಿನ ವಿಚಾರಣೆಯಲ್ಲಿ ಇದು ಯಾವ ರೂಪ ಪಡೆಯುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಅಂದಹಾಗೆ 2018ರಲ್ಲಿ ನಟ ಧ್ರುವ ಸರ್ಜಾ, ಸಿನಿಮಾ ಮಾಡೋದಾಗಿ, ನಿರ್ದೇಶಕ ರಾಘವೇಂದ್ರ ಹೆಗಡೆಯಿಂದ 3.1ಕೋಟಿ ರೂಪಾಯಿ ಅಡ್ವಾನ್ಸ್ ಆಗಿ ಪಡೆದಿದ್ದರಂತೆ. ಅದಕ್ಕಾಗಿ 2019ರಲ್ಲಿ ಒಂದು ಒಪ್ಪಂದ ಕೂಡ ಆಗಿರುತ್ತೆ. ಆದ್ರೆ ಬೌಂಡ್ ಸ್ಕ್ರಿಪ್ಟ್ ಮೂಲಕ ಬರೋದಾಗಿ ಹೇಳಿದ್ದ ಧ್ರುವಗೆ 2023ರ ತನಕವೂ ಕಥೆ ಸಿದ್ದಗೊಳಿಸಿರಲ್ಲ ಡೈರೆಕ್ಟರ್ ರಾಘವೇಂದ್ರ ಹೆಗಡೆ. ಒಂದು ವೇಳೆ ಕಥೆ ಲಾಕ್ ಆಗಿದ್ದಿದ್ರೆ ಇಷ್ಟೊತ್ತಿಗಾಗಲೇ ಸಿನಿಮಾ ರಿಲೀಸ್ ಕೂಡ ಆಗಿಬಿಡ್ತಿತ್ತು. ಆದ್ರೆ ಕಥೆ ಸಿದ್ದಗೊಳಿಸದೆ ಡೇಟ್ಸ್ ಕೇಳಿದ್ರೆ ಸ್ಟಾರ್ ನಟ ಹೇಗೆ ತಾನೆ ಡೇಟ್ಸ್ ನೀಡ್ತಾರೆ ಅಲ್ಲವೇ..?
2018ರಿಂದ 18 ಪರ್ಸೆಂಟ್ ಬಡ್ಡಿಯಿಂದ ಒಟ್ಟು 9 ಕೋಟಿ ರೂಪಾಯಿಗೂ ಅಧಿಕ ಮೊತ್ತ ನಷ್ಟವಾಗಿದೆ ಅಂತ ದೂರಿದ್ದಾರೆ. ಆದ್ರೆ ಇಲ್ಲಿ ಧ್ರುವ ಸರ್ಜಾ ಅವರಿಂದ ಸಿನಿಮಾ ಮಾಡಲು ಮುಂಗಡ ಹಣ ಪಡೆದಿದ್ದರೇ ಹೊರತು, ಫೈನಾನ್ಸ್ ಅಲ್ಲ. ಹಾಗಾಗಿ ಅದಕ್ಕೆ ಬಡ್ಡಿ ಕೊಡುವ ಪ್ರಮೇಯವೂ ಇಲ್ಲ ಅನ್ನೋದು ಧ್ರುವ ಸರ್ಜಾ ಪರ ವಕೀಲರ ವಾದವಾಗಿದೆ. ಅಂದಹಾಗೆ ಹಣ ಪಡೆದಿರೋದ್ರ ಬಗ್ಗೆ ಒಪ್ಪಿಕೊಂಡಿರೋ ಧ್ರುವ ಸರ್ಜಾ, ಸಿನಿಮಾ ಮಾಡೋಕೆ ಸಿದ್ಧರಿದ್ದಾರೆ. ಆದ್ರೆ ಧ್ರುವ ಜೊತೆ ಪರಸ್ಪರ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದನ್ನ ಬಿಟ್ಟು ಹೀಗೆ ಮಾನನಷ್ಟ ಮಾಡಲು ಹೊರಟಿರೋದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಪ್ರಶ್ನೆಯಾಗಿದೆ.
ಸುಮಾರು ಮೂರ್ನಾಲ್ಕು ಚಿತ್ರಗಳಲ್ಲಿ ಧ್ರುವ ಸರ್ಜಾ ಬ್ಯುಸಿ ಆಗ್ತಿದ್ದಾರೆ ಅನ್ನೋದನ್ನ ಅರಿತ ಗಾಂಧಿನಗರದ ಕೆಲ ನಿರ್ಮಾಪಕರುಗಳು ಬೇಕು ಅಂತಲೇ ನಟನ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಿರೋದಾಗಿ ಅವರ ಆಪ್ತ ಮೂಲಗಳಿಂದ ಮಾಹಿತಿ ಬಂದಿದೆ. ಆದ್ರೆ ಧ್ರುವ ಸರ್ಜಾ ಮಾತ್ರ ಕೆಡಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಾಗೂ ಪ್ರಮೋಷನ್ಸ್ ಜೊತೆ ಜೊತೆಗೆ ಹೊಸ ಸಿನಿಮಾಗಳ ಪ್ರೀ ಪ್ರೊಡಕ್ಷನ್ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





