: ಒನ್ಸ್ ಫ್ಯಾನ್.. ಆಲ್ವೇಸ್ ಎ ಫ್ಯಾನ್. ಹೌದು.. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗಿರೋ ಕೆಲ ಅಭಿಮಾನಿಗಳು ನಿಜಕ್ಕೂ ತುಂಬಾ ಪ್ರೀತಿ, ಗೌರವ, ಭಕ್ತಿಯಿಂದ ಅವ್ರನ್ನ ಆರಾಧಿಸ್ತಾರೆ. ಅಂಥವ್ರಲ್ಲಿ ಕೆಲವರು ಡೆವಿಲ್ ಸಿನಿಮಾದ ಸಾಂಗ್ ರಿಲೀಸ್‌ನ ಡಿಬಾಸ್ ಭಾವಚಿತ್ರದ ಜೊತೆ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಅದೂ ದಾಸನಿಲ್ಲದ ತೂಗುದೀಪ ನಿವಾಸದ ಮುಂದೆ ಅನ್ನೋದು ಇಂಟರೆಸ್ಟಿಂಗ್.
- ಡೆವಿಲ್ ಸಾಂಗ್ ಹಿಟ್.. ಸೆಲೆಬ್ರಿಟೀಸ್ ಜೊತೆ ರಚ್ಚು ಖುಷ್
- ದಾಸನಿಲ್ಲದ ತೂಗುದೀಪ ನಿವಾಸ.. ಫ್ಯಾನ್ಸ್ ಕರ್ಪೂರದಾರತಿ
- ದಚ್ಚು ಎಲ್ಲೇ ಇರ್ಲಿ.. ಅಭಿಮಾನಿಗಳಲ್ಲಿ ಬದಲಾಗಿಲ್ಲ ಅಭಿಮಾನ
- ಡಿಸೆಂಬರ್ 12ಕ್ಕೆ ಡೆವಿಲ್ ಥಿಯೇಟರ್ ಅಬ್ಬರ, ಆರ್ಭಟ ಶುರು
ಡಿಬಾಸ್ ದರ್ಶನ್ ಫ್ಯಾನ್ಸ್‌ಗಷ್ಟೇ ಅಲ್ಲ, ಚಿತ್ರರಂಗಕ್ಕೂ ಕೂಡ ದಾಸನಿಲ್ಲದೆ ಡೆವಿಲ್ ಸಿನಿಮಾ ರಿಲೀಸ್ ಆಗ್ತಿರೋದ್ರ ಬಗ್ಗೆ ಬೇಸರ ಇದೆ. ಆದ್ರೆ ಕಾನೂನನ್ನು ಗೌರವಿಸಬೇಕಿದೆ. ವಿಧಿಯಾಟವನ್ನು ಫೇಸ್ ಮಾಡಲೇಬೇಕಿದೆ. ಅದ್ರಲ್ಲೂ ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿರೋ ನಿರ್ಮಾಪಕರಿಗಾಗಿ ದರ್ಶನ್ ಜೈಲಲ್ಲಿದ್ರೂ, ಪತ್ನಿ ವಿಜಯಲಕ್ಷ್ಮೀ ಸಾಥ್ ಕೊಡ್ತಿರೋದು ಇಂಟರೆಸ್ಟಿಂಗ್.
ಯೆಸ್.. ಡೆವಿಲ್ ಸಿನಿಮಾ ಬರೀ ಟೀಸರ್‌ಗಳು ಹಾಗೂ ಮೇಕಿಂಗ್‌ನಿಂದ ಟಾಕ್ ಆಫ್ ದಿ ಟೌನ್ ಆಗಿತ್ತು. ಆದ್ರೀಗ ಮೊದಲ ಸಾಂಗ್ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಇದ್ರೆ ನೆಮ್ದಿಯಾಗ್ ಇರ್ಬೇಕ್ ಸಾಂಗ್ ಅಜನೀಶ್ ಲೋಕನಾಥ್ ಸಂಗೀತದಲ್ಲಿ ಸಖತ್ ಕಲರ್‌ಫುಲ್ ಡ್ಯಾನ್ಸಿಂಗ್ ನಂಬರ್ ಆಗಿ ಮೂಡಿಬಂದಿದೆ. ಅದ್ರಲ್ಲೂ ದಚ್ಚು ಗ್ಲಾಮರಸ್ ಆಗಿ ಕಾಣ್ತಿದ್ದು, ಕಾಸ್ಟ್ಯೂಮ್ಸ್ ಹೇಳಿ ಮಾಡಿಸಿದಂತಿವೆ.
ನಟ ದರ್ಶನ್ ಕರಿಯರ್‌ಗೆ ಡೆವಿಲ್ ಸಿನಿಮಾನ ಒಂದು ಮೈಲಿಗಲ್ಲು ಚಿತ್ರವಾಗಿಸೋ ಯೋಜನೆಯಲ್ಲಿದ್ದಾರೆ ನಿರ್ದೇಶಕ ಮಿಲನ ಪ್ರಕಾಶ್. ಪ್ರೊಡಕ್ಷನ್‌ನಲ್ಲಿ ಕಿಂಚಿತ್ತೂ ಕಾಂಪ್ರಮೈಸ್ ಆಗದ ಪ್ರೊಡ್ಯೂಸರ್, ಸಿನಿಮಾನ ತುಂಬಾ ರಿಚ್ ಆಗಿ ಕಟ್ಟಿಕೊಟ್ಟಿದ್ದಾರೆ. ಅದಕ್ಕೆ ಡೆವಿಲ್ ಆಲ್ಬಮ್‌ನ ಫಸ್ಟ್ ಸಾಂಗ್ ಪ್ರತ್ಯಕ್ಷ ಸಾಕ್ಷಿ.
ಇನ್ನು ದರ್ಶನ್ ಸಿನಿಮಾಗಳನ್ನ ಫ್ಯಾನ್ಸ್ ಯಾವ ರೀತಿ ಆರಾಧಿಸ್ತಾರೆ, ಸೆಲೆಬ್ರೇಟ್ ಮಾಡ್ತಾರೆ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅವರು ಒಳಗಿದ್ರೂ, ಹೊರಗಿದ್ರೂ ತುಂಬಾ ಆರ್ಗ್ಯಾನಿಕ್ ಆಗಿ ಸಿನಿಮಾದ ಪ್ರಮೋಷನ್ಸ್‌ಗೆ ಸಾಥ್ ಕೊಡೋದ್ರ ಮುಖೇನ ನಿರ್ಮಾಪಕರ ಧೈರ್ಯ ಹೆಚ್ಚಿಸುವ ಕಾರ್ಯ ಮಾಡ್ತಾರೆ. ಆರ್ ಆರ್ ನಗರದ ದರ್ಶನ್ ನಿವಾಸದ ಬಳಿ ನೆಚ್ಚಿನ ನಾಯಕನಟನಿಲ್ಲದಿದ್ರೂ, ಭಾವಚಿತ್ರಗಳನ್ನು ಹಿಡಿದು, ತೆಂಗಿನಕಾಯಿ ಮೇಲೆ ಕರ್ಪೂರದಾರತಿ ಬೆಳಗಿ ಸಂಭ್ರಮಿಸಿದ್ದಾರೆ. ಅದಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಸಾಥ್ ನೀಡಿರೋದು ಮತ್ತೊಂದು ವಿಶೇಷ.
ನಟ ವಿನೋದ್ ರಾಜ್ ಕೂಡ ಸಹೋದರ ಸಮಾನ ದರ್ಶನ್ ಪರ ವಿಡಿಯೋ ಮಾಡಿ ಫ್ಯಾನ್ಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಡನ್ನ ವೈರಲ್ ಮಾಡಲು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ನಟ ದರ್ಶನ್ ಆದಷ್ಟು ಬೇಗ ಹೊರಗೆ ಬರಲಿ ಅಂತ ಆ ಮಂಜುನಾಥ ಸ್ವಾಮಿ ಬಳಿ ಪ್ರಾರ್ಥಿಸೋದಾಗಿಯೂ ಹೇಳಿಕೊಂಡಿದ್ದಾರೆ.
ಇದೇ ವರ್ಷಾಂತ್ಯಕ್ಕೆ ಅಂದ್ರೆ ಡಿಸೆಂಬರ್ 12ರಂದು ಡೆವಿಲ್ ಗ್ರ್ಯಾಂಡ್ ರಿಲೀಸ್ ಆಗಲಿದ್ದು, ಸಿನಿಮಾ ಪ್ರಮೋಷನ್ಸ್‌ಗೆ ಬರೋಬ್ಬರಿ 3 ತಿಂಗಳ ಕಾಲಾವಕಾಶ ಇರೋದ್ರಿಂದ ನಿರೀಕ್ಷೆಗೂ ಮೀರಿ ಪ್ರಚಾರ ಕಾರ್ಯಗಳನ್ನು ಮಾಡುವವರಿದ್ದಾರೆ. ಸೋ.. ತಲೈವಾ ರಜನೀಕಾಂತ್ ಬರ್ತ್ ಡೇಗೆ ಡೆವಿಲ್ ಅಬ್ಬರ, ಆರ್ಭಟ ಜೋರಿರಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





