ನಟ ದರ್ಶನ್ ನಟನೆಯ ಡೆವಿಲ್ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಡಿಬಾಸ್ ದರ್ಶನ್ ಸದ್ಯಕ್ಕಂತೂ ಹೊರಗೆ ಬರೋ ಸಾಧ್ಯತೆಗಳು ಇಲ್ಲವೇ ಇಲ್ಲ ಅಂತ ಗೊತ್ತಿದ್ರೂ ಸಹ, ಪೆರೋಲ್ ಮೇಲೆ ಹೊರಗೆ ಬರ್ತಾರೆ. ಡೆವಿಲ್ ಸಿನಿಮಾದ ಪ್ರಮೋಷನ್ಸ್ ಮಾಡ್ತಾರೆ. ಅದಕ್ಕಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎನ್ನಲಾಗ್ತಿದೆ. ಇಷ್ಟಕ್ಕೂ ಇದು ನಿಜಾನಾ..? ದರ್ಶನ್ ಪೆರೋಲ್ ಮೇಲೆ ಬರ್ತಾರಾ ಅಂತೀರಾ..? ಇಲ್ಲಿದೆ ಅಸಲಿ ಸತ್ಯ.
- ಡೆವಿಲ್ ಪ್ರಚಾರಕ್ಕಾಗಿ ದಚ್ಚುಗೆ ಪೆರೋಲ್.. ನಿಜಾನಾ..?!
- ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರಾ..? 7 ದಿನ ಬರ್ತಾರಾ?
- ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಪೋಸ್ಟ್
- ವಿಚಾರಣಾಧೀನ ಕೈದಿಗಳಿಗೆ ಸಿಗಲ್ಲ ಪೆರೋಲ್ ಅನುಮತಿ
ದಿನದಿಂದ ದಿನಕ್ಕೆ ಸ್ಯಾಂಪಲ್ಸ್‌ನಿಂದಲೇ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಸಿನಿಮಾ ಡೆವಿಲ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮಿಲನ ಪ್ರಕಾಶ್ ಕಾಂಬೋನ ಈ ಸಿನಿಮಾ ಸಹಜವಾಗಿಯೇ ಎಲ್ಲಿಲ್ಲದ ಕ್ಯೂರಿಯಾಸಿಟಿ ಹುಟ್ಟಿಸಿದೆ. ರಚನಾ ರೈ ಈ ಚಿತ್ರದಿಂದ ಹೀರೋಯಿನ್ ಆಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಎರಡು ರೋಲ್, ನಾಲ್ಕು ಶೇಡ್‌ಗಳಲ್ಲಿ ಡೆವಿಲ್ ದರ್ಶನ ನೀಡಲು ಸಜ್ಜಾಗ್ತಿದ್ದು, ಅಜನೀಶ್ ಸಂಗೀತ, ಸುಧಾಕರ್ ಕ್ಯಾಮೆರಾ ಕೈಚಳಕ, ರಾಬರ್ಟ್ ಸಂತು ಕೊರಿಯೋಗ್ರಫಿ, ಮೋಹನ್ ಬಿ ಕೆರೆ ಆರ್ಟ್ ವರ್ಕ್ ಚಿತ್ರಕ್ಕೆ ಪ್ಲಸ್ ಆಗಲಿದೆ.
ಇದೇ ಡಿಸೆಂಬರ್ 11ಕ್ಕೆ ಡೆವಿಲ್ ಗ್ರ್ಯಾಂಡ್ ರಿಲೀಸ್ ಆಗ್ತಿದ್ದು, ಸಾರಥಿ ಸಿನಿಮಾದ ಪರಿಸ್ಥಿತಿ ಮತ್ತೊಮ್ಮೆ ಎದುರಾಗಿದೆ. ದರ್ಶನ್ ಇಲ್ಲದೆ ಸಿನಿಮಾ ರಿಲೀಸ್ ಆಗ್ತಿದೆ. ಯೆಸ್.. ದರ್ಶನ್ ಕುಟುಂಬ ಹಾಗೂ ಫ್ಯಾನ್ಸ್ ಡೆವಿಲ್ ಚಿತ್ರದ ನಿರ್ಮಾಪಕ ಜೊತೆ ನಿಂತಿದ್ದು, ಭರ್ಜರಿ ಪ್ರಮೋಷನ್ಸ್‌ಗೆ ಸಜ್ಜಾಗಿದ್ದಾರೆ. ಆದ್ರೆ ದರ್ಶನ್ ಇದ್ದಿದ್ರೆ ಸಿನಿಮಾ ನೆಕ್ಸ್ಟ್ ಲೆವೆಲ್ ಹೈಪ್ ಪಡೆಯುತ್ತಿತ್ತು ಅನ್ನೋದು ಕೂಡ ಅಷ್ಟೇ ಸತ್ಯ.
ದರ್ಶನ್ ಫ್ಯಾನ್ಸ್ ಗೆ ತಮ್ಮ ನಾಯಕನಟ ಇಲ್ಲದೆ ಡೆವಿಲ್ ರಿಲೀಸ್ ಆಗ್ತಿರೋದ್ರ ಬಗ್ಗೆ ಸಿಕ್ಕಾಪಟ್ಟೆ ಬೇಸರ, ಬೇಜಾರು, ಅಸಮಾಧಾನ ಇದೆ. ಅದರ ನಡುವೆಯೂ ಒಮ್ಮತದಿಂದ ಟೊಂಕ ಕಟ್ಟಿ ನಿಂತಿರೋ ಡಿ ಫ್ಯಾನ್ಸ್, ಸಿನಿಮಾ ಗೆಲ್ಲಿಸಲೇ ಬೇಕು ಅನ್ನೋ ಪಣ ತೊಟ್ಟಂತಿದೆ. ಈ ನಡುವೆ ಪೆರೋಲ್ ಮೇಲೆ ನಟ ದರ್ಶನ್ ಜೈಲಿನಿಂದ ಒಂದು ವಾರದ ಮಟ್ಟಿಗೆ ಹೊರಬರ್ತಾರೆ. ಡೆವಿಲ್ ಪ್ರಮೋಷನ್ಸ್ ಮಾಡ್ತಾರೆ. ಈ ಬಗ್ಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಕೋರ್ಟ್ ಅದನ್ನ ಪುರಸ್ಕರಿಸಿದ್ರೆ ಒಂದು ವಾರದ ಮಟ್ಟಿಗೆಗೆ ಹೊರ ಬರ್ತಾರೆ ಅನ್ನೋ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.
ಬಂದ್ರೆ ಏನೋ ಚೆನ್ನಾಗೇ ಇರುತ್ತೆ. ಆದ್ರೆ ವಾಸ್ತವ ಏನಪ್ಪಾ ಅಂದ್ರೆ ದರ್ಶನ್‌ಗೆ ಸದ್ಯದ ಪರಿಸ್ಥಿತಿಯಲ್ಲಿ ಪೆರೋಲ್ ಮೇಲೆ ಹೊಸ ಕಳಿಸೋಕೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಕಾರಣ ಅವರು ಇನ್ನೂ ವಿಚಾರಣಾಧೀನ ಕೈದಿ. ಅಪರಾಧಿ ಅಂತ ಪ್ರೂವ್ ಆಗಿ ಜೈಲಲ್ಲಿ ಇದ್ದಿದ್ರೆ.. ಆಗ ಇಂತಹ ಸ್ಥಿತಿ ಎದುರಾಗಿದ್ದಿದ್ರೆ ಬಹುಶಃ ಕೋರ್ಟ್ ಪೆರೋಲ್ ಮೇಲೆ ನಿರ್ಮಾಪಕರ ಹಿತರಕ್ಷಣಾ ದೃಷ್ಠಿಯಿಂದ ಪೆರೋಲ್ ಮಂಜೂರು ಮಾಡ್ತಿತ್ತೋ ಏನೋ. ಆದ್ರೆ ವಿಚಾರಣಾಧೀನ ಕೈದಿಗಳಿಗೆ ಪೆರೋಲ್ ನೀಡಲ್ಲ ಅನ್ನೋದು ಪರಮ ಸತ್ಯ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಆ ಪೆರೋಲ್ ಫೇಕ್ ಪೋಸ್ಟ್‌ನಲ್ಲಿ ಸಂಜಯ್ ದತ್, ಸಲ್ಮಾನ್ ಖಾನ್ ಪ್ರಕರಣಗಳನ್ನ ಉಲ್ಲೇಖಿಸಲಾಗಿದೆ. ಆದ್ರೆ ಅವರುಗಳು ಕೈದಿಗಳಾಗಿದ್ದಾಗ ಪೆರೋಲ್ ಮೇಲೆ ಹೊರಬಂದಿದ್ದರು. ಹಾಗಾಗಿ ಡಿಬಾಸ್ ಸದ್ಯಕ್ಕೆ ಹೊರಕ್ಕೆ ಬರೋ ಸಾಧ್ಯತೆಗಳು ಝೀರೋ ಪರ್ಸೆಂಟ್. ಕೋರ್ಟ್ ಟ್ರಯಲ್ಸ್ ಸದ್ಯದಲ್ಲೇ ಶುರುವಾಗಲಿದ್ದು, ಡೆವಿಲ್ ಅವ್ರ ಅನುಪಸ್ಥಿತಿಯಲ್ಲೇ ತೆರೆಗೆ ಬರಲಿದೆ ಅನ್ನೋದನ್ನ ಎಲ್ಲರೂ ಅಕ್ಸೆಪ್ಟ್ ಮಾಡಿಕೊಳ್ಳಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





