ಸತತ ಮೂರು ಪಂದ್ಯಗಳನ್ನ ಗೆದ್ದು ಸೆಮೀಸ್ ಪ್ರವೇಶಿಸಿದ್ದ ಬಾದ್ ಷಾ ಕಿಚ್ಚ ಸುದೀಪ್ ಕ್ಯಾಪ್ಟನ್ಸಿಯ ಕರ್ನಾಟಕ ಬುಲ್ಡೋಜರ್ಸ್ ಸಿಸಿಎಲ್ ಕಪ್ ಗೆಲ್ಲೋ ಕನಸು ಕನಸಾಗಿಯೇ ಉಳಿದಿದೆ. ಇತ್ತೀಚೆಗೆ ಸೂರತ್ ನಲ್ಲಿ ನಡೆದ ಪಂದ್ಯದಲ್ಲಿ ನಮ್ಮ ಸ್ಯಾಂಡಲ್ ವುಡ್ ಟೀಂ ಸೋಲುಂಡಿತ್ತು. ಆದ್ರೀಗ ನಿನ್ನೆ ತಡರಾತ್ರಿ ಮೈಸೂರಿನಲ್ಲಿ ನಡೆದ ಸೆಮಿ ಫೈನಲ್ ನಲ್ಲಿ ಚೆನ್ನೈ ರೈನೋಸ್ ತಂಡದ ವಿರುದ್ಧ ಮತ್ತೊಮ್ಮೆ ಸೋತಿದೆ. ಆ ಮೂಲಕ ಸೆಮೀಸ್ ನಲ್ಲೇ ಮನೆ ಸೇರುವಂತಾಗಿದೆ ಟೀಂ ಕರ್ನಾಟಕ ಬುಲ್ಡೋಜರ್ಸ್.
ವಿಶೇಷ ಅಂದ್ರೆ ಸೆಮಿ ಫೈನಲ್ ಪಂದ್ಯ ಶುರುವಾಗೋಕೂ ಮುನ್ನ ಚೆನ್ನೈ ಜೆರ್ಸಿ ಧರಿಸಿ ಸುದೀಪ್, ನಮ್ಮ ಕರ್ನಾಟಕ ಬುಲ್ಡೋಜರ್ಸ್ ಜೆರ್ಸಿ ಧರಿಸಿ ವಿಕ್ರಾಂತ್ ಪರಸ್ಪರ ಪ್ರೀತಿ ಸಾರಿದ್ದಾರೆ. ಇದು ನಿಜಕ್ಕೂ ಅರೋಗ್ಯಕರ ಬೆಳವಣಿಗೆ ಆಗಿದ್ದು, ಇವರ ಈ ಸಾಮರಸ್ಯಕ್ಕೆ ಎರಡೂ ಚಿತ್ರರಂಗಗಳು ಫುಲ್ ಫಿದಾ ಆಗಿವೆ.
ಅದೇನೇ ಇರಲಿ ಸಿಸಿಎಲ್ ಸೀಸನ್-11 ಗಪ್ ಗೆಲ್ಲೋ ಕಿಚ್ಚನ ಆಶಯ ಕೊನೆಗೂ ಈಡೇರಿಲ್ಲ. ಇಂದು ಚೆನ್ನೈ ಮತ್ತು ಪಂಜಾಬ್ ನಡುವೆ ಫೈನಲ್ ಹಣಾಹಣಿ ನಡೆಯಲಿದ್ದು, ಯಾರ ಮುಡಿಗೇರುತ್ತೆ ಸಿಸಿಎಲ್-11 ಕಿರೀಟ ಅನ್ನೋದನ್ನ ಕಾದು ನೋಡಬೇಕಿದೆ.