ಗಿಲ್ಲಿ ಬಿಗ್‌ಬಾಸ್ ಗೆದ್ದಿರಬಹುದು. ಕನ್ನಡಿಗರಲ್ಲಿ ಕ್ರೇಜ್ ಕೂಡ ಹುಟ್ಟಿಸಿರಬಹುದು. ಆದ್ರೆ ಸೋಶಿಯಲ್ ಮೀಡಿಯಾ ಹೈಪ್‌ಗೂ ರಿಯಾಲಿಟಿಗೂ ಅಜಗಜಾಂತರ ವ್ಯತ್ಯಾಸವಿದೆ. ಯಾಕಂದ್ರೆ ಇತ್ತೀಚೆಗೆ ತೆರೆಕಂಡ ಗಿಲ್ಲಿ ನಟನೆಯ ಸೂಪರ್ ಹಿಟ್ ಮೂವಿ ಅಟ್ಟರ್ ಫ್ಲಾಪ್ ಆಗಿದೆ. ಸೋ.. ನಿರ್ಮಾಪಕರೇ ಎಚ್ಚರ ಎಚ್ಚರ. ನಿಮ್ ಜೇಬು ಜಾಗ್ರತೆ.
ಗಿಲ್ಲಿ ಗಿಲ್ಲಿ ಗಿಲ್ಲಿ.. ಆತ ಗೆದ್ದಿದ್ದು ಜಸ್ಟ್ ಬಿಗ್‌ಬಾಸ್ ಟ್ರೋಫಿ. ಆದ್ರೆ ಜನ ಆತನನ್ನ ವರ್ಲ್ಡ್ ಕಪ್ ಟ್ರೋಫಿ ಗೆದ್ದಷ್ಟೇ ಮೆರೆಸುತ್ತಿದ್ದಾರೆ. ತನ್ನನ್ನ ಜನ ಪ್ರೀತಿಸ್ತಾರೆ. ಅಭಿಮಾನಿಸ್ತಾರೆ ಅಂದ ಮಾತ್ರಕ್ಕೆ ಆ ಸ್ಟಾರ್ಡಮ್ ತಲೆಗೆ ಹತ್ತಬಾರದು. ಯಾಕಂದ್ರೆ ಆಗಲೇ ಆತನ ಏಳಿಗೆಗೆ ಹೊಡೆತ ಬೀಳೋದು ಕನ್ಫರ್ಮ್. ಸದ್ಯ ಗಿಲ್ಲಿ ವಿಚಾರದಲ್ಲೂ ಅದೇ ಆಗ್ತಿದೆ ಅನಿಸ್ತಿದೆ. ಈ ಮೊದಲು 10 ಸಾವಿರಕ್ಕೆಲ್ಲಾ ಕಾರ್ಯಕ್ರಮಗಳನ್ನ ಅಟೆಂಡ್ ಮಾಡ್ತಿದ್ದ ಗಿಲ್ಲಿ, ಇದೀಗ ಕನಿಷ್ಟ 5 ಲಕ್ಷ ಇಲ್ಲದೆ ಖಾಸಗಿ ಕಾರ್ಯಕ್ರಮಗಳಿಗೆ ಕಾಲಿಡಲ್ಲವಂತೆ.
ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್
ಸೋಶಿಯಲ್ ಮೀಡಿಯಾ ಹೈಪ್ ಬೇರೆ.. ರಿಯಾಲಿಟಿ ಬೇರೆ
ಜೈಕಾರ ಹಾಕೋರೆಲ್ಲಾ ಥಿಯೇಟರ್‌ಗೆ ಬರಲ್ಲ.. ಎಚ್ಚರವಿರಲಿ..!
ಇತ್ತೀಚೆಗೆ ಗಿಲ್ಲಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿ, ನಟಿಸಿದ್ದಕ್ಕಿಂತ ಜಾಸ್ತಿ ಆತ ಕಾರ್ಯಕ್ರಮಗಳನ್ನ ಅಟೆಂಡ್ ಮಾಡ್ಕೊಂಡೇ ಹಣ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಇತ್ತೀಚಿಗೆ ಯಾದಗಿರಿಗೆ ತೆರಳಿದ್ದ ಗಿಲ್ಲಿಯನ್ನ ನೋಡೋಕೆ ಜನ ಮುಗಿ ಬಿದ್ದಿದ್ದಾರೆ. ಜನರನ್ನ ಚದುರಿಸಲು ಪೊಲೀಸರು ಹರಸಾಹಸ ಮಾಡಿದ್ದಾರೆ. ಟ್ರಾಫಿಕ್ ಜಾಮ್ ಬೇರೆ ಆಗಿ, ಜನ ಓಡಾಡೋಕೆ ಪರದಾಟ ಶುರುವಾಗಿದೆ. ಆ ಅಭಿಮಾನ ಕಂಡು ನನಗೆ ಯುಕೆ ಅಂದ್ರೆ, ಇಲ್ಲಿನ ಜನ ಅಂದ್ರೆ ಬಹಳ ಇಷ್ಟ. ಕಾವ್ಯ ಜೊತೆ ಮದ್ವೆ ಗಿದ್ವೆ ಏನೂ ಇಲ್ಲ ಅಂತ ಸ್ಪಷ್ಟನೆ ಕೂಡ ನೀಡಿದ್ದಾರೆ.
ಅಂದಹಾಗೆ ಜನ ಹೀಗೆ ಸೇರುವುದನ್ನ ನೋಡಿದ್ರೆ ಗಿಲ್ಲಿ ನಟಿಸೋ ಸಿನಿಮಾಗಳನ್ನ ನೋಡೋಕೆ ಥಿಯೇಟರ್‌ಗಳು ಕೂಡ ಇದೇ ರೀತಿ ಕಿಕ್ಕಿರಿದು ತುಂಬಬೇಕು. ಆದ್ರೆ ರಿಯಾಲಿಟಿ ಬೇರೇನೇ ಇದೆ. ಇದೇ ಫೆಬ್ರವರಿ 27ಕ್ಕೆ ತೆರೆಕಂಡ ಸೂಪರ್ ಹಿಟ್ ಸಿನಿಮಾ ಅಟ್ಟರ್ ಫ್ಲಾಪ್ ಆಗಿದೆ. ನಟ ಗೌರವ್ ಜೊತೆಗೂಡಿ ಗಿಲ್ಲಿ ನಟ ಈ ಸೂಪರ್ ಹಿಟ್ ಚಿತ್ರದಲ್ಲಿ ಲೀಡ್‌ನಲ್ಲಿ ನಟಿಸಿದ್ರು. ಸೋ.. ಗಿಲ್ಲಿಗಿರೋ ಕ್ರೇಜ್ ನೋಡಿದ್ರೆ ಜನ ಥಿಯೇಟರ್‌ಗೆ ಕಿಕ್ಕಿರಿದು ತುಂಬುತ್ತಾರೆ ಅಂತ ನಂಬಿ ಹಣ ಹಾಕಿದ್ರೆ ಪ್ರೊಡ್ಯೂಸರ್ ಕಥೆ ಮುಗೀತು. ಜೇಬು ಖಾಲಿ ಮಾಡಿಕೊಂಡು ಬೀದಿಗೆ ಬಂದ್ರೂ ಅಚ್ಚರಿಯಿಲ್ಲ. ಸೋ.. ರಿಯಾಲಿಟಿ ಅರ್ಥ ಮಾಡಿಕೊಳ್ಳದೆ ನಿರ್ಮಾಪಕರುಗಳು ಸುಖಾಸುಮ್ಮನೆ ಸಿನಿಮಾಗಳ ಮೇಲೆ ಬಂಡವಾಳ ಹಾಕಬೇಡಿ ಅನ್ನೋದು ಇದರ ನೀತಿಪಾಠವಾಗಿದೆ.





