ನಂದಮೂರಿ ಬಾಲಕೃಷ್ಣ ಹಾಗೂ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ನಟನೆಯ ಹೊಚ್ಚ ಹೊಸ ಸಿನಿಮಾಗಳ ಟೈಟಲ್ಸ್ ಜೊತೆ ಫಸ್ಟ್ ಲುಕ್ಸ್ ಕೂಡ ರಿವೀಲ್ ಆಗಿವೆ. ಎರಡೂ ಮೋಸ್ಟ್ ಎಕ್ಸ್ಪೆಕ್ಟೆಡ್ ಚಿತ್ರಗಳೇ ಆಗಿದ್ದು, ಸಖತ್ ಇಂಪ್ರೆಸ್ಸೀವ್ ಆಗಿವೆ.
ಬಾಲಯ್ಯ ಈಗ ಟಾಲಿವುಡ್ಗೆ ಹೊಚ್ಚ ಹೊಸ ‘ದಾದಾ’..!
NBK111 ಪ್ರಾಜೆಕ್ಟ್.. ಗೋಪಿಚಂದ್ ಮಾಲಿನೇನಿ ಡೈರೆಕ್ಷನ್
ಅಖಂಡ-2 ಚಿತ್ರದ ಬಳಿಕ ನಂದಮೂರಿ ಬಾಲಕೃಷ್ಣ ನಟನೆಯ NBK111 ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಸದ್ಯ ಬಾಲಯ್ಯ ಟಾಲಿವುಡ್ ಇಂಡಸ್ಟ್ರಿಗೆ ಹೊಚ್ಚ ಹೊಸ ದಾದಾ. ಹೌದು.. ಎನ್ಬಿಕೆ ನೂರ ಹನ್ನೊಂದಲೇ ಚಿತ್ರದ ಟೈಟಲ್ ಕೂಡ ದಾದಾ. ವೀರ ಸಿಂಹಾರೆಡ್ಡಿ ಸಿನಿಮಾದ ಬಳಿಕ ಒನ್ಸ್ ಅಗೈನ್ ಡೈರೆಕ್ಟರ್ ಗೋಪಿಚಂದ್ ಮಾಲಿನೇನಿ ಜೊತೆ ಕೈ ಜೋಡಿಸಿರೋ ಬಾಲಯ್ಯ.. ಮತ್ತೊಂದು ಹೈ ವೋಲ್ಟೇಜ್ ಆ್ಯಕ್ಷನ್ ಧಮಾಕ ತೆರೆಗೆ ತರ್ತಿದ್ದಾರೆ.
ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ನಾಯಕನಟಿಯಾಗಿ ಕಾಜಲ್ ಅಗರ್ವಾಲ್ ಕೂಡ ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ. ಬಾಲಯ್ಯ ಲುಕ್ಸ್ ಸಿಕ್ಕಾಪಟ್ಟೆ ಕಿಕ್ ಕೊಡ್ತಿದ್ದು, ಅದರಲ್ಲಿ ಬಳಸಿರೋ ವೆಪನ್ಸ್, ಬೈಕ್ ಹಾಗೂ ಬುಲೆಟ್ಸ್ನಂತಹ ಡೈಲಾಗ್ಸ್ ಕಿಕ್ ಕೊಡ್ತಿವೆ. ಒಟ್ಟಾರೆ ಬಾಲಯ್ಯಗೆ ಈ ಸಿನಿಮಾ ಕೂಡ ದೊಡ್ಡ ಮಟ್ಟದ ಕಲೆಕ್ಷನ್ ಜೊತೆ ಮತ್ತೊಂದು ಹಿಟ್ ತಂದುಕೊಡೋ ಮುನ್ಸೂಚನೆ ನೀಡಿದೆ.
ಸಲ್ಮಾನ್ ‘ಮಾನ್ಸ್ಟರ್’ ಲುಕ್ ಔಟ್.. ಫ್ಯಾನ್ಸ್ ಖುಷ್..!
ವಂಶಿ ಪೈಡಿಪಲ್ಲಿ ಜೊತೆ ಹೈ-ವೋಲ್ಟೇಜ್ ಆ್ಯಕ್ಷನ್ ವೆಂಚರ್
ಬ್ಯಾಕ್ ಟು ಬ್ಯಾಕ್ ಚಿತ್ರಗಳ ಸೋಲಿನಿಂದ ಕಂಗೆಟ್ಟಿರೋ ನಟ ಸಲ್ಮಾನ್ ಖಾನ್.. ಸದ್ಯ ಸೌತ್ ಇಂಡಿಯನ್ ಡೈರೆಕ್ಟರ್ ಮೊರೆ ಹೋಗಿದ್ದು ಎಲ್ರಿಗೂ ಗೊತ್ತೇಯಿದೆ. ವಂಶಿ ಪೈಡಿಪಲ್ಲಿ ತಮ್ಮ ಮೊದಲ ಬಾಲಿವುಡ್ ಚಿತ್ರಕ್ಕೆ ಸಲ್ಲುಗೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಆ ಸಿನಿಮಾದ ಟೈಟಲ್ ಮಾನ್ಸ್ಟರ್ ಎನ್ನಲಾಗ್ತಿದೆ. ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ನಾಯಕನಟಿಯಾಗಿ ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಸಲ್ಲುಗೆ ಜೋಡಿಯಾಗಿ ಕಾಣಸಿಗಲಿದ್ದಾರೆ.
ಅನಾರೋಗ್ಯದಿಂದಲೂ ಬಳಲುತ್ತಿರೋ ಸಲ್ಮಾನ್ ಖಾನ್ಗೆ ಈ ಸಿನಿಮಾ ಗೆಲ್ಲಲೇಬೇಕಿದೆ. ಟಾಲಿವುಡ್ನ ಎಸ್ವಿಸಿ ಬ್ಯಾನರ್ನಡಿ ಈ ಮಾನ್ಸ್ಟರ್ ಚಿತ್ರ ತಯಾರಾಗ್ತಿದ್ದು, ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ರುಚಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.





