ಗೋಲ್ಡನ್ ಕ್ವೀನ್ ಅಮೂಲ್ಯ ಈಸ್ ಬ್ಯಾಕ್. ಬರೋಬ್ಬರಿ 8 ವರ್ಷಗಳ ನಂತ್ರ ಮತ್ತೆ ಸಿಲ್ವರ್ ಸ್ಕ್ರೀನ್‌ಗೆ ವಾಪಸ್ ಆಗ್ತಿದ್ದಾರೆ ಅಮೂಲ್ಯ. ಮದ್ವೆ, ಮಕ್ಕಳು, ಸಂಸಾರ ಅಂತ ಬ್ಯುಸಿ ಆಗಿದ್ದ ಅಮ್ಮು, ಇದೀಗ ಕನ್ನಡಿಗರನ್ನ ರಂಜಿಸೋಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಯಾವ ಸಿನಿಮಾ..? ಡೈರೆಕ್ಟರ್ ಯಾರು..? ಕಥೆ ಏನು ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ ನೋಡಿ.
ಕನ್ನಡಿಗರ ಮನೆ ಮಗಳು ಅಮೂಲ್ಯ ಒಂದು ದೊಡ್ಡ ಗ್ಯಾಪ್ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಕಂಬ್ಯಾಕ್ ಮಾಡ್ತಿದ್ದಾರೆ. 2017ರಲ್ಲಿ ದುನಿಯಾ ವಿಜಯ್ ಜೊತೆ ಮಾಸ್ತಿಗುಡಿ, ಗಣೇಶ್ ನಟನೆಯ ಮುಗುಳುನಗೆ ಚಿತ್ರಗಳೇ ಕೊನೆ. ಅದಾದ ಬಳಿಕ ಮದುವೆ, ಮಕ್ಕಳು, ಸಂಸಾರ ಅಂತ ಬ್ಯುಸಿ ಆಗಿಬಿಟ್ಟಿದ್ರು ಗೋಲ್ಡನ್ ಕ್ವೀನ್ ಅಮೂಲ್ಯ.

ಅವಳಿ ಮಕ್ಕಳ ತಾಯಿ ಆಗಿರೋ ಅಮೂಲ್ಯ ಇಂದಿಗೂ ಅದೇ ಬ್ಯೂಟಿ, ಅದೇ ಸಿನಿಮೋತ್ಸಾಹ. ಮಕ್ಕಳಾದ ಬಳಿಕವೂ ಅದೇ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋವೊಂದಕ್ಕೆ ಜಡ್ಜ್ ಆಗುವ ಮೂಲಕ ಐ ಆ್ಯಮ್ ಬ್ಯಾಕ್ ಅಂದಿದ್ರು. ಇದೀಗ ಬಣ್ಣದಲೋಕಕ್ಕೆ ವಾಪಸ್ ಆಗುವ ಮುಖೇನ ಮತ್ತೆ ನಿಮ್ಮನ್ನ ರಂಜಿಸೋಕೆ ಬರ್ತಿದ್ದೀನಿ ಅಂದಿದ್ದಾರೆ.

ಗೋಲ್ಡನ್ ಕ್ವೀನ್ ಅದೇ ಅಂದ, ಚೆಂದ.. ಅದೇ ಸಿನಿಮೋತ್ಸಾಹ
ಫಸ್ಟ್‌ಲುಕ್, ಡ್ಯಾನ್ಸ್ ಸೂಪರ್.. ಅಕ್ಟೋಬರ್ 2ಕ್ಕೆ ಶೂಟಿಂಗ್
ಬಾಲನಟಿಯಾಗಿದ್ದಾಗಲೇ ಕನ್ನಡ ಚಿತ್ರ ಪ್ರೇಮಿಗಳ ಮನಸ್ಸು ಗೆದ್ದಿದ್ದ ಅಮೂಲ್ಯ ಸದ್ಯ ಪೀಕಬೂ ಅನ್ನೋ ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಮಾಡ್ತಿದ್ದಾರೆ. ಇತ್ತೀಚೆಗೆ ಅವರ ಬರ್ತ್ ಡೇ ಪ್ರಯುಕ್ತ ಚಿತ್ರದ ಫಸ್ಟ್‌ಲುಕ್ ಹಾಗೂ ಡ್ಯಾನ್ಸಿಂಗ್ ಟೀಸರ್ ಝಲಕ್ ರಿವೀಲ್ ಮಾಡಿದೆ ಚಿತ್ರತಂಡ. ಅದನ್ನ ನೋಡಿದ ಬಳಿಕ ಅನಿಸೋದು ಇಷ್ಟೇ.. ಅಮೂಲ್ಯ ನಿಜಕ್ಕೂ ನಮ್ಮ ಚಿತ್ರರಂಗದ ಪಾಲಿಗೆ ಅತ್ಯಮೂಲ್ಯ ಕಲಾವಿದೆ.

ಅಂದಹಾಗೆ ಅಮೂಲ್ಯರನ್ನ ಮತ್ತೆ ಚಿತ್ರರಂಗಕ್ಕೆ ಕರೆತಂದಿರೋದು ಶ್ರಾವಣಿ ಸುಬ್ರಮಣ್ಯ ಖ್ಯಾತಿಯ ಡೈರೆಕ್ಟರ್ ಮಂಜು ಸ್ವರಾಜ್. ಈ ಹಿಂದೆ ಅಮೂಲ್ಯ-ಗಣೇಶ್ ಕಾಂಬೋನಲ್ಲಿ ಬಹುದೊಡ್ಡ ಫ್ಯಾಮಿಲಿ ಕಾಮಿಡಿ ಎಂಟರ್‌ಟೈನರ್ ನೀಡಿದ ಡೈರೆಕ್ಟರ್ ಮಂಜು ಸ್ವರಾಜ್ ಅವರೇ ಇದೀಗ ಅಮೂಲ್ಯ ಕಂಬ್ಯಾಕ್‌ಗೆ ರೆಡ್ ಕಾರ್ಪೆಟ್ ಹಾಸಿದ್ದಾರೆ. ಅಂದಹಾಗೆ ಪೀಕಬೂ ಅಂದಾಕ್ಷಣ ನೆನಪಾಗೋದೇ ಮಕ್ಕಳು, ಪೋಷಕರು. ಮಕ್ಕಳೊಂದಿಗೆ ಆಟ ಆಡುವಾಗ ಅದೃಶ್ಯವಾಗಿ ನಂತ್ರ ಪೀಕಬೂ ಅಂತ ಹೇಳಲಾಗುತ್ತೆ. ಸದ್ಯ ಈ ಸಿನಿಮಾ ಮಕ್ಕಳು ಹಾಗೂ ಪೋಷಕರಿಗೆ ಕನೆಕ್ಟ್ ಆಗಲಿದೆಯಂತೆ.
‘ಪೀಕಬೂ’.. ಅವಳಿ ಮಕ್ಕಳ ಅಮೂಲ್ಯ ಭರ್ಜರಿ ಕಂಬ್ಯಾಕ್..!
ಶ್ರಾವಣಿ ಸುಬ್ರಮಣ್ಯ ಡೈರೆಕ್ಟರ್ ಜೊತೆ ಪೀಕಬೂ ಎಂದ ಅಮ್ಮು

ಫ್ಯಾಮಿಲಿ ಆಡಿಯೆನ್ಸ್‌ನ ಗಮನದಲ್ಲಿಟ್ಟುಕೊಂಡು ಮಂಜು ಸ್ವರಾಜ್ ಈ ಕಥೆ ಡಿಸೈನ್ ಮಾಡಿದ್ದು, ಕಳೆದ ವರ್ಷವೇ ಅಮೂಲ್ಯಗೆ ಕಥೆ ಹೇಳಿ ಒಪ್ಪಿಸಿದ್ದಾರೆ. ಈ ಚಿತ್ರದಲ್ಲಿ ಅಮೂಲ್ಯಗೆ ಸಾಕಷ್ಟು ಶೇಡ್‌ಗಳಿರಲಿದ್ದು, ಈಗ ಬಿಟ್ಟಿರೋದು ಒಂದು ಶೇಡ್ ಎನ್ನಲಾಗಿದೆ. ಒಂದಷ್ಟು ಸರ್‌ಪ್ರೈಸ್‌ಗಳು ಇರೋ ಈ ಚಿತ್ರ, ಇದೇ ಅಕ್ಟೋಬರ್ 2ರಿಂದ ಶೂಟಿಂಗ್ ಕಿಕ್‌ಸ್ಟಾರ್ಟ್ ಮಾಡ್ತಿದೆ.

ಮಾಜಿ ಕಾರ್ಪೊರೇಟರ್ ಆಗಿದ್ದಂತಹ ಮಾವ ರಾಮಚಂದ್ರ ಹಾಗೂ ಬಿಜೆಪಿ ಲೀಡರ್ ಆಗಿರೋ ಪತಿ ಜಗದೀಶ್ ಇಬ್ಬರೂ ಅಮೂಲ್ಯ ಸಿನಿಮಾ ಕನಸಿಗೆ ಎಂದೂ ಅಡ್ಡಗಾಲು ಹಾಕಿರಲಿಲ್ಲ. ಆದ್ರೆ ಅಮೂಲ್ಯ ಅವರೇ ಒಂದು ಬ್ರೇಕ್ ಪಡೆದಿದ್ರು. ಇದೀಗ ಅವಳಿ ಮಕ್ಕಳ ತಾಯಿ ಆಗಿದ್ದುಕೊಂಡು, ಅವ್ರ ಲಾಲನೆ, ಪಾಲನೆ ಜೊತೆ ಜೊತೆಗೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿ ಆಗ್ತಿರೋದು ನಿಜಕ್ಕೂ ಇಂಟರೆಸ್ಟಿಂಗ್.





