ತಮಿಳುನಾಡು ರಾಜಕೀಯದಲ್ಲಿ ದಳಪತಿ ವಿಜಯ್ ಮತ್ತು ರಾಜ್ಯಪಾಲರ ನಡುವಿನ ಭೇಟಿ ನಂತರ ಉದ್ಭವಿಸಿರುವ ವಿವಾದಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್ ತೀವ್ರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ನಟ ಪ್ರಕಾಶ್ ರಾಜ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಗವರ್ನರ್ ಅವರ ನಡೆಯನ್ನು ತೀವ್ರವಾಗಿ ಖಂಡಿಸಿ ಟ್ವೀಟ್ ಮಾಡಿದ್ದಾರೆ.
ಪ್ರಕಾಶ್ ರಾಜ್ ಪ್ರತಿಕ್ರಿಯೆ:
- “ಗವರ್ನರ್ ಅವರ ವರ್ತನೆ ಅಸಹ್ಯವಾಗಿದೆ. ಇದು ಸ್ವೀಕಾರಾರ್ಹವಲ್ಲ.”
- “ಇದು ಅಸಂವಿಧಾನಿಕ. ನಮ್ಮಲ್ಲಿ ಭಿನ್ನಾಭಿಪ್ರಾಯ ಇರಬಹುದು.”
- “ಆದರೆ ವಿಜಯ್ ಅವರಿಗೆ ಜನಾದೇಶ ಸಿಕ್ಕಿದೆ. ಅವರಿಗೆ ಹಕ್ಕು ಮಂಡನೆಗೆ ಅವಕಾಶ ನೀಡಬೇಕು.”
ಪ್ರಕಾಶ್ ರಾಜ್ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಮುಖ್ಯಸ್ಥ ದಳಪತಿ ವಿಜಯ್ ಅವರ ಪರವಾಗಿ ಸ್ಪಷ್ಟವಾಗಿ ಬ್ಯಾಟಿಂಗ್ ಮಾಡಿದ್ದಾರೆ.
This Governor s behaviour is Disgusting .. unacceptable and unconstitutional. We may have differences … but Vijay has got the mandate . He should be allowed to claim his right on the floor of the house. #justasking https://t.co/T72CVedXhJ
— Prakash Raj (@prakashraaj) May 7, 2026
ಗವರ್ನರ್ ನಡೆ ಏನು?
ರಾಜ್ಯಪಾಲರು ದಳಪತಿ ವಿಜಯ್ ಅವರು ಸಲ್ಲಿಸಿದ ಬೆಂಬಲ ಪತ್ರಗಳನ್ನು ಸಾಕೆಂದು ತಿರಸ್ಕರಿಸಿ, 118 ಶಾಸಕರ ಸಹಿ ಬೇಕು ಎಂದು ಆಗ್ರಹಿಸಿದ್ದಾರೆ. ಸಂಖ್ಯಾಬಲ ಕೊರತೆ ಎಂದು ಹೇಳಿ ವಿಜಯ್ ಅವರನ್ನು ವಾಪಸ್ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಈ ನಡೆಯನ್ನು ಪ್ರಕಾಶ್ ರಾಜ್ ಸೇರಿದಂತೆ ಹಲವು ವಿಜಯ್ ಬೆಂಬಲಿಗರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಈ ವಿವಾದವು ತಮಿಳುನಾಡು ರಾಜಕೀಯವನ್ನು ಮತ್ತಷ್ಟು ಕಾವು ಹೆಚ್ಚಿಸಿದೆ. ದಳಪತಿ ವಿಜಯ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸುತ್ತಿದ್ದರೆ, ರಾಜ್ಯಪಾಲರು ಕಠಿಣ ನಿಲುವು ತಳೆದಿದ್ದಾರೆ.





