ಬೆಂಗಳೂರು, ನವೆಂಬರ್ 20, 2025: ಬಿಗ್ ಬಾಸ್ ಕನ್ನಡ ಸೀಸನ್ 12 ಈಗಾಗಲೇ ವಿವಾದಗಳ ಕೇಂದ್ರಬಿಂದುವಾಗಿದೆ. ಇದೀಗ ಮತ್ತೊಂದು ಸಂಕಷ್ಟಕ್ಕೆ ಬಿಗ್‌ಬಾಸ್ ಮನೆ ಗುರಿಯಾಗಿದೆ. ಸಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರ ಅವರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಈ ದೂರಿನಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರ ಹೆಸರೂ ಉಲ್ಲೇಖಗೊಂಡಿದ್ದು, ಶೋವನ್ನು ನಿಲ್ಲಿಸುವಂತೆ, ಸ್ಪರ್ಧಿಯರ ಅಶ್ವಿನಿ ಗೌಡ ಮತ್ತು ರಿಷಾ ಗೌಡ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಡ ಹೇಳಲಾಗಿದೆ. ರಿಷಾ ಗೌಡ ಗಿಲ್ಲಿ ಮೇಲೆ ಹಲ್ಲೆ ಮಾಡಿದ್ದರು ಜೊತೆಗೆ ಅಶ್ವಿನಿ ಗೌಡ ಜಾತಿ ನಿಂದನೆ ಮಾಡಿದ್ದರು ಎಂಬ ಆರೋಪದ ಮೇಲೆ ಈ ದೂರು ನೀಡಲಾಗಿದೆ.
ಇಂದು (ನವೆಂಬರ್ 20, 2025) ಬೆಳಗ್ಗೆ ಸಂಧ್ಯಾ ಪವಿತ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ ದೂರು ಸಲ್ಲಿಸಿದರು. ಈ ದೂರಿನಲ್ಲಿ ಬಿಗ್ ಬಾಸ್ ತಂಡ, ನಿರೂಪಕ ಸುದೀಪ್ ಸೇರಿದಂತೆ ಎಲ್ಲರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಸ್ಪರ್ಧಿ ಅಶ್ವಿನಿ ಗೌಡ ಮತ್ತು ರಿಷಾ ಗೌಡ, ರಕ್ಷಿತಾ ಶೆಟ್ಟಿ ಅವರ ಬಗ್ಗೆ ಜಾತಿಯಾಧಾರಿತ ಹೇಳಿಕೆಗಳನ್ನು ನೀಡಿದ್ದಾರೆ. ಇದು ಸಾಮಾಜಿಕ ನ್ಯಾಯದ ವಿರುದ್ಧವಾಗಿದ್ದು, ಶೋ ಇಂತಹ ವಿಷಯಗಳನ್ನು ಪ್ರೋತ್ಸಾಹಿಸುವುದು ತಪ್ಪು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಂಧ್ಯಾ ಪವಿತ್ರ ದೂರು ಸಲ್ಲಿಸುವ ಸಂದರ್ಭದಲ್ಲಿ ಕೆಲವು ಸಾಮಾಜಿಕ ಸಂಘಟನೆಗಳ ಮುಖಂಡರು ಸಹ ಭಾಗವಹಿಸಿದ್ದರು. ಬಿಗ್ ಬಾಸ್ ಶೋ ಜಾತಿ ನಿಂದನೆ ಮಾಡುವುದನ್ನ ಪ್ರೋತ್ಸಾಹಿಸುತ್ತದೆ, ಅದನ್ನು ನಿಲ್ಲಿಸಬೇಕು. ಸುದೀಪ್ ಅವರು ನಿರೂಪಕರಾಗಿ ಇಂತಹ ವಿಷಯಗಳನ್ನು ತಡೆಯಬೇಕಿತ್ತು. ಇದು ಮಹಿಳೆಯರ ಮೇಲಿನ ಹಲ್ಲೆಯಂತಹದ್ದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೀಸನ್ 12 ಆರಂಭದಿಂದಲೇ ಅಶ್ವಿನಿ ಗೌಡ ಅವರ ವಿವಾದಾತ್ಮಕ ಹೇಳಿಕೆಗಳು ಚರ್ಚೆಗೆ ಒಳಗಾಗಿವೆ. ಇನ್ನೊಂದು ಘಟನೆಯಲ್ಲಿ, ರಕ್ಷಿತಾ ಶೆಟ್ಟಿ ಅವರ ವಿರುದ್ಧ “ಸೆಡೆ” ಎಂಬ ಅಪಮಾನಕಾರಿ ಪದವನ್ನು ಬಳಸಿ, ಕಾಕ್‌ರೋಚ್ ಸುಧಿ ಮತ್ತು ಅಶ್ವಿನಿ ಗೌಡ ಅವರು ಟೀಕಿಸಲ್ಪಟ್ಟಿದ್ದರು. ನಿರೂಪಕ ಸುದೀಪ್ ಅವರು ವೀಕೆಂಡ್ ಎಪಿಸೋಡ್‌ನಲ್ಲಿ ಇದನ್ನು ಖಂಡಿಸಿ, ಇಂತಹ ಪದಗಳನ್ನು ಬಳಸಬೇಡಿ, ಮೌನವಾಗಿರಿ ಎಂದು ಎಚ್ಚರಿಕೆ ನೀಡಿದ್ದರು. ಇದರ ಜೊತೆಗೆ, ಚಪ್ಪಲ್ ಆರೋಪ (ರಕ್ಷಿತಾ ಚಪ್ಪಲ್ ತೋರಿಸಿದ್ದಾರೆ ಎಂಬುದು) ಸಹ ವಿವಾದಕ್ಕೆ ಕಾರಣವಾಯಿತು.
ಹಿಂದೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಟುಡಿಯೊ ಮೇಲೆ ಕ್ರಮ ತೆಗೆದುಕೊಂಡಿತ್ತು. ಇದೀಗ ಮಹಿಳಾ ಆಯೋಗದ ಹಸ್ತಕ್ಷೇಪದಿಂದ ಶೋ ಇನ್ನಷ್ಟು ಗೊಂದಲಕ್ಕೆ ಸಿಲುಕಬಹುದು. ನಿರೂಪಕ ಸುದೀಪ್ ಅವರು ಈ ಬಗ್ಗೆ ಏನು ಹೇಳುತ್ತಾರೆ ? ಸ್ಪರ್ಧಿಯರ ಮೇಲೆ ಏನು ಕ್ರಮ ? ಇದೆಲ್ಲಾ ವೀಕೆಂಡ್ ಎಪಿಸೋಡ್‌ನಲ್ಲಿ ತಿಳಿಯುವ ಸಾಧ್ಯತೆ ಇದೆ.





