ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಈಗ ಅತ್ಯಂತ ಹಾಟ್ ಟಾಪಿಕ್ ಏನೆಂದರೆ ಅಶ್ವಿನಿ ಗೌಡ vs ಗಿಲ್ಲಿ ನಟ. ಇಬ್ಬರ ನಡುವಿನ ಜಿದ್ದಾಜಿದ್ದಿ ಈ ವಾರ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ತಾರಕಕ್ಕೇರಿದೆ. ಏಕವಚನದ ವಿಚಾರದಲ್ಲೇ ಅತ್ಯಂತ ಸೆನ್ಸಿಟಿವ್ ಆಗಿರುವ ಅಶ್ವಿನಿ ಗೌಡ ಅವರ ದೌರ್ಬಲ್ಯವನ್ನೇ ಆಯುಧವಾಗಿಟ್ಟುಕೊಂಡು ಗಿಲ್ಲಿ ನಟ ಮಾಸ್ಟರ್ ಸ್ಟ್ರೋಕ್ ಆಡಿದ್ದಾರೆ.
ಟಾಸ್ಕ್ ಹೀಗಿತ್ತು ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ಮತ್ತು ಅಭಿಷೇಕ್ ಫೈನಲ್ ರೌಂಡ್‌ಗೆ ಬಂದಿದ್ದರು. ನಿಗದಿತ 12 ನಿಮಿಷಗಳನ್ನು ಮನಸ್ಸಿನಲ್ಲೇ ಎಣಿಸಿಕೊಂಡು ಕಣ್ಣುಮುಚ್ಚಿ ಕುಳಿತಿರಬೇಕು. ಇನ್ನುಳಿದ ಸ್ಪರ್ಧಿಗಳು ಅವರ ಗಮನ ಚೆಲ್ಲಾಪಿಲ್ಲಿಯಾಗಿಸಬೇಕು. ಅಶ್ವಿನಿ ಗೌಡ ಅವರನ್ನು ಡಿಸ್ಟರ್ಬ್ ಮಾಡಲು ಗಿಲ್ಲಿ ನಟ ಮತ್ತು ಕಾವ್ಯ ಮುಂದಾದರು. ಆದರೆ ಗಿಲ್ಲಿ ಆಯ್ಕೆ ಮಾಡಿದ ಆಯುಧ ಬೇರೆಯಲ್ಲ ಅಶ್ವಿನಿಗೆ ಅತ್ಯಂತ ನೋವು ತರುವ “ಏಕವಚನ”
“ನೀನು… ನೀನೇನು ಮಾಡ್ತೀಯಾ… ನಿನಗೆ ಏನು ಗೊತ್ತು… ನೀನೊಬ್ಬಳೇ ಇಲ್ಲೇ ಇದ್ದೀಯಾ…” ಅಂತ ಗಿಲ್ಲಿ ನಟ ಏಕವಚನದಲ್ಲೇ ಸತತ ಟಾಂಗ್ ಕೊಡ್ತಾ ಇದ್ದರು. ಇದನ್ನು ಕೇಳಿ ಅಶ್ವಿನಿ ಗೌಡ ಸಂಪೂರ್ಣ ಗಮನ ಕಳೆದುಕೊಂಡರು. 12 ನಿಮಿಷಕ್ಕೆ ಬದಲಾಗಿ 29 ನಿಮಿಷ 10 ಸೆಕೆಂಡ್ ಆಗುವವರೆಗೂ ಕುಳಿತಿದ್ದರು. ಇನ್ನು ಅಭಿಷೇಕ್ 11 ನಿಮಿಷ 49 ಸೆಕೆಂಡ್‌ಗೆ ಸರಿಯಾಗಿ ಬೆಲ್ ಒತ್ತಿ ಕ್ಯಾಪ್ಟನ್ ಆಗಿ ಆಯ್ಕೆಯಾದರು.
ಏಕವಚನದ ದೊಡ್ಡ ಇತಿಹಾಸ ಅಶ್ವಿನಿ ಗೌಡ ಅವರಿಗೆ ಏಕವಚನದಲ್ಲಿ ಮಾತನಾಡಿದರೆ ತುಂಬಾ ನೋವು. ಈಗಾಗಲೇ ರಘು, ಗಿಲ್ಲಿ ನಟ ಸೇರಿ ಹಲವರಿಂದ ಏಕವಚನ ಕೇಳಿ ಜಗಳವಾಡಿದ್ದರು. ಕನ್ಫೆಷನ್ ರೂಮ್‌ನಲ್ಲಿ ಬಿಗ್ ಬಾಸ್ ಎದುರು ಕಣ್ಣೀರೇ ಹಾಕಿದ್ದರು. “ಗೌರವ ಕೊಡಬೇಕು. ಏಕವಚನ ಬಳಸಿದ್ರೆ ತೇಜೋವಧೆ ಆಗ್ತಿದೆ. ಗಿಲ್ಲಿಯಿಂದ ವಾತಾವರಣ ಹದಗೆಟ್ಟಿದೆ” ಅಂತ ದೂರು ಹಾಕಿದ್ದರು. ಆದ್ರೆ ಗಿಲ್ಲಿ ನಟ ಇದೇ ದೌರ್ಬಲ್ಯವನ್ನು ಟಾಸ್ಕ್‌ನಲ್ಲಿ ಸೂಪರ್ ಆಯುಧವನ್ನಾಗಿ ಮಾಡಿ ಅಶ್ವಿನಿಯನ್ನೇ ಸೋಲಿಸಿದರು.
ಗಿಲ್ಲಿಯ ತಂತ್ರಕ್ಕೆ ಫಿದಾ ಆದ ಜನ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟನ ಈ ತಂತ್ರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. “ಗಿಲ್ಲಿ ಮಾಸ್”, “ಅಶ್ವಿನಿಗೆ ತಕ್ಕ ಪಾಠ”, “ಏಕವಚನದ ರಿವೆಂಜ್ ಸೂಪರ್” ಅಂತ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೊಂದೆಡೆ ಅಶ್ವಿನಿ ಫ್ಯಾನ್ಸ್ “ಅನ್ಯಾಯ ಆಯ್ತು. ಗಿಲ್ಲಿ ಲೋ ಲೆವೆಲ್” ಅಂತ ಕೋಪ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ, ಈ ವಾರ ಬಿಗ್ ಬಾಸ್ ಮನೆಯಲ್ಲಿ “ಏಕವಚನ” ದೊಡ್ಡ ಆಯುಧವಾಗಿ ಮಾರ್ಪಟ್ಟಿದೆ. ಗಿಲ್ಲಿ ನಟನ ಈ ಸ್ಮಾರ್ಟ್ ಗೇಮ್‌ಗೆ ಫ್ಯಾನ್ಸ್ ಗ್ರೇಟ್ ಎನ್ನುತ್ತಿದ್ದಾರೆ.





