ರೀಸೆಂಟ್ ಟಿ20 ವರ್ಲ್ಡ್ಕಪ್ ಇಂಡಿಯಾ ಮುಡಿಗೇರಿಸಿಕೊಳ್ಳೋಕೆ ಕಾರಣಕರ್ತರಾದ ಆಟಗಾರರಲ್ಲಿ ತಿಲಕ್ ವರ್ಮಾ ಕೂಡ ಒಬ್ರು. ಇದೀಗ ತಿಲಕ್ ಸಿನಿಮಾ ಶೂಟಿಂಗ್ ಸೆಟ್ವೊಂದಕ್ಕೆ ಭೇಟಿ ನೀಡಿದ್ದು, ಯಾರೂ ಊಹಿಸದಂತಹ ಭರ್ಜರಿ ಗಿಫ್ಟ್ ತನ್ನದಾಗಿಸಿಕೊಂಡಿದ್ದಾರೆ.
ತಿಲಕ್ ವರ್ಮಾ.. ಇತ್ತೀಚೆಗೆ ನಮ್ಮ ಭಾರತ ಟಿ20 ವರ್ಲ್ಡ್ ಕಪ್ ಗೆಲ್ಲೋಕೆ ಕಾರಣರಾದ ಇಂಡಿಯನ್ ಸ್ಟಾರ್ ಕ್ರಿಕೆಟರ್. ಮೂಲತಃ ಆಂಧ್ರದವರಾದ ತಿಲಕ್, ಚಾಂಪಿಯನ್ ಆಗಿ ಬಂದ ಬಳಿಕ ಬಹುನಿರೀಕ್ಷಿತ ಪೆದ್ದಿ ಸಿನಿಮಾದ ಶೂಟಿಂಗ್ ಅಡ್ಡಾಗೆ ವಿಸಿಟ್ ಮಾಡಿದ್ದಾರೆ. ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾಗಾಗಿ ಅವ್ರ ಫ್ಯಾನ್ ಆಗಿ ಸೆಟ್ಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿಗೆ ತೆರಳಿದಾಗ ಖುದ್ದು ಚರಣ್ ಅವರೇ ತಿಲಕ್ರನ್ನ ಬಹಳ ಪ್ರೀತಿಯಿಂದ ಬರಮಾಡಿಕೊಂಡಿದ್ದು ವಿಶೇಷ.
ವರ್ಲ್ಡ್ಕಪ್ ಚಾಂಪಿಯನ್ ತಿಲಕ್ ಕೈಗೆ ಚರಣ್ ಪೆದ್ದಿ ಬ್ಯಾಟ್
ಪೆದ್ದಿ ಸೆಟ್ನಲ್ಲಿ ಇಂಡಿಯನ್ ಸ್ಟಾರ್ ಕ್ರಿಕೆಟರ್ ತಿಲಕ್ ಮಿಂಚು
ಅಲ್ಲದೆ, ಪುಷ್ಪಗುಚ್ಚ ನೀಡಿ, ಪೆದ್ದಿ ಸಿನಿಮಾದಲ್ಲಿ ರಾಮ್ ಚರಣ್ ಬಳಸಿರೋ ದೇಸಿ ಕ್ರಿಕೆಟ್ ಬ್ಯಾಟ್ನ ತಿಲಕ್ ವರ್ಮಾಗೆ ಗಿಫ್ಟ್ ಆಗಿ ನೀಡಲಾಯಿತು. ಅದರ ಮೇಲೆ ಗ್ಲೋಬಲ್ ಸ್ಟಾರ್ ಚರಣ್ ಆಟೋಗ್ರಾಫ್ ಕೂಡ ನೀಡಿರೋದು ಮತ್ತೊಂದು ಹೈಲೈಟ್. ಇದೇ ವೇಳೆ ಮಾತನಾಡಿದ ಚರಣ್, ನಾವೆಲ್ಲಾ ಮ್ಯಾಚ್ನ ಸೆಟ್ನಲ್ಲಿ ಎಲ್ಲರೂ ಒಟ್ಟಿಗೆ ನೋಡ್ತಿದ್ವಿ. ವಿನ್ ಆಗ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ವಿ ಅಂತ ಆ ಕ್ಷಣಗಳನ್ನ ಮೆಲುಕು ಹಾಕಿದ್ರು. ಆ ಅಭಿಮಾನಕ್ಕೆ ಧನ್ಯವಾದ ತಿಳಿಸಿದ ತಿಲಕ್, ಇಂತಹ ಪ್ರೀತಿ ಪಡೆದ ನಾನೇ ಧನ್ಯ ಎಂದರು.
ಅಂದಹಾಗೆ ಇದೇ ಏಪ್ರಿಲ್ 30ಕ್ಕೆ ಪೆದ್ದಿ ಸಿನಿಮಾ ವರ್ಲ್ಡ್ ವೈಡ್ ತೆರೆಗಪ್ಪಳಿಸುತ್ತಿದ್ದು, ಸುಕುಮಾರ್ ಶಿಷ್ಯ, ಉಪ್ಪೆನ ಡೈರೆಕ್ಟರ್ ಬುಚ್ಚಿಬಾಬು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಗೇಮ್ ಚೇಂಜರ್ ಬಳಿಕ ಚರಣ್ ನಟಿಸ್ತಿರೋ ಈ ಸಿನಿಮಾ, ಟಾಲಿವುಡ್ ಇಂಡಸ್ಟ್ರಿಗೆ ಬಿಗ್ಗೆಸ್ಟ್ ಗೇಮ್ ಚೇಂಜ್ ಮೂವಿ ಆಗುವ ಭರವಸೆ ಇದೆ. ಯಾಕಂದ್ರೆ ಟೀಸರ್ ಹಾಗೂ ಸಾಂಗ್ಸ್ ಬಿಗ್ ಹಿಟ್ ಆಗಿದ್ದು, ರಂಗಸ್ಥಳಂ ರೀತಿ ಹಳ್ಳಿ ಸೊಗಡಿನಿಂದ ಹಚ್ಚ ಹಸಿರಾಗಿದೆ.
ಚರಣ್ ಈ ಕ್ರಿಕೆಟ್ ಬ್ಯಾಟ್ ಪೆದ್ದಿಗೆ ಸೆಂಟರ್ ಆಫ್ ಅಟ್ರ್ಯಾಕ್ಷನ್
ಏಪ್ರಿಲ್ 30ಕ್ಕೆ ಗ್ಲೋಬಲ್ ಸ್ಟಾರ್ ಬಿಗ್ಸ್ಕ್ರೀನ್ ಎಂಟ್ರಿ ಕನ್ಫರ್ಮ್
ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಈ ಚಿತ್ರದಲ್ಲಿ ನಾಯಕನಟಿಯಾಗಿ ಬಣ್ಣ ಹಚ್ಚಿದ್ದು, ಚಿಕಿರಿ ಸಾಂಗ್ ಸಂಚಲನ ಮೂಡಿಸಿದೆ. ನಮ್ಮ ಶಿವರಾಜ್ಕುಮಾರ್ ಕೂಡ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದು, ಸುಮಾರು 20 ನಿಮಿಷಗಳ ಕಾಲ ನೋಡುಗರನ್ನ ಎಂಟರ್ಟೈನ್ ಮಾಡ್ತಾರಂತೆ.
ಸಿನಿಮಾದ ಶೂಟಿಂಗ್ ಬಹುತೇಕ ಕೊನೆಯ ಹಂತ ತಲುಪಿದ್ದು, ಸದ್ಯದಲ್ಲೇ ಮತ್ತೊಂದು ಬಿಗ್ ಅಪ್ಡೇಟ್ ಕೂಡ ನೀಡಲಿದೆ ಟೀಂ.





