ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳ ಎಲಿಮಿನೇಷನ್‌ಗಳು ಪ್ರೇಕ್ಷಕರ ಮನಸ್ಸಿಗೆ ಭಾರೀ ಕುತೂಹಲ ಮೂಡಿತ್ತು. ಫೈನಲ್ ಟಾಪ್ 6ರಲ್ಲಿ ಸ್ಥಾನ ಪಡೆದಿದ್ದ ಕಾವ್ಯ ಶೈವ ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಗಿಲ್ಲಿಯ ಜೊತೆಗೆ ಫಿನಾಲೆವರೆಗೆ ಸಾಗ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಇದು ಭಾರೀ ನಿರಾಸೆಯಾಗಿದೆ.
ಕಾವ್ಯ ಶೈವ ಬಿಗ್ ಬಾಸ್ ಸೀಸನ್ 12ಕ್ಕೆ ಜಂಟಿಯಾಗಿ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿ. ಗಿಲ್ಲಿಯ ಜೋಡಿಯಾಗಿ ಅವರು ದೊಡ್ಮನೆ ಪ್ರವೇಶಿಸಿದ ಕ್ಷಣದಿಂದಲೇ ಈ ಜೋಡಿಯ ಬಾಂಡಿಂಗ್ ಪ್ರೇಕ್ಷಕರ ಗಮನ ಸೆಳೆಯಿತು. “ಗಿಲ್ಲಿಯಿಂದ ಕಾವ್ಯ” ಎನ್ನುವ ಮಾತು ಮನೆಮಾತಾಗಿ, ಇವರಿಬ್ಬರ ಸ್ನೇಹ ಈ ಸೀಸನ್‌ನ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿ ಹೊರಹೊಮ್ಮಿತು.
ಬಿಗ್ ಬಾಸ್ ಮನೆಯೊಳಗೆ ಮೊದಲ ವಾರದಿಂದಲೇ ಕಾವ್ಯ ತಮ್ಮ ಆಟದಿಂದ ಗುರುತು ಮೂಡಿಸಿದ್ದರು. ಟಾಸ್ಕ್‌ಗಳಲ್ಲಿ ಚುರುಕಾಗಿ ಭಾಗವಹಿಸುವುದು, ಮನೆಯ ಸದಸ್ಯರೊಂದಿಗೆ ಬೆರೆಯುವುದು, ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುವುದು ಇವೆಲ್ಲವು ಅವರ ಪ್ಲಸ್ ಪಾಯಿಂಟ್‌ಗಳಾಗಿದ್ದವು. ಯಾವುದೇ ಟಾಸ್ಕ್ ಆಗಿರಲಿ, ಕಾವ್ಯ ತಮ್ಮ ಶಕ್ತಿಯ ಮಟ್ಟಿಗೆ ನಿಷ್ಠೆಯಿಂದ ಪ್ರಯತ್ನಿಸುತ್ತಿದ್ದರು.
ಗಿಲ್ಲಿ ಅವರೊಂದಿಗೆ ಇದ್ದ ಬಾಂಡಿಂಗ್ ಕೆಲವೊಮ್ಮೆ ಕಾವ್ಯ ಆಟಕ್ಕೆ ಬೆನ್ನೆಲುಬಾಗಿತ್ತು. ಗಿಲ್ಲಿ “ಕಾವು, ಕಾವು” ಎಂದು ತಮಾಷೆ ಮಾಡ್ತಾ ಇದ್ದ ದೃಶ್ಯಗಳು ಪ್ರೇಕ್ಷಕರಿಗೆ ಇಷ್ಟವಾಗಿದ್ದವು. ಇಬ್ಬರ ಸ್ನೇಹ ನೈಜವಾಗಿದೆ ಅನ್ನುವ ಭಾವನೆ ಜನರಲ್ಲಿ ಮೂಡಿತ್ತು.
ಬಾಂಡಿಂಗ್‌ನಲ್ಲೇ ಬಿರುಕು
ಆದರೆ ದಿನಗಳು ಸಾಗಿದಂತೆ, ಕಾವ್ಯ ಮತ್ತು ಗಿಲ್ಲಿ ನಡುವಿನ ಸಂಬಂಧದಲ್ಲಿ ಸಣ್ಣ ಬಿರುಕು ಕಾಣಿಸಿಕೊಳ್ಳತೊಡಗಿತು. ನಾಮಿನೇಷನ್ ಸಂದರ್ಭಗಳಲ್ಲಿ, ಕಠಿಣ ಸಮಯದಲ್ಲಿ ಕಾವ್ಯ ಗಿಲ್ಲಿ ಹೆಸರನ್ನು ಹೇಳಿದ್ದ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಕೆಲವೊಮ್ಮೆ ಗಿಲ್ಲಿಯ ಸ್ನೇಹವೇ ಕಾವ್ಯಗೆ ಇರಿಟೇಶನ್ ಆಗುತ್ತಿರುವಂತೆ ಕಾಣಿಸಿತು.
ಇನ್ನೂ ಫ್ಯಾಮಿಲಿ ವೀಕ್‌ನಲ್ಲಿ ನಡೆದ ಘಟನೆಯು ಕಾವ್ಯ ಮೇಲೆ ಗಂಭೀರ ಪರಿಣಾಮ ಬೀರಿತ್ತು. ತಮ್ಮನ ಮಾತುಗಳು, ಮನೆಯವರ ಅಭಿಪ್ರಾಯ ಇವೆಲ್ಲವು ಕಾವ್ಯ ಮನಸ್ಥಿತಿಗೆ ಹೊಡೆತ ನೀಡಿದವು. ಆ ಬಳಿಕ ಅವರು ಗಿಲ್ಲಿಯೊಂದಿಗೆ ಮತ್ತೆ ಕ್ಲೋಸ್ ಆದರು ಎಂಬ ಅಭಿಪ್ರಾಯವೂ ಕೆಲವರಲ್ಲಿತ್ತು.
ಕಾವ್ಯ ಅವರ ಆಟದ ದೊಡ್ಡ ಪ್ಲಸ್ ಪಾಯಿಂಟ್ ಅಂದರೆ, ಅವರು ಯಾರನ್ನೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿರಲಿಲ್ಲ. ಟಾಸ್ಕ್‌ಗಳು ಆಗಲಿ, ನಾಮಿನೇಷನ್‌ಗಳು ಆಗಲಿ ತಮ್ಮ ನಿರ್ಧಾರಗಳನ್ನು ಅಚ್ಚುಕಟ್ಟಾಗಿ, ತಾಳ್ಮೆಯಿಂದ ತೆಗೆದುಕೊಳ್ಳುತ್ತಿದ್ದರು.
ಆದರೆ ಫೈನಲ್ ಹಂತಕ್ಕೆ ಬರುವಾಗ, ಗಿಲ್ಲಿ, ಅಶ್ವಿನಿ, ರಕ್ಷಿತಾ ಶೆಟ್ಟಿ ಮೊದಲಾದವರು ಬಲವಾದ ಸ್ಪರ್ಧಿಗಳಾಗಿ ಉಳಿದರು. ತೀವ್ರ ಸ್ಪರ್ಧೆಯ ನಡುವೆ ಕಾವ್ಯ ಅವರ ವಿನ್ನರ್ ಕನಸು ಕೈ ತಪ್ಪಿತು.
ಬಿಗ್ ಬಾಸ್ ಮನೆಯಿಂದ ಹೊರಬಂದರೂ, ಕಾವ್ಯ ಶೈವ ಅವರ ಜರ್ನಿ ಪ್ರೇಕ್ಷಕರ ಮನದಲ್ಲಿ ಉಳಿಯುವಂತಹದ್ದು. ಸ್ಟ್ರಾಂಗ್ ಆಟ, ನೈಜ ಭಾವನೆಗಳು, ಸ್ನೇಹ ಮತ್ತು ಸಂಘರ್ಷ ಎಲ್ಲವನ್ನೂ ಸಮತೋಲನದಿಂದ ಎದುರಿಸಿದ ಸ್ಪರ್ಧಿಯಾಗಿ ಕಾವ್ಯ ಗುರುತಿಸಿಕೊಂಡಿದ್ದಾರೆ. ವಿನ್ನರ್ ಆಗೋ ಕನಸು ಭಗ್ನವಾದರೂ, ಫ್ಯಾನ್ಸ್ ಮನ ಗೆದ್ದ ಕಾವು ಎಂದರೆ ತಪ್ಪಾಗಲಾರದು.





