ಇಂದು ಡಿಸೆಂಬರ್ 03 ಬುಧವಾರ. ಬುಧ ಗ್ರಹದ ಪ್ರಭಾವ ಪ್ರಬಲವಾಗಿರುವ ಈ ದಿನ ನಿಮ್ಮ ರಾಶಿಗೆ ಏನು ತಂದೊಡ್ಡಿದೆ? ಧನಲಾಭವೋ, ಕೆಲಸದಲ್ಲಿ ಏರಿಕೆಯೋ, ಪ್ರೇಮದಲ್ಲಿ ಸಿಹಿ ಸಮಯವೋ ಅಥವಾ ಸ್ವಲ್ಪ ಎಚ್ಚರಿಕೆ ಬೇಕೋ? ಎಲ್ಲಾ ೧೨ ರಾಶಿಗಳ ಇಂದಿನ ವಿಶೇಷ ಭವಿಷ್ಯ ಇಲ್ಲಿದೆ.
ಮೇಷ ರಾಶಿ
ಇಂದು ನಿಮ್ಮ ಬುದ್ಧಿ ಚುರುಕಾಗಿರುತ್ತದೆ. ಉನ್ನತ ಅಧಿಕಾರಿಗಳು, ನಾಯಕರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ. ಕೆಲಸ-ಕಾರ್ಯಗಳಲ್ಲಿ ಎಲ್ಲೆಡೆ ಅನುಕೂಲ. ಆದರೆ ವಿದ್ಯಾರ್ಥಿಗಳು ಸ್ವಲ್ಪ ಹೊರೆ ಎದುರಿಸಬೇಕಾಗಬಹುದು. ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ, ಎಲ್ಲವೂ ಸುಗಮವಾಗುತ್ತದೆ.
ವೃಷಭ ರಾಶಿ
ಕೆಲಸದಲ್ಲಿ ಸಣ್ಣ-ಪುಟ್ಟ ಅನುಕೂಲಗಳು. ಮಹಿಳೆಯರಿಗೆ ಸ್ವಲ್ಪ ಅಲೆದಾಟ ಹೆಚ್ಚು. ಆದರೆ ದಾಂಪತ್ಯ ಜೀವನ ಸಕ್ಕರೆ ಸಿಹಿಯಾಗಿರುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಿರಬಹುದು, ಆದರೆ ಗಾಬರಿಯಾಗಬೇಡಿ. ದುರ್ಗಾ ಕವಚ ಪಠಿಸಿ ದಿನ ಪ್ರಾರಂಭಿಸಿ.
ಮಿಥುನ ರಾಶಿ
ಇಂದು ನಿಮ್ಮ ರಾಶಿಗೆ ಸೂಪರ್ ಡೇ. ಹಣಕಾಸು ಸ್ಥಿತಿ ಬಲಗೊಳ್ಳುತ್ತದೆ, ವ್ಯಾಪಾರಿಗಳಿಗೆ ಲಾಭ. ಮಾತಿನಲ್ಲಿ ಮಾಂತ್ರಿಕ ಶಕ್ತಿ. ವಿದ್ಯಾರ್ಥಿಗಳಿಗೆ ಓದು ಚೆನ್ನಾಗಿ ಜರಗುತ್ತದೆ. ಪ್ರೇಮಿಗಳ ನಡುವೆ ಸಾಮರಸ್ಯ. ಕೆಲಸದಲ್ಲಿ ಒಳ್ಳೆಯ ಬೆಳವಣಿಗೆ ಕಾಲಿಗೆ ಸಣ್ಣ ಏಟು ಬರಬಹುದು.
ಕರ್ಕಾಟಕ ರಾಶಿ
ಕೆಲಸದಲ್ಲಿ ಜಾಣತನ ಮೆರೆಯುತ್ತೀರಿ. ಮಹಿಳೆಯರಿಗೆ ಅಧಿಕಾರ ಬಲ. ವಿದೇಶಿ ವಹಿವಾಟು ಅಥವಾ ಸಂಪರ್ಕಗಳಿಂದ ಒಳ್ಳೆಯ ಸುದ್ದಿ. ಸ್ನೇಹಿತರು-ಬಾಂಧವರು ಸಂಪೂರ್ಣ ಸಹಕಾರ. ಮನೆಯಲ್ಲಿ ಪತಿ-ಪತ್ನಿಯರ ನಡುವೆ ಸಿಹಿ ಮಾತು.
ಸಿಂಹ ರಾಶಿ
ಕೆಲವು ಕೆಲಸಗಳಲ್ಲಿ ಸ್ವಲ್ಪ ತೊಂದರೆ ಬರಬಹುದು, ಆದರೆ ಒಟ್ಟಾರೆ ಒಳ್ಳೆಯ ಕಾರ್ಯಗಳೇ ನಡೆಯುತ್ತವೆ. ದೇಗುಲ ದರ್ಶನ, ಧಾರ್ಮಿಕ ಕಾರ್ಯಕ್ರಮಕ್ಕೆ ಒಳ್ಳೆಯ ದಿನ. ಪ್ರೇಮಿಗಳ ನಡುವೆ ಸಾಮರಸ್ಯ. ಗಣಪತಿ ಪ್ರಾರ್ಥನೆಯಿಂದ ಎಲ್ಲ ಅಡೆತಡೆಗಳು ದೂರವಾಗುತ್ತವೆ.
ಕನ್ಯಾ ರಾಶಿ
ಕೆಲಸ-ವ್ಯಾಪಾರದಲ್ಲಿ ಧನಲಾಭ. ಆದರೆ ತಂದೆ-ಮಕ್ಕಳ ನಡುವೆ ಸ್ವಲ್ಪ ಮನಸ್ತಾಪ ಸಾಧ್ಯ. ಮಹಿಳೆಯರಿಗೆ ಮನೆಯಲ್ಲಿ ಸಣ್ಣ ದುಃಖದ ವಾತಾವರಣ. ಸ್ನೇಹಿತರು-ಬಾಂಧವರು ಸಂಪೂರ್ಣ ಬೆಂಬಲ.
ತುಲಾ ರಾಶಿ
ಕೆಲಸದಲ್ಲಿ ಅನುಕೂಲ, ವ್ಯಾಪಾರದಲ್ಲಿ ಲಾಭ. ದಾಂಪತ್ಯ ಸುಖ ಸೀಮೆಯಲ್ಲೇ ಇದೆ. ಆದರೆ ಸಣ್ಣ ವಸ್ತು ಕಳೆದುಕೊಳ್ಳುವ ಯೋಗ.
ವೃಶ್ಚಿಕ ರಾಶಿ
ಕೆಲಸದಲ್ಲಿ ಪ್ರಗತಿ. ಆದರೆ ದೇಹಕ್ಕೆ ಸಣ್ಣ ಪೆಟ್ಟು ಬರಬಹುದು. ಪತಿ-ಪತ್ನಿಯರ ನಡುವೆ ಸ್ವಲ್ಪ ತಿಳಿವಳಿಕೆ ಕೊರತೆ. ಮಹಿಳೆಯರಿಗೆ ಶತ್ರುಗಳ ಕಾಟ. ದುರ್ಗಾ ದೇವಿಯನ್ನು ಪ್ರಾರ್ಥಿಸಿ.
ಧನು ರಾಶಿ
ಹೆಚ್ಚು ಶ್ರಮ ಪಟ್ಟರೆ ಅದಕ್ಕೆ ತಕ್ಕ ಲಾಭ. ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ. ಶತ್ರುಗಳಿಂದ ಸ್ವಲ್ಪ ತೊಂದರೆ. ಆದರೆ ಚುರುಕು ಬುದ್ಧಿ ನಿಮ್ಮನ್ನು ರಕ್ಷಿಸುತ್ತದೆ. ಮಹಿಳೆಯರು ತಮ್ಮ ಪ್ರತಿಭೆ ಮೆರೆಯುತ್ತಾರೆ. ಗುರುವಿಗೆ ಅಭಿಷೇಕ ಮಾಡಿಸಿ.
ಮಕರ ರಾಶಿ
ಕೆಲಸ-ಕಾರ್ಯಗಳಲ್ಲಿ ಅನುಕೂಲ. ಮನೆಯಲ್ಲಿ ಸಾಮರಸ್ಯ. ರೈತರಿಗೆ ಒಳ್ಳೆಯ ಲಾಭ. ಬಾಂಧವ್ಯ-ಮಿತ್ರರ ಒಡನಾಟ ಹೆಚ್ಚು. ಆದರೆ ಹೊಟ್ಟೆ ಸಂಬಂಧಿ ತೊಂದರೆ ಬರಬಹುದು. ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ.
ಕುಂಭ ರಾಶಿ
ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ಮಹಿಳೆಯರಿಗೆ ಅನುಕೂಲ. ಪ್ರಯಾಣದಲ್ಲಿ ಸ್ವಲ್ಪ ತೊಂದರೆ. ರಸ್ತೆ, ಮಾಲ್‌ಗಳಲ್ಲಿ ಎಚ್ಚರಿಕೆ. ಗ್ರಾಮ ದೇವರ ದರ್ಶನ ಮಾಡಿ.
ಮೀನ ರಾಶಿ
ಕೆಲಸದಲ್ಲಿ ಅನುಕೂಲ, ಮಾತಿನಲ್ಲಿ ಬಲ. ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ. ಆದರೆ ಸ್ನೇಹಿತರಿಂದ ಸ್ವಲ್ಪ ಅಸಮಾಧಾನ. ಭಯದ ವಾತಾವರಣ ತೊಳಗಿಸಲು ಆಂಜನೇಯ ಪ್ರಾರ್ಥನೆ ಮಾಡಿ.





